ಭಾರತದಲ್ಲಿ ತಯಾರಾದ ಹೊಸ ನಿಸ್ಸಾನ್ ಮ್ಯಾಗ್ನೈಟ್‌ಗೆ ಜಿಎನ್‌ಸಿಎಪಿ 5-ಸ್ಟಾರ್ ಸುರಕ್ಷತಾ ರೇಟಿಂಗ್

Upayuktha
0

ಸುರಕ್ಷತೆಯಲ್ಲಿ ಹೊಸ ಮಾನದಂಡ ಹಾಕಿಕೊಟ್ಟ ನಿಸ್ಸಾನ್ ಮ್ಯಾಗ್ನೈಟ್

 




ಮಂಗಳೂರು, 25 ಜುಲೈ 2025: ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಭಾರತದಲ್ಲಿ ತಯಾರಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ ಗೆ ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಮ್ (ಜಿಎನ್‌ಸಿಎಪಿ) ಅಡಿಯಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ ದೊರಕಿದೆ.

 

ಚೆನ್ನೈ ಘಟಕದಲ್ಲಿ ತಯಾರಾಗುವ ಹೊಸ ನಿಸ್ಸಾನ್ ಮ್ಯಾಗ್ನೈಟ್ ಅನ್ನು 65ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದ್ದು, ಬಲಭಾಗದ ಡ್ರೈವ್ ಮತ್ತು ಎಡಭಾಗದ ಡ್ರೈವ್ ಎರಡೂ ಮಾದರಿಯ ಕಾರುಗಳು ಲಭ್ಯವಿದೆ. ಪ್ರಸ್ತುತ ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾಗುವ ಹೊಸ ನಿಸ್ಸಾನ್ ಮ್ಯಾಗ್ನೈಟ್ (ಬಲಭಾಗದ ಡ್ರೈವ್) ಅನ್ನು ಜಿಎನ್‌ಸಿಎಪಿ ಪರೀಕ್ಷಿಸಿದ್ದು, ವಯಸ್ಕರ ಸುರಕ್ಷತೆಯಲ್ಲಿ ಪರಿಪೂರ್ಣ 5-ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಗೆ 3-ಸ್ಟಾರ್ ರೇಟಿಂಗ್ ನೀಡಿದೆ. ಒಟ್ಟಾರೆಯಾಗಿ ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಗಳಿಸಿದೆ.


ಹೊಸ ನಿಸ್ಸಾನ್ ಮ್ಯಾಗ್ನೈಟ್ ವಯಸ್ಕರ ರಕ್ಷಣೆ, ಮಕ್ಕಳ ಸುರಕ್ಷತೆ ಮತ್ತು ಸೇಫ್ಟಿ ಅಸಿಸ್ಟ್ ಫೀಚರ್ ಗಳ ಕಠಿಣ ಮೌಲ್ಯಮಾಪನಕ್ಕೆ ಒಳಗಾಗಿದ್ದು, ಈ ವಾಹನವು ಎಲ್ಲಾ ವಿಭಾಗಗಳಲ್ಲಿ ಅಸಾಧಾರಣ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ಇದರ ರಚನೆಯ ಗುಣಮಟ್ಟ, ಅತ್ಯಾಧುನಿಕ ಸುರಕ್ಷತಾ ಫೀಚರ್ ಗಳು ಮತ್ತು ಚಾಲಕರು ಹಾಗೂ ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವ ಆಕರ್ಷಕ ವಿನ್ಯಾಸ ಎಲ್ಲವೂ ಮೆಚ್ಚುಗೆ ಪಡೆದಿವೆ. 


2024ರ ಅಕ್ಟೋಬರ್ ನಲ್ಲಿ ಬಿಡುಗಡೆಯಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ 40ಕ್ಕೂ ಹೆಚ್ಚು ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರಲ್ಲಿ 6 ಏರ್‌ಬ್ಯಾಗ್‌ಗಳು, ಶೇ.67 ಹೈ ಟೆನ್ಸೈಲ್ ಸ್ಟ್ರೆಂಗ್ತ್ ಸ್ಟೀಲ್ (>440ಎಂಪಿಎ) ಒಳಗೊಂಡ ದೃಢವಾದ ದೇಹ ರಚನೆ, ಎಬಿಎಸ್ + ಇಬಿಡಿ, ಇ ಎಸ್ ಸಿ, ಟಿಸಿಎಸ್, ಎಚ್ಎಸ್ಎ, ಬ್ರೇಕ್ ಅಸಿಸ್ಟ್, ಟಿಪಿಎಂಎಸ್ ಮುಂತಾದ ವೈಶಿಷ್ಟ್ಯಗಳು ಸೇರಿವೆ.


ಗ್ಲೋಬಲ್ ಎನ್‌ಸಿಎಪಿ ನ ಕ್ರ್ಯಾಶ್ ಟೆಸ್ಟ್ ನಲ್ಲಿ ಎಲ್ಲಾ ಮಾದರಿಗಳ ಮುಂಭಾಗ ಮತ್ತು ಪಕ್ಕದ ಭಾಗಗಳು ಎಷ್ಟು ರಕ್ಷಣೆ ಒದಗಿಸಬಲ್ಲವು ಎಂಬ ಮೌಲ್ಯಮಾಪನ ಮಾಡಲಾಗುತ್ತದೆ. ಜೊತೆಗೆ ಇ ಎಸ್ ಸಿ ಪರೀಕ್ಷೆ ಕೂಡ ಮಾಡಲಾಗುತ್ತದೆ. ಅತ್ಯಧಿಕ ಸ್ಟಾರ್ ರೇಟಿಂಗ್‌ ಗಳನ್ನು ಗಳಿಸುವ ವಾಹನಗಳಿಗೆ ಪಾದಚಾರಿ ರಕ್ಷಣೆ ಮತ್ತು ಸೈಡ್ ಪೋಲ್ ಇಂಪ್ಯಾಕ್ಟ್ ಪ್ರೊಟೆಕ್ಷ್ ಮೌಲ್ಯಮಾಪನ ನಡೆಸುವುದು ಅತ್ಯಗತ್ಯ.(**)


ಈ ಕುರಿತು ಮಾತನಾಡಿದ ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸೌರಭ್ ವತ್ಸ ಅವರು, “ಭಾರತದಲ್ಲಿ ತಯಾರಾದ ಹೊಸ ನಿಸ್ಸಾನ್ ಮ್ಯಾಗ್ನೈಟ್‌ಗೆ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿರುವುದಕ್ಕೆ ನಾವು ಸಂತೋಷ ಹೊಂದಿದ್ದೇವೆ. ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಮತ್ತು ಇದು ನಮ್ಮ ಗ್ರಾಹಕರಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ತಾಂತ್ರಿಕವಾಗಿ ಸುಧಾರಿತ ವಾಹನಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ನಮ್ಮ ಒನ್ ಕಾರ್, ಒನ್ ವರ್ಲ್ಡ್ ತಂತ್ರದ ಪ್ರಕಾರ ಈ ಹೊಸ ನಿಸ್ಸಾನ್ ಮ್ಯಾಗೈನ್ಟ್ ಕಾರು ದೇಶ ಮತ್ತು ವಿದೇಶಗಳಿಗೆ ತಲುಪುತ್ತಿದೆ” ಎಂದು ಹೇಳಿದರು.


ಹೊಸ ನಿಸ್ಸಾನ್ ಮ್ಯಾಗ್ನೈಟ್ ಹಲವು ಏರ್‌ ಬ್ಯಾಗ್‌ಗಳು, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ), ವೆಹಿಕಲ್ ಡೈನಾಮಿಕ್ ಕಂಟ್ರೋಲ್ ಮತ್ತು ಇತರೆ ಸುರಕ್ಷತಾ ಫೀಚರ್ ಗಳನ್ನು ಒಳಗೊಂಡ ಸಮಗ್ರ ಸುರಕ್ಷತಾ ಫೀಚರ್ ಗಳನ್ನು ಹೊಂದಿದ್ದು, ಅತ್ಯುತ್ತಮ ರಕ್ಷಣೆಯನ್ನು ಒದಗಿಸುತ್ತದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಮತ್ತು ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್‌ ಸೇರಿದಂತೆ 40+ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದು ವಿಶೇಷವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top