ಮಂಗಳೂರು: "ತುಳುವನ್ನು ಆಡುಭಾಷೆಯನ್ನಾಗಿಸಿಕೊಂಡು, ಬಳಕೆ ಮಾಡಿದಾಗ ಮಾತ್ರ ಅದು ಮುಂದಿನ ತಲೆಮಾರಿಗೆ ತುಳುವಿನ ಅಂದ ಚೆಂದ ಅರ್ಥವಾಗಲು ಸಾಧ್ಯ. ಅಳಿದೇ ಹೋಗುವ ಬಳಕೆಯಾಗದೆ ಇರುವ ಶಬ್ದಗಳಿಗೆ ಬೆಲೆ ಬಂದು ಪ್ರಭೆಯಿಂದ ಬೆಳಗಬೇಕಾದರೆ ಇಂತಹ ಸಂಘಟನೆಗಳಿಂದ ಮಾತ್ರ ಸಾಧ್ಯ. ದಿ.ದಾಮೋದರ ನಿಸರ್ಗರ ಕನಸನ್ನು ನಿಜವಾಗಿಸುವ ಪ್ರಯತ್ನದಲ್ಲಿ ಈ ತುಳುಕೂಟ ಹೋರಾಡುತ್ತಿದೆ. ತುಳುವಿನ ವಿಷಯಕ್ಕೆ ಬಂದಾಗ ನಾವೆಲ್ಲರೂ ಕೈಜೋಡಿಸೋಣ. ಈ ವಿಷಯದಲ್ಲಿ ನನ್ನ ಸಹಿತ ಪ್ರತಿಯೋರ್ವನೂ ಹೋರಾಡಲೇಬೇಕು" ಎಂದು ಗಡಿಕಾರ ಗೋಳಿದಡಿ ಗುತ್ತು ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿಯವರು ತುಳುವರಿಗೆ ಕರೆ ನೀಡಿದರು.
ಅವರು ಬಲ್ಲಾಳ್ ಭಾಗ್‌ನ ಪತ್ತು ಮುಡಿ ಸಭಾಭವನದಲ್ಲಿ ತುಳುಕೂಟದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸುಮನಾ ರೆಸಿಡೆನ್ಸಿಯ ಮ್ಹಾಲಕಿ ಹಾಗೂ ಮಹಿಳಾ ಮುಂದಾಳು ಶ್ರೀಮತಿ ಸುಮಲತಾ ಎನ್. ಸುವರ್ಣರು" ಇಂದು ತುಳುಕೂಟವನ್ನು ಮುನ್ನಡೆಸುವಲ್ಲಿ ಹೇಮಾ ದಾಮೋದರ ನಿಸರ್ಗರು ಹೊಣೆ ಹೊತ್ತು ಮುನ್ನಡೆಸುತ್ತಿದ್ದಾರೆ. ಆಟಿ ತಿಂಗಳಲ್ಲಿ ನಡೆವ ಈ ಕಾರ್ಯಕ್ರಮ ತುಳುವಿನ ಸೊಗಸನ್ನು ವೃದ್ಧಿಸಿದೆ ಬಂಗಾರ ಪಿಂಗಾರ ಪುಸ್ತಕ ಒಂದು ದಾಖಲೆಯಾಗಿದೆ. ಇಂತಹ ಸಾಧನೆಗಳನ್ನು ಇನ್ನು ಇನ್ನೂ ಹೇರಳವಾಗಿ ಈ ಕೂಟ ನಡೆಸಲಿ" ಎಂದರು.
ರಾಜ್ಯ ಕಸಾಪದ ಮಾಜಿ ರಾಜ್ಯಾಧ್ಯಕ್ಷರಾದ ಡಾ.ಹರಿಕೃಷ್ಣ ಪುನರೂರು ರವರು ಸಿರಿ ಕಳಸದಿಂದ "ಬಂಗಾರ ಪಿಂಗಾರ" ಪುಸ್ತಕ ಬಿಡುಗಡೆ ಮಾಡಿದರು. ಖ್ಯಾತ ಸಾಹಿತಿ ಮುದ್ದು ಮಾಡುಬೆಳ್ಳೆಯವರನ್ನು ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಆರ್. ಸನ್ಮಾನಿಸಿದರು.
ಹಿರಿಯರಾದ ಎ.ಸಿ ಭಂಡಾರಿ ಸಂಸ್ಥೆಗೆ ಶುಭ ಹಾರೈಸಿದರು. ಕದ್ರಿ ನಾಗೇಶ್ ದೇವಾಡಿಗ ಪ್ರಾರ್ಥಿಸಿದರು. ಉಪಾಧ್ಯಕ್ಷ ರೊ.ಜೆ.ವಿ.ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಬಿ.ಡಿ.ನಾರಾಯಣರು ಸನ್ಮಾನ ಪತ್ರ ವಾಚಿಸಿದರು. ಮಮತಾ ಪ್ರವೀಣ್ ಕಾಮಾಕ್ಷಿ ಸುಭಾಸ್, ಭಾಸ್ಕರ ಕುಲಾಲ್, ರಮೇಶ್ ಕುಲಾಲ್, ಬಾಯಾರು, ಪಿ.ಎ ಪೂಜಾರಿ, ವಾಮನ್, ಮಧುಸೂದನ, ಎ, ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ