ಮಂಗಳೂರು: "ನಾವು ನಮ್ಮ ಜೀವನವನ್ನು ಪಾವನಗೊಳಿಸಲು, ಸಮಸ್ಯೆಗಳಿಂದ ಪರಿಹಾರ ಹೊಂದಲು ಭಾಗವತ ಪ್ರವಚನವೇ ಪ್ರಮುಖವಾದದ್ದು. ಶ್ರವಣವೇ ಕರ್ಣರಸಾಯನ, ಇವುಗಳಲ್ಲಿ ಯಾವುದನ್ನು ಆಯ್ದರೂ ನಾವು ಪರಮ ಸುಖಿಗಳಾಗಿರಲು ಖಂಡಿತಾ ಸಾಧ್ಯವಿದೆ. ಅದನ್ನು ಪಾಲಿಸಲು ಪ್ರಯತ್ನಿಸೋಣ. ಜೀವನದ ಚರಮ ಲಕ್ಷ್ಯವನ್ನು ಸುಲಭವಾಗಿ ಸಾಧಿಸೋಣ" ಎಂದು ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಹೇಳಿದರು.
ಅವರು ಕೋಡಿಕಲ್‌ನ ಶ್ರೀ ಶ್ರೀಕುರು ಅಂಬಾರಾಜ ರಾಜೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾಗವತ ಪ್ರವಚನ ನೀಡುತ್ತಾ ಮಾತನಾಡಿದರು.
ದೇವಳದ ಆಡಳಿತ ಪ್ರಧಾನ ಅರ್ಚಕ ಪೇಜಾವರ ರವೀಶ್ ರಾವ್ ಸ್ವಾಮಿಗಳನ್ನು ಪದ್ಧತಿಯಂತೆ ಬರಮಾಡಿಕೊಂಡರು. ಆಡಳಿತ ಮೊಕ್ತೇಸರ ಪಿ ಮಹಾಬಲ ಚೌಟ ಪೂಜ್ಯರನ್ನು ಸ್ವಾಗತಿಸಿ, ಗೌರವಿಸಿದರು. ದೇವಳದ ಪ್ರಭಾಕರ್, ಮಣ್ಣಗುಡ್ಡ ವಿಹಿಂಪ ನ ಅಧ್ಯಕ್ಷ ಲೋಕೇಶ್ ಗುರಿಕಂಡ, ಪ್ರಭಾಕರ್ ರಾವ್ ಪೇಜಾವರ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿ, ಧನ್ಯವಾದವಿತ್ತರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ