ಉಜಿರೆ: ಹಾಸ್ಟೆಲ್ ಎಂಬುವುದು ಭೌತಿಕ ಕಟ್ಟಡವಲ್ಲ, ಇದು ಎರಡನೇ ಮನೆಯೆಂದೇ ಹೇಳಬಹುದು ಎಂದು ಎಸ್ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಸೌಮ್ಯ ಬಿ.ಪಿ ಅಭಿಪ್ರಾಯಪಟ್ಟರು.
ಉಜಿರೆಯ ಎಸ್ಡಿಎಂ ಕಾಲೇಜಿನ ಧೀಮಹಿ ಮತ್ತು ಧೀಮಂತ್ ವಿದ್ಯಾರ್ಥಿ ನಿಲಯಗಳ ಸಹಯೋಗದಲ್ಲಿ 'ವಿಗಮ 2025' ಎಂಬ ಬೀಳ್ಕೊಡುಗೆ ಸಮಾರಂಭವನ್ನು ದಿವ್ಯಾಹ್ನ ಮೆಸ್ನಲ್ಲಿ ಶನಿವಾರದಂದು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳನ್ನು ಕಂಡಾಗ ತನ್ನ ಹಾಸ್ಟೆಲ್ ಜೀವನವನ್ನು ನೆನೆದು, ಹಾಸ್ಟೆಲ್ನಲ್ಲಿ ನಡೆಯುವ ಚಟುವಟಿಕೆಗಳು ಯಾವಾಗಲೂ ನೆನಪಲ್ಲಿ ಇರುತ್ತದೆ. ಯಾವುದೇ ವಿಭಾಗದಲ್ಲೂ ಚಟುವಟಿಕೆಗಳು ಆಯೋಜಿಸಿದ್ದರೂ, ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳು ಭಾಗವಹಿಸುವ ಪ್ರಮಾಣ ಅತೀ ಹೆಚ್ಚಿರುತ್ತದೆ. ಹಾಸ್ಟೆಲ್ ಎಂಬುದು ವಿದ್ಯಾರ್ಥಿಗಳಿಗೆ ಶಿಕ್ಷಣ, ನೀತಿಯ ಜೊತೆಜೊತೆಗೆ ನಿಜವಾದ ಜೀವನದ ಮೌಲ್ಯಗಳನ್ನು ತಿಳಿಸಿಕೊಡುತ್ತದೆ ಎಂದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಸಹನಾ ಕೆ ಮಾತಾಡಿ, ತಮ್ಮ ಹಾಸ್ಟೆಲ್ ಜೀವನದ ಸಿಹಿ ನೆನಪುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಹಾಸ್ಟೆಲ್ ಮನೆಯ ಭಾವನೆಯನ್ನು ಕೊಡುತ್ತದೆ. ಇಲ್ಲಿ ಕಳೆದ ಪ್ರತಿಯೊಂದು ಕ್ಷಣವು ನಮ್ಮೊಡನೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದ್ವಿತೀಯ ವರ್ಷದ ಎಂಸಿಜೆ ವಿದ್ಯಾರ್ಥಿ ವಿನಯ್ ಮುಂಗ್ರಾಣಿ ರವರ ನಿರ್ದೇಶನದಲ್ಲಿ ತಯಾರಾದ ಒಂದು ಕಿರು ಚಿತ್ರವನ್ನು 'ವಿಗಮ 2025' ಎಂಬ ವಿದಾಯ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಈ ಕಿರುಚಿತ್ರ "ಧೂಮಪಾನ ಹಾಗೂ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ" ಎಂಬ ಗಂಭೀರ ಸಂದೇಶವನ್ನು ನೀಡುತ್ತದೆ.
ಕಾರ್ಯಕ್ರಮದಲ್ಲಿ ಧೀಮಂತ್ ವಸತಿಯ ವಾರ್ಡನ್ ಚರಣ್, ಧೀಮಹಿ ಹಾಸ್ಟೆಲ್ನ ವಾರ್ಡನ್ ಪ್ರೀತ ಹಾಗೂ ದಿವ್ಯಾಹ್ನ ಮೆಸ್ನ ಮ್ಯಾನೇಜರ್ ರಾಘವೇಂದ್ರರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ವಿಷ್ಣು ಮತ್ತು ಸಂಜನಾ ಕೆ.ಜೆ. ನಿರೂಪಿಸಿದರು. ವಿದ್ಯಾರ್ಥಿ ಲೋಹಿತ್ ವಂದಿಸಿದರು.
ವರದಿ: ಪೂರ್ಣಿಮ ಎಚ್ ಎಂ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ