ಉಜಿರೆ: ಎಸ್‌ಡಿಎಂ PU ಕಾಲೇಜಿನ NSS ಸ್ವಯಂ ಸೇವಕರಿಂದ ಜಾಗೃತಿ ಜಾಥಾ

Upayuktha
0


ಉಜಿರೆ: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂ ಸೇವಕರಿಂದ ಜಾಗೃತಿ ಜಾಥಾ ಕಾಲೇಜಿನಿಂದ ಉಜಿರೆ ವೃತ್ತದ ವರೆಗೆ ನಡೆಯಿತು. ಜಾಥಾ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ರವರು "ದುಶ್ಚಟಗಳಿಂದ ಅದೆಷ್ಟೋ ಜನರ ಬದುಕು ಹಾಳಾಗುತಿದೆ. ಎನ್‌ಎಸ್‌ಎಸ್ ಸ್ವಯಂ ಸೇವಕರ ಜಾಗೃತಿ ಮೂಡಿಸುವ ಈ ಕಾರ್ಯದ ಮೂಲಕ ತಂಬಾಕು ರಹಿತ ಸಮಾಜ ನಿರ್ಮಿಸಲು ಸಹಕಾರಿ" ಎಂದು ಹೇಳಿದರು. 


ಎನ್‌ಎಸ್‌ಎಸ್ ನಿಕಟಪೂರ್ವ ಸಹ ಯೋಜನಾಧಿಕಾರಿಗಳಾದ ಪದ್ಮಶ್ರೀ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿಜಯಲಕ್ಷ್ಮಿ, ಯೋಜನಾಧಿಕಾರಿಗಳಾದ ವಿಶ್ವನಾಥ್ ಎಸ್. ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top