ತೆಂಕನಿಡಿಯೂರು ಸರಕಾರಿ ಕಾಲೇಜು- ಮಣಿಪಾಲ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಜತೆ ಒಡಂಬಡಿಕೆ

Upayuktha
0


ತೆಂಕನಿಡಿಯೂರು: ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ ಶಿಕ್ಷಣವನ್ನು ನೀಡುವುದಕ್ಕಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಡಾ. ಟಿ.ಎಂ.ಪೈ ಫೌಂಡೇಶನ್‍ನ ಅಂಗ ಸಂಸ್ಥೆಯಾದ ಮಣಿಪಾಲ್ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್, ಮಣಿಪಾಲ ಇದರೊಂದಿಗೆ ಒಡಂಬಡಿಕೆ (ಎಂ.ಓ.ಯು) ಮಾಡಿಕೊಳ್ಳಲಾಯಿತು.


ಕೌಶಲಾಧಾರಿತ ಕೋರ್ಸುಗಳ ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ, ಉದ್ಯೋಗ ಕೌಶಲವನ್ನು ವೃದ್ಧಿಸುವುದು, ವಿದ್ಯಾರ್ಥಿಗಳಿಗೆ ಇಂಟರ್ನ್‍ಶಿಪ್, ವಿವಿಧ ಶೈಕ್ಷಣಿಕ ಮತ್ತು ವೃತ್ತಿಪರ ಕಾರ್ಯಾಗಾರಗಳು, ಕೈಗಾರಿಕಾ ಭೇಟಿ, ಕೈಗಾರಿಕಾ ವಾತಾವರಣ ಪರಿಚಯಿಸುವಿಕೆ, ಎರಡು ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳ ವಿನಿಮಯ ಮತ್ತು ಪದವಿ ಜೊತೆಗೆ ಕೌಶಲ ಕೋರ್ಸುಗಳ ಶಿಕ್ಷಣವನ್ನು ನೀಡುವುದು ಈ ಒಡಂಬಡಿಕೆಯ ಉದ್ದೇಶಗಳಾಗಿವೆ. 


ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವಕರ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯ ಸಮಯದಲ್ಲಿ ಕೈಗಾರಿಕಾ ಪೂರಕ ಮತ್ತು ಉದ್ಯೋಗ ದೊರಕುವಂತಹ ಕೌಶಲಾಧಾರಿತ ತರಬೇತಿಯನ್ನು ನೀಡಿ ಪದವಿ ಪೂರೈಸುತ್ತಿದ್ದಂತೆ ಅವರನ್ನು ಉದ್ಯೋಗಕ್ಕೆ ಅಣಿಗೊಳಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್‍ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.  ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್ ಸರ್ವಿಸಸ್ ವಲಯಗಳಲ್ಲಿ ಉದ್ಯೋಗಗಿಟ್ಟಿಸಲು ಹೊಸ ಬಿ.ಕಾಂ. ಕೋರ್ಸ್ – ಎ.ಇ.ಡಿ.ಪಿ. ಯನ್ನು ಕಾಲೇಜಿನಲ್ಲಿ ಈ ವರ್ಷ ಪ್ರಾರಂಭಿಸಿದ್ದು, ಕಲಿಕೆಯ ಜೊತೆಗೆ ಗಳಿಕೆಯನ್ನು ಮಾಡಲು ಅಪ್ರೆಂಟೈಸ್‍ಶಿಪ್‍ನ ಅವಕಾಶ ಕಲ್ಪಿಸಲಾಗಿದೆ ಎಂದರು. 


ಮಣಿಪಾಲ್ ಸ್ಕಿಲ್ ಡೆವಲಪ್‍ಮೆಂಟ್‍ನ ಚೇರ್ಮನ್ ಆದ ಡಾ. ಸುರ್ಜಿತ್ ಸಿಂಗ್ ಪಾಬ್ಲಾ ಈ ಸಂದರ್ಭದಲ್ಲಿ ಮಾತನಾಡುತ್ತಾ, ಪದವಿ ಜೊತೆಗೆ ಉದ್ಯೋಗ ಕೌಶಲಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತೀರಾ ಅಗತ್ಯ.  ಭಾಷಾ ಕೌಶಲ, ಸಂವಹನ, ಕಂಪ್ಯೂಟರ್ ಪರಿಣತಿ, ವೃತ್ತಿ ಕೌಶಲಗಳು, ನಾಯಕತ್ವ ಕಲೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ತಯಾರಿ ಮತ್ತು ಜ್ಞಾನ, ಸ್ವ-ಉದ್ಯೋಗಕ್ಕೆ ಸಂಬಂಧಿಸಿದ ವಿವಿಧ ಕೋರ್ಸ್‍ಗಳಾದ ಸಿ.ಎನ್.ಸಿ. ಮಶೀನ್ಸ್, ಕ್ಯಾಡ್ ಸೆಂಟರ್, ಫ್ಯಾಶನ್ ಡಿಸೈನ್, ರೊಬೊಟಿಕ್ಸ್, ತ್ರಿಡಿ, ಅನಿಮೇಷನ್ ಟೆಕ್ನಾಲಜಿ, ಆಟೊ ಮೋಟಿವ್ ಸರ್ವೀಸ್, ಇಂಟೀರಿಯರ್ ಡಿಸೈನ್, ಫರ್ನೀಚರ್ ಆಂಡ್ ಪಿಕ್ಸ್‍ಚರ್ಸ್, ಆಟೋಮೇಶನ್, ಎಐ, ಎಂ.ಎಲ್, ಸೈಬರ್ ಸೆಕ್ಯೂರಿಟಿ, ಇವಿ ಟೆಕ್ನಾಲಜಿ, ಬ್ಯೂಟಿ ಆಂಡ್ ವೆಲ್‍ನೆಸ್ ಮುಂತಾದವುಗಳು ಅವಶ್ಯಕವಾಗಿದೆ ಎಂದರು.  


ಎಂ.ಎಸ್.ಡಿ.ಸಿ.ಯ ರಿಜಿಸ್ಟ್ರಾರ್ ಡಾ. ಅಂಜಯ್ಯ ದೇವಿನೇನಿ, ಪ್ರವೇಶ ಮತ್ತು ಸಂಪರ್ಕಾಧಿಕಾರಿ      ಡಾ. ನಾರಾಯಣ ಶೆಣೈ ಕೆ., ತೆಂಕನಿಡಿಯೂರು ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್ ಭಟ್, ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಶಾಂತ ಎನ್, ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು.


ಕಾಲೇಜಿನ ಪ್ಲೇಸ್‍ಮೆಂಟ್ ಆಫೀಸರ್  ದಿನೇಶ್ ಎಂ. ಮತ್ತು ಎಂ.ಎಸ್.ಡಿ.ಸಿ.ಯ ಅನುಷಾ ಎರಡು ಸಂಸ್ಥೆಗಳ ಒಡಂಬಡಿಕೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top