ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

Chandrashekhara Kulamarva
0

ಶಾಲಾ ನಾಯಕನಾಗಿ ಸುಧನ್ವ ಸುದರ್ಶನ್, ನಾಯಕಿಯಾಗಿ ರಕ್ಷಾ ಎಸ್.ಎಸ್.




ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ  ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ 2025-26ನೇ ಸಾಲಿನ ಚುನಾವಣಾ ಪ್ರಕ್ರಿಯೆಯು  ಬುಧವಾರ ನಡೆಯಿತು. ವಿದ್ಯಾರ್ಥಿಗಳ ಮತಗಳ ಆಧಾರದಲ್ಲಿ ಶಾಲಾ ಮಂತ್ರಿಮಂಡಲದ ಸದಸ್ಯರನ್ನು ನೇಮಕ ಮಾಡಲಾಯಿತು.


10ನೇ ತರಗತಿಯ ವಿದ್ಯಾರ್ಥಿ ಸುಧನ್ವ ಸುದರ್ಶನ್ ಶಾಲಾ ನಾಯಕನಾಗಿ, ರಕ್ಷಾ ಎಸ್. ಎಸ್ ಶಾಲಾ ನಾಯಕಿಯಾಗಿ ಆಯ್ಕೆಯಾದರು. ಗೃಹ ಮಂತ್ರಿಯಾಗಿ 9ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್.ಜಿ, ಶಿಸ್ತು ಪಾಲನಾ ಮಂತ್ರಿಯಾಗಿ ವಂಶಿಕಾ ಬಿ. ರೈ, ಕ್ರೀಡಾ ಮಂತ್ರಿಯಾಗಿ ಭಾರ್ಗವ್ ಎಸ್. ರೈ  ಆಯ್ಕೆಯಾದರು. 8ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀನಿಕ್ ಎಸ್. ಆಚಾರ್ಯ  ಶಿಕ್ಷಣ ಮಂತ್ರಿಯಾಗಿ, ಸಾಂಸ್ಕøತಿಕ ಮಂತ್ರಿಯಾಗಿ ಅನ್ವಿತಾ.ಎಸ್, ಸಂವಹನ ಮಂತ್ರಿಯಾಗಿ 7ನೇ ತರಗತಿಯ ವಿದ್ಯಾರ್ಥಿನಿ ಹರ್ಷಲ್ ಡಿ.ರೈ, ಆರೋಗ್ಯ ಮಂತ್ರಿಯಾಗಿ ಸಾನ್ವಿ. ಜಿ ಆಯ್ಕೆಯಾದರೆ ನೀರಾವರಿ ಮಂತ್ರಿಯಾಗಿ ಸುಧನ್ವ ಕೆ. ಆಯ್ಕೆಯಾದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top