ಉಜಿರೆಯ SDM ಕಾಲೇಜಿಗೆ ರಾಷ್ಟ್ರ ಮಟ್ಟದ ವಿಶೇಷ ಮಾನ್ಯತೆ

Upayuktha
0



ಉಜಿರೆ: ರಾಷ್ಟ್ರಮಟ್ಟದ ಪ್ರಸಿದ್ಧ ಹಾಗೂ ಜನಪ್ರಿಯ ನಿಯತಕಾಲಿಕೆಗಳಾದ 'ಇಂಡಿಯಾ ಟುಡೇ' ಹಾಗೂ 'ದಿ ವೀಕ್' ಇತ್ತೀಚೆಗೆ ನಡೆಸಿದ ರಾಷ್ಟ್ರಮಟ್ಟದ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಉಜಿರೆಯ ಶ್ರೀ ಧ.ಮಂ. ಕಾಲೇಜು ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಶ್ರೇಣಿಯೊಂದಿಗೆ ವಿಶೇಷ ಮಾನ್ಯತೆ ಪಡೆದಿದೆ.


ಕಲೆ, ವಿಜ್ಞಾನ, ವಾಣಿಜ್ಯ, ಬಿಸಿಎ, ಬಿಬಿಎ, ಪತ್ರಿಕೋದ್ಯಮ ಹಾಗೂ ಎಂ.ಎಸ್.ಡಬ್ಲ್ಯೂ. ವಿಭಾಗಗಳ ಶೈಕ್ಷಣಿಕ ಸಾಧನೆ, ಚಟುವಟಿಕೆ, ಕಲಿಕಾ ಸೌಲಭ್ಯ, ಪ್ರವೇಶಾತಿ, ನೇಮಕಾತಿ, ಕಲಿಕಾ ಶುಲ್ಕ ಹಾಗೂ ಕಾಲೇಜಿಗೆ ಸಂದ ಪ್ರಶಸ್ತಿ, ಗೌರವ, ಪೋಷಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯಗಳು, ಆಡಳಿತ ನಿರ್ವಹಣಾ ವ್ಯವಸ್ಥೆ ಸೇರಿದಂತೆ ವಿವಿಧ ಪ್ರಮುಖ ಮಾನದಂಡಗಳನ್ನು ಆಧರಿಸಿ ಈ ಎರಡೂ ನಿಯತಕಾಲಿಕೆಗಳು ರಾಷ್ಟ್ರಮಟ್ಟದ ವಿವಿಧ ಕಾಲೇಜುಗಳ ಮೌಲ್ಯಮಾಪನ ಮಾಡಿ ಫಲಿತಾಂಶವನ್ನು ಇತ್ತೀಚೆಗೆ ಪ್ರಕಟಿಸಿದೆ.


'ಇಂಡಿಯಾ ಟುಡೇ' ಸಮೀಕ್ಷೆಯಲ್ಲಿ ಕಾಲೇಜಿನ ಬಿಎ ವಿಭಾಗ 62ನೇ ರ‍್ಯಾಂಕ್ ಗಳಿಸಿದ್ದು, ಬಿಎಸ್‌ಸಿಗೆ 77ನೇ ಸ್ಥಾನ ಲಭಿಸಿದೆ. ಕಾಮರ್ಸ್ ವಿಭಾಗವು 97ನೇ ಸ್ಥಾನದಲ್ಲಿದ್ದು, ಬಿಸಿಎ ವಿಭಾಗವು 30ನೇ ರ‍್ಯಾಂಕ್ ಗಳಿಸಿದೆ. ಬಿಬಿಎ ವಿಭಾಗವು 43ನೇ ಸ್ಥಾನದಲ್ಲಿದ್ದು ಎಂ.ಎಸ್.ಡಬ್ಲ್ಯೂ. ವಿಭಾಗಕ್ಕೆ 27ನೇ ಸ್ಥಾನ ಲಭ್ಯವಾಗಿದೆ. ಪತ್ರಿಕೋದ್ಯಮ ವಿಭಾಗಕ್ಕೆ 22ನೇ ಸ್ಥಾನ ಲಭಿಸಿದ್ದು, ರಾಷ್ಟ್ರಮಟ್ಟದ ಮುಂಚೂಣಿ ಕಾಲೇಜುಗಳ ಪಟ್ಟಿಯಲ್ಲಿ ಪತ್ರಿಕೋದ್ಯಮವು ನಾಲ್ಕನೇ ಸ್ಥಾನ ಹಾಗೂ ಎಂ.ಎಸ್.ಡಬ್ಲ್ಯೂ. ವಿಭಾಗವು ಹತ್ತನೇ ಸ್ಥಾನದ ಅಗ್ರಪಂಕ್ತಿಗೆ ಸೇರಿವೆ.


'ದಿ ವೀಕ್' ನಡೆಸಿದ ಸಮೀಕ್ಷೆಯಲ್ಲೂ ಬಿಎ ವಿಭಾಗಕ್ಕೆ 78ನೇ ಸ್ಥಾನ ಲಭಿಸಿದ್ದು, ಬಿಎಸ್‌ಸಿ ಹಾಗೂ ಬಿಕಾಂಗೆ ತಲಾ 96 ಹಾಗೂ 117ನೇ ಸ್ಥಾನ ಲಭ್ಯವಾಗಿದೆ. ಪತ್ರಿಕೋದ್ಯಮ ವಿಭಾಗಕ್ಕೆ 25ನೇ ಬ್ಯಾಂಕ್ ಪ್ರಾಪ್ತವಾಗಿದೆ. ಕಾಲೇಜಿನ ಈ ಸಾಧನೆಯನ್ನು ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಶ್ಲಾಘಿಸಿದ್ದಾರೆ.


ಹಿಂದಿನ ವರ್ಷಗಳಲ್ಲೂ ಇವೆರಡೂ ನಿಯತಕಾಲಿಕೆಗಳ ಸಮೀಕ್ಷೆಯಲ್ಲಿ ಉಜಿರೆ ಶ್ರೀ ಧ.ಮಂ. ಕಾಲೇಜು ಮೊದಲ 100 ಕಾಲೇಜುಗಳಲ್ಲಿ ರ‍್ಯಾಂಕ್ ಗಳಿಸಿದ್ದು, ಈ ವರ್ಷದ ಮೌಲ್ಯಮಾಪನದಲ್ಲೂ ಗಣನೀಯ ಸಾಧನೆಯೊಂದಿಗೆ ಮನ್ನಣೆ ಪಡೆದಿದೆ ಎಂದು ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top