ಪಾಂಡುರಂಗ ರಾವ್ ಕಂಪ್ಲಿ ದಂಪತಿಗಳಿಗೆ 'ಶ್ರೀ ಹರಿದಾಸ ಸಿಂದೂರ 'ಪ್ರಶಸ್ತಿ ಪ್ರದಾನ

Chandrashekhara Kulamarva
0


ಬೆಂಗಳೂರು:  ಸಾತ್ವಿಕ ಚೇತನ ದಂಪತಿಗಳಾದ ಪಾಂಡುರಂಗ ರಾವ್ ಕಂಪ್ಲಿ ಮತ್ತು ವಿರಜ ಕಂಪ್ಲಿ ರವರಿಗೆ ತಾಯಲೂರು ವಾದಿರಾಜ್ ನೇತೃತ್ವದ “ಶ್ರೀನಿವಾಸ ಉತ್ಸವ ಬಳಗ” ವತಿಯಿಂದ ಬೆಂಗಳೂರಿನ ಶ್ರೀ ಪವಮಾನಪುರ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೆರೆದಿದ್ದ  ಗಣ್ಯಮಾನ್ಯರ ಸಮ್ಮುಖದಲ್ಲಿ 'ಶ್ರೀ ಹರಿದಾಸ ಸಿಂದೂರ 'ಪ್ರಶಸ್ತಿ ಪ್ರದಾನ ಮಾಡಲಾಯಿತು.


ಟ್ರಸ್ಟ್ ನ ವಿಶ್ವಸ್ತರಾದ ಕೆ ಆರ್ ಗುರುರಾಜ ರಾವ್ ಮಾತನಾಡುತ್ತ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲೆಂದೇ ಗುರುತಿಸಲ್ಪಡುವ ಕಲ್ಬುರ್ಗಿಯಲ್ಲಿ ದಾಸಸಾಹಿತ್ಯದ ಮಕರಂದವನ್ನು ಎಲ್ಲೆಡೆ ಸಿಂಚನ ಮಾಡುತ್ತ, ಅವಿನಾಶಿ ಆರ್ಷ ಪರಂಪರೆಯ ಮೂರ್ತರೂಪವಾಗಿ ಹರಿದಾಸ ಸಾಹಿತ್ಯ ನಂದಾದೀಪದ ಸಮುಜ್ವಲನೆಗೆ ದೀಕ್ಷಾಬದ್ಧರಾಗಿದ್ದಾರೆ.  ದಾಸ ಸೌರಭ ಟ್ರಸ್ಟ್ (ರಿ) ಅನ್ನು ಸ್ಥಾಪಿಸಿ, ಈ ಟ್ರಸ್ಟಿನ ಕಾರ್ಯಕಾರಿ ಅಧ್ಯಕ್ಷರಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಪಾಂಡುರಂಗರಾವ್ ಕಂಪ್ಲಿ ಹಾಗೂ ಡಾ|| ಶ್ರೀಮತಿ ವಿರಜಾ ಪಾಂಡುರಂಗ ರಾವ್ ಕಂಪ್ಲಿ ದಂಪತಿಗಳ  “ಸುವರ್ಣ ದಾಂಪತ್ಯ” ದ ಶುಭ ಸಂದರ್ಭದಲ್ಲಿ  ನೀಡುತ್ತಿರುವ  ಗೌರವವಿದಾಗಿದೆ ಎಂದು ನುಡಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top