ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ ನಾವು ಪ್ರಕೃತಿಯ ಒಂದು ಭಾಗವಷ್ಟೇ

Chandrashekhara Kulamarva
0


ಶಿವಮೊಗ್ಗ: ಮಾನಸ ನರ್ಸಿಂಗ್ ಹೋಂ, ಮನಃಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರ ಮತ್ತು ಮನಃಸ್ಪೂರ್ತಿ ವಿಶೇಷ ಶಾಲೆಯ ಮಕ್ಕಳಿಂದ ವಿಶೇಷವಾಗಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.


ಕಂದು ಮಿಶ್ರಿತ ಗುಲಾಬಿ ಬಣ್ಣಗಳಿಂದ ಕೂಡಿದ ಒಳಾಂಗಣ ಗಿಡಗಳನ್ನು ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರು ಮತ್ತು ಸಂಯೋಜಕರೊಂದಿಗೆ ಹೋಗಿ ಮಾನಸ ಸಂಸ್ಥೆಯ ವೈದ್ಯರಿಗೆ ಗಿಡಗಳನ್ನು ನೀಡುವುದರ ಮೂಲಕ ಪರಿಸರ ದಿನಾಚರಣೆಯ ಶುಭಾಶಯಗಳು ಕೋರಿದರು.


ಪರಿಸರ ದಿನಾಚರಣೆ ಹಾಗೂ ಪರಿಸರ ರಕ್ಷಣೆಯ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದ ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡುವುದರ ಮೂಲಕ ಪರಿಸರ ರಕ್ಷಣೆಯ ಬಗ್ಗೆ ಅರಿವನ್ನು ಮೂಡಿಸಿ ವಿಭಿನ್ನ ರೀತಿಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top