ಮುಂಬಯಿ: ಪಂಚಗವ್ಯ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ

Chandrashekhara Kulamarva
0


ಮುಂಬಯಿ: ಆಯುರ್ವೇದ ವ್ಯಾಸಪೀಠ ಕಲ್ಯಾಣ್ ಆಶ್ರಯದಲ್ಲಿ ಜೂ.14 ಮತ್ತು 15ರಂದು ಮುಂಬೈಯ ವಿಲೆ ಪಾರ್ಲೆಯಲ್ಲಿನ ಸನ್ಯಾಸ್ ಆಶ್ರಮ್‌ನಲ್ಲಿ ಗವ್ಯ ಚಿಕಿತ್ಸೆಗೆ ಸಂಬಂಧಿಸಿ ರಾಷ್ಟ್ರೀಯ ವೈದ್ಯಕೀಯ ವಿಚಾರಸಂಕಿರಣವೊಂದು ನಡೆಯಲಿದೆ.


ಪಂಚಗವ್ಯ ಕಾಲಗಣನೆಯ ಮೇಲೆ ಪ್ರಾಯೋಗಿಕ ಮತ್ತು ವೈದ್ಯಕೀಯ ಸಂಶೋಧನೆ, ಔಷಧೀಯ ಮತ್ತು ಮಾರುಕಟ್ಟೆ ಅಧ್ಯಯನ ಕುರಿತಂತೆ ತಜ್ಞರ ಪ್ಯಾನಲ್ ಚರ್ಚೆ ನಡೆಯಲಿದೆ. ಗೋಮಯ, ಗೋಮೂತ್ರ, ತುಪ್ಪ, ಮೊಸರು ಮತ್ತು ಹಾಲು ಒಳಗೊಂಡ ಪಂಚಗವ್ಯ ಅತ್ಯದ್ಭುತ ಔಷಧಯಾಗಿದ್ದು, ಈಗಾಗಲೇ ವಿವಿಧ ತಜ್ಞರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಮೇಲೆ ಅಧ್ಯಯನ ನಡೆಸುತ್ತಿದ್ದಾರೆ.


ಈ ವಿಚಾರ ಸಂಕಿರಣದಲ್ಲಿ ಜಾಮ್‌ನಗರ ವಿಶ್ವ ವಿದ್ಯಾಲಯದ ಮಾಜಿ ಡೀನ್‌ ಡಾ.ಹಿತೇಶ ಜಾನಿ, ಡಾ. ಮಹೇಶ ಠಾಕೂರ್, ಡಾ.ವಿನಯ್ ವೇಲಣ್‌ಕ‌ರ್, ಡಾ.ಕರಿಷ್ಠಾ ನರ್ವಾನಿ, ಡಾ.ವಿರಾಜ್ ಬೋರಿಯಾ, ಡಾ.ಸುಮತಿ ದೋಡ್ಡ, ಡಾ.ವಂದನ್ ಮಹಾಜನ್, ಡಾ.ಸಚಿನ್ ಗಜರೇ, ಡಾ.ಸುರೇಶ್ ಮಹಾದೇವನ್ ಮೊದಲ ದಿನ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಜೂ.15ರಂದು ಬೆಂಗಳೂರಿನ ಖ್ಯಾತ ಪಂಚಗವ್ಯ ಚಿಕಿತ್ಸಾ ತಜ್ಞ ಡಾ.ಡಿ.ಪಿ.ರಮೇಶ್, ಡಾ. ನಂದಿನಿ ಭೋಜರಾಜ್, ಡಾ.ಸುಮಿತಾ ಜೈನ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top