ಶ್ರೀ ಭಾರತಿ ವಿದ್ಯಾಪೀಠ ಮುಜುಂಗಾವಿನಲ್ಲಿ ಸ್ವಾಗತ ಭಾರತಿ

Chandrashekhara Kulamarva
0


ಮುಜುಂಗಾವು: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ 2025-26 ನೇ ಸಾಲಿನ ಪ್ರವೇಶೋತ್ಸವ ಸ್ವಾಗತ ಭಾರತೀ ಕಾರ್ಯಕ್ರಮ ಸೋಮವಾರ ನಡೆಯಿತು. ಎಡನಾಡು- ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ನಟೇಶ ಮದನಗುಳಿ ಅತಿಥಿಗಳಾಗಿ ಆಗಮಿಸಿ ನೂತನ ವಿದ್ಯಾರ್ಥಿಗಳಿಗೆ ಬ್ಯಾಂಕಿನ ವತಿಯಿಂದ ಕಲಿಕೋಪಕರಣಗಳನ್ನು ನೀಡಿ ಸ್ವಾಗತಿಸಿದರು.


ಕಾರ್ಯಕ್ರಮದ ಅಧ್ಯಕ್ಷ ಬಾಲಕೃಷ್ಣ ಶರ್ಮಾ ಅನಂತಪುರ ಇವರು ಮಾತನಾಡುತ್ತಾ, ಭಾರತೀಯ ಸಂಸ್ಕೃತಿ‌ ನಮ್ಮ ಹೆಮ್ಮೆ, ವಿದ್ಯಾರ್ಜನೆಯೊಂದಿಗೆ ಇದು ಕೂಡಾ ನಮ್ಮಲ್ಲಿ ಬೆಳೆಯಬೇಕು ಎಂದರಲ್ಲದೆ ವಿದ್ಯಾಪೀಠ ಶಾಲೆಯು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.


ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ ಶುಭ ಹಾರೈಸಿದರು. ಮುಖ್ಯ ಅಧ್ಯಾಪಕರಾದ ಶ್ಯಾಮ್ ಭಟ್ ದರ್ಬೆ ಮಾರ್ಗ 25ನೇ ವರ್ಷಕ್ಕೆ ಕಾಲಿಟ್ಟ ಈ ವಿದ್ಯಾ ಸಂಸ್ಥೆಯ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯ ಬಗ್ಗೆ ಮತ್ತು  ರಜತವರ್ಷದ ಯೋಜನೆಗಳನ್ನು ವಿಸ್ತರಿಸಿ ಮಾತನಾಡಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಶಿಕ್ಷಕಿ ಸೌಮ್ಯ ಸ್ವಾಗತಿಸಿ, ದೇವಿಕಾ ಮಾತಾಶ್ರೀ ವಂದಿಸಿದರು. ಶಿಕ್ಷಕಿ ಶ್ರೀದೇವಿ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top