ಜೂ. 18-23; ಆಳ್ವಾಸ್ ನಲ್ಲಿ ವೈದೇಹಿ ವಿರಚಿತ ‘ನಾಯಿಮರಿ’ ನಾಟಕದ ಆರು ಪ್ರದರ್ಶನ

Upayuktha
0


ಮೂಡುಬಿದಿರೆ: ಆಳ್ವಾಸ್  ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಆಶ್ರಯದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಅಭಿನಯಿಸುವ, ಖ್ಯಾತ ಲೇಖಕಿ ವೈದೇಹಿ ವಿರಚಿತ ನಾಯಿಮರಿ ನಾಟಕದ ಪ್ರದರ್ಶನವನ್ನು ಜೂನ್ 18 ರಿಂದ 23 ರವರೆಗೆ, ಪ್ರತಿದಿನ ಸಂಜೆ 6.45 ಕ್ಕೆ  ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್‌ನಲ್ಲಿರುವ  ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.


ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ ಈ ನಾಟಕವು ಈಗಾಗಲೇ ಕಳೆದ ಹನ್ನೆರಡು ವರ್ಷಗಳಲ್ಲಿ ರಾಜ್ಯಾದ್ಯಂತ 127 ಪ್ರದರ್ಶನ ಕಂಡಿರುತ್ತದೆ. ಆಳ್ವಾಸ್ ನಲ್ಲಿ ಶಿಕ್ಷಣ ಪಡೆಯಲು ದೇಶದ ನಾನಾ ಕಡೆಗಳಿಂದ ಈ ವರ್ಷ ಹೊಸದಾಗಿ ಬಂದಿರುವ ಮೂರೂವರೆ ಸಾವಿರ ವಿದ್ಯಾರ್ಥಿಗಳು ಹಾಗೂ ಆಸಕ್ತ ಸಾರ್ವಜನಿಕರಿಗಾಗಿ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ.


ಜೀವನ ಪ್ರೀತಿ, ಪರಿಸರ ಕಾಳಜಿ, ಪ್ರಾಣಿಪಕ್ಷಿ ಮೇಲಿನ ಮಮತೆ ಇತ್ಯಾದಿಗಳ ಮೂಲಕ ಶೈಕ್ಷಣಿಕ ಅರಿವು ಮೂಡಿಸುವ ಈ ನಾಯಿಮರಿ ನಾಟಕ , ಕಲಾವಿದರ ಪರಿಪಕ್ವ ಅಭಿನಯ,ಸುಶ್ರಾವ್ಯ ಸಂಗೀತದಿಂದ ಕೂಡಿದ ವಿಶೇಷ ಪ್ರಯೋಗವಾಗಿದ್ದು ಮಕ್ಕಳ ರಂಗಭೂಮಿಯಲ್ಲೇ ಅತ್ಯಂತ ಶ್ರೇಷ್ಠ ಪ್ರಯೋಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ನಾಟಕಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top