ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ವತಿಯಿಂದ ಆಯೋಜನೆ
ಕಾಸರಗೋಡು: ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ವತಿಯಿಂದ ಶತ ಸಂಭ್ರಮ ಹಾಗೂ ನುಡಿನಮನ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಟರಾಜ ವೇದಿಕೆಯಲ್ಲಿ ಭಾನುವಾರ (ಜೂ.8) ನಡೆಯಿತು.
ಈ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು.
ಮಲ್ಲಿಕಾರ್ಜುನ ಗೌಡ ನೇತೃತ್ವದ ಕರ್ನಾಟಕ ಯುವಕ ಮಂಡಳಿ ಸಿಂಧನೂರು ತಾಲೂಕು ರಾಯಚೂರು ಜಿಲ್ಲೆ ಇವರಿಂದ ವಿಶಿಷ್ಟ ಜನಪದ ಕಲೆ ಅನಾವರಣಗೊಂಡಿತು. ಮಿತ್ರ ಸಮಾಜ ಮಹಿಳಾ ಮಂಡಳಿ ಕಬಕ ಇವರಿಂದ ಭಜನಾ ಸೇವೆ ಜರುಗಿತು. ಶ್ರೀನಾಗ ಪಂಚಶ್ರೀ ಕುಣಿತ ಭಜನಾ ತಂಡ ಕಬಕ ಇವರಿಂದ ಕುಣಿತ ಭಜನೆ ನೆರವೇರಿತು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಕಲಾವಿದರಿಗೆ ಸಂಸ್ಥೆ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ಶತ ಸಂಭ್ರಮ ನುಡಿ ನಮನ ಪುಸ್ತಕ ಬಿಡುಗಡೆ ಸಾಧಕರಿಗೆ ಸನ್ಮಾನ ಕವಿಗೋಷ್ಠಿ, ಗೀತಗಾಯನ ಸಾಹಿತ್ಯ ಗಾನ ನೃತ್ಯ ವೈಭವ ವಿಶಿಷ್ಟ ಜನಪದ ಕಲೆ ಪ್ರಸ್ತುತಿ ಇವೆಲ್ಲವನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಪುತ್ತೂರಿನಲ್ಲಿ ಚರಿತ್ರೆಯನ್ನು ಸೃಷ್ಟಿಸಿದ ಹೆಗ್ಗಳಿಕೆ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

