ನೂತನ ಪದಾಧಿಕಾರಿಗಳಿಗೆ ಅನುಗ್ರಹ ಆಶೀರ್ವಾದ ಮಾಡಿದ ಕಲ್ಯಾಣಸ್ವಾಮಿ

Chandrashekhara Kulamarva
0


ಬಳ್ಳಾರಿ: ಅಣುವ್ರತ ಸಮಿತಿ ಬಳ್ಳಾರಿ ಶಾಖೆಯ 2025-2027 ನೇ ಸಾಲಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಪದಾಧಿಕಾರಿಗಳಿಗೆ  ಶ್ರೀ ಕಲ್ಯಾಣ ಸ್ವಾಮಿ ಮಠದಲ್ಲಿ ಅನುಗ್ರಹ ಆಶೀರ್ವಾದ ಪಡೆಯಲಾಯಿತು.


ಕಾರ್ಯಕ್ರಮದ  ಸಾನಿಧ್ಯವನ್ನು ಶ್ರೀಮಠದ ಪೂಜ್ಯರಾದ ಶ್ರೀ,ಮ, ನಿ,ಪ್ರ, ಕಲ್ಯಾಣ ಮಹಾಸ್ವಾಮಿಗಳು ವಹಿಸಿದ್ದರು. ಶ್ರೀ ರವಿ ಶಂಕರ ಸ್ವಾಮಿಗಳ ಸಾನಿಧ್ಯದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮಂಜು ಎಂಪೋರಿಯಮ್ ನ ಮಾಲಿಕ ಬಸಂತ‌ ಕುಮಾರ್ ಛಾಜಡ, ನಿಕಟ ಪೂರ್ವ ಅಧ್ಯಕ್ಷ  ಪಾರ್ಸೆಮಲ್ ಖೆವೇಸರ್, ಉಪಾಧ್ಯಕ್ಷ ಮಂಗಲ್ ಚಾಂದ್ ನಾಹರ್, ಕಾರ್ಯದರ್ಶಿ ಶ್ರೀಮತಿ ಪ್ರವೀಣಾದೇವಿ, ಸಹ ಕಾರ್ಯದರ್ಶಿ ಗಳಾದ ವಿನೋದ್ ಕುಮಾರ್ ಖಿವೇಸರ್, ಸೊಂತ ಗಿರಿಧರ್, ಸಂಘಟನಾ ಕಾರ್ಯದರ್ಶಿ ಗಳಾದ ಅಶೋಕ್ ಕುಮಾರ್ ಚಾಜರ್, ರೂಪ ಚಂದ್ ಪರಾಕ್, ಖಜಾಂಚಿ ಬನ್ವಾರಿ ಗೋಯಂಕ, ಮತ್ತು ಗೌರವ ಸಲಹೆಗಾರ ಗೌರಿ ಶಂಕರ ಅಗರವಾಲ್, ಕೆ.ಬಿ.ಸಿದ್ದಲಿಂಗಪ್ಪ ರನ್ನು ಶಾಲು ಹೊದಿಸಿ ಭಾರತಾಂಬೆಯ ಭಾವಚಿತ್ರ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಮಾನವರ ಸೇವೆಯೇ ಮಾಧವನ ಸೇವೆಯೆಂದು ಸೇವಾ ಕಾರ್ಯದಲ್ಲಿ ನಿರತವಾಗಿರುವ ಆಚಾರ್ಯ ತುಳಸಿಜಿ ಯವರ ಸಂಕಲ್ಪದ ಅಣುವ್ರತ ಸಮಿತಿಯು ಮಾನವ ಸಂಪನ್ಮೂಲ ಅಭಿವೃದ್ಧಿ ಯಲ್ಲಿ ಹೆಚ್ಚಿನ ಸೇವೆ ಸಲ್ಲಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ಬೆಳೆಯಲೆಂದು ಸಾನಿಧ್ಯ ವಹಿಸಿದ್ದ ಪೂಜ್ಯ ಕಲ್ಯಾಣ ಮಹಾಸ್ವಾಮಿಗಳು ಹಾರೈಸಿದರು.


ಜೀವಿಗಳ ಸೇವೆಯಲ್ಲಿಯೇ ಮಾನವ ಜೀವರ ಸಾರ್ಥಕತೆ ಅಡಗಿದೆ ಎಂದು ಸಮ್ಮುಖ ವಹಿಸಿದ್ದ ರವಿ ಶಂಕರ ಗುರೂಜಿ ನುಡಿದರು. ಸನ್ಮಾನಿತರ ಪರವಾಗಿ ಕಾರ್ಯದರ್ಶಿ ಪ್ರವೀಣ ದೇವಿ ಮಾತನಾಡುತ್ತಾ,ಪೂಜ್ಯರ ಗೌರವ ಸನ್ಮಾನದಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.ಮಂಗಲಚಂದ್ ವಂದನಾರ್ಪಣೆ ಮಾಡಿದರು.


ಕಾರ್ಯಕಾರಿಣಿ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದು, ಪೂಜ್ಯರ ಆಶೀರ್ವಾದ ಪಡೆದರು.ದಾಸೋಹದೊಂದಿಗೆ ಕಾರ್ಯಕ್ರಮ ಮಂಗಲವಾಯಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top