ಎಲ್ಲಾ ಪಿಡುಗುಗಳಿಗೂ ವಚನ ಸಾಹಿತ್ಯವೇ ಪರಿಹಾರ: ಶರಣ ಎಸ್ ಬಿ ರುದ್ರೇಗೌಡ

Upayuktha
0



ದಾವಣಗೆರೆ : ಎಲ್ಲಾ ಪಿಡುಗುಗಳಿಗೂ ವಚನ ಸಾಹಿತ್ಯವೇ ಪರಿಹಾರ ದೇಶದಲ್ಲಿ ಮೂರು ಮುಖ್ಯ ಪಿಡುಗುಗಳಿವೆ ಮೂಢನಂಬಿಕೆ, ಭ್ರಷ್ಟಾಚಾರ, ಮತ್ತು ಜಾತಿವ್ಯವಸ್ಥೆ ಈ ಮೂರು ಪಿಡುಗುಗಳಿಂದಾಗಿ ದೇಶದ ಅಭಿವೃದ್ಧಿ ಕುಂಠಿತ ಆಗಿದೆ ಈ ಎಲ್ಲಾ ಸಮಸ್ಯೆಗಳಿಗೆ ವಚನ ಸಾಹಿತ್ಯವೇ ಪರಿಹಾರ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಎಸ್ ಬಿ ರುದ್ರೇಗೌಡರು ಅಭಿಪ್ರಾಯ ಪಟ್ಟರು ಅವರು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರಗೆರೆ ಗ್ರಾಮದ ಶ್ರೀ ಮಂಜುನಾಥ ಪ್ರೌಢಶಾಲೆಯಲ್ಲಿ ನಡೆದ ವಚನ ಸಂರಕ್ಷಣೆ ದಿನ ಹಾಗೂ ಪಾ ಗೂ ಹಳಕಟ್ಟಿ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ದತ್ತಿ ದಾನಿಗಳಾದ ಶರಣ ವಿಭೂತಿ ಬಸವಾನಂದ ಶರಣರು ಮಾತನಾಡಿ ಭಾರತ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಇದು ಬಹುತ್ವದ ಭಾರತವಾಗಿ ಉಳಿಯಬೇಕಾದರೆ ವಚನ ಸಾಹಿತ್ಯ ಪ್ರಚಾರ ಆಗಬೇಕು ಎಂದು ತಿಳಿಸಿದರು.


ದಾವಣಗೆರೆ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಶರಣ ಅವರಗೆರೆ ರುದ್ರಮುನಿ ಮಾತನಾಡಿ ಸುಸಂಸ್ಕೃತ ಸಮಾಜ ನಿರ್ಮಾಣ ಮಕ್ಕಳಿಂದಲೇ ಸಾಧ್ಯ ಹಾಗಾಗಿ ಮಕ್ಕಳಿಗೆ ವಚನ ಸಾಹಿತ್ಯ ಉಣಬಡಿಸುವ ಕಾರ್ಯ ಮಹತ್ವದ್ದು ಎಂದು ತಿಳಿಸಿದರು.


ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಖಜಾಂಚಿಗಳಾದ ಮುದೇಗೌಡ್ರ ನಾಗರಾಜ್ ಕಕ್ಕರಗೊಳ್ಳ ಅವರು ದತ್ತಿ ದಾನಿಗಳ ಪರಿಚಯ ಮಾಡಿಕೊಟ್ಟರು ಸಮಾರಂಭದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶರಣ ಪ್ರಕಾಶ್ ಎಂಬಿ ನೆರವೇರಿಸಿದರು ಅನುಭವ ನೀಡಿದ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶರಣ ವಿಶ್ವೇಶ್ವರಯ್ಯ ಬಿಎಂ ಹೆಮ್ಮನಬೇತೂರು ಇವರು ವಚನ ಸಾಹಿತ್ಯದ ನಾಶ ಮಾಡುವ ಕೆಲಸ ಹೇಗಾಯಿತು ಅದರ ಸಂರಕ್ಷಣೆಗಾಗಿ ಶರಣರ ಪ್ರಾಣ ಒತ್ತೆ ಇಟ್ಟು ರಕ್ಷಣೆ ಮಾಡಿದ ಬಗೆ ಹಾಗೂ ಪಾ ಗೂ ಹಳಕಟ್ಟಿ ಅವರ ಕುರಿತು ಅನುಭವವನ್ನು ಹಂಚಿಕೊಂಡರು.


ಪ್ರಾಸ್ತಾವಿಕವಾಗಿ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಶರಣ ಕರೂರು ಹನುಮಂತಪ್ಪನವರು ವಚನ ಸಾಹಿತ್ಯದ ಕುರಿತು ಹಾಗೂ ಮಾನವ ಬಂಧುತ್ವ ವೇದಿಕೆಯ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು.


ಕಾರ್ಯಕ್ರಮದಲ್ಲಿ ದಾವಣಗೆರೆ ತಾಲೂಕು ಮಹಿಳಾ ಬಂದುತ್ವ ವೇದಿಕೆಯ ಸುಮಲತಾ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಶಾಲಾ ಮಕ್ಕಳು ಭಾಗವಹಿಸಿದ್ದರು. ಶಿಕ್ಷಕರಾದ ಲೋಕೇಶ್ ಅವರು ಸ್ವಾಗತಿಸಿದರೆ, ವಿರೂಪಾಕ್ಷಪ್ಪ ಇವರು ನಿರೂಪಣೆ ಮಾಡಿದರು. ಜಗದೀಶ್ ಎಲ್ಲರಿಗೂ ಶರಣು ಸಮರ್ಪಣೆ ಮಾಡಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top