ಭರತನಾಟ್ಯ ರಂಗಪ್ರವೇಶ: ಕಲಾಸಕ್ತರಿಂದ ಆಸ್ವಾದನೆ

Upayuktha
1 minute read
0


ಬೆಂಗಳೂರು: ನಾಟ್ಯೇಶ್ವರ ನೃತ್ಯ ಶಾಲೆ ಹಾಗೂ ನೃತ್ಯ ಕುಟೀರ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೇ 31ರಂದು ಮಲ್ಲೇಶ್ವರ ಶ್ರೀಕೃಷ್ಣದೇವರಾಯ ಕಲಾಮಂದಿರ (ತೆಲುಗು ವಿಜ್ಞಾನ ಸಮಿತಿ)ದಲ್ಲಿ ಗುರು ಕೆ.ಪಿ ಸತೀಶ್ ಬಾಬುರವರ ಹಿರಿಯ ವಿದ್ಯಾರ್ಥಿನಿ ಕು| ಕೆ. ಹರಿಣಿ ಹಾಗೂ ನೃತ್ಯ ಕುಟೀರದ ಗುರು ವಿ|| ಲಿಖಿತಾರವರ ಶಿಷ್ಯೆ ಕು| ಕೆ. ಪ್ರಗತಿ ಇವರುಗಳ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂತು.



ವಾದ್ಯವೃಂದದಲ್ಲಿ: ಗುರುಗಳಾದ ಕಲಾಯೋಗಿ ಶ್ರೀ ಕೆ.ಪಿ. ಸತೀಶ್ ಬಾಬು ಮತ್ತು ವಿದುಷಿ ಯು.ಕೆ. ಲಲಿತಾ (ನಟುವಾಂಗ), ವಿದ್ವಾನ್ ಶ್ರೀವತ್ಸ (ಹಾಡುಗಾರಿಕೆ), ವಿ|| ಪಿ. ಜನಾರ್ದನ (ಮೃದಂಗ), ವಿ|| ಆರ್ ಪಿ ಪ್ರಶಾಂತ್ (ವೀಣೆ), ವಿ|| ರಘುಸಿಂಹ {ಕೊಳಲು}, ವಿ|| ಧನುಷ್ (ರಿದಂ ಪ್ಯಾಡ್). ಕಾರ್ಯಕ್ರಮ ನಿರ್ವಹಣೆ ಮತ್ತು ನಿರೂಪಣೆ ವಾಣಿ ಸತೀಶ್ ಬಾಬು. ಪಾರಂಪರಿಕ ನೃತ್ಯ  ಬಂಧಗಳಾದ ಪುಷ್ಪಾಂಜಲಿ, ವಿನಾಯಕ ಸ್ತುತಿ, ಗುರುಶ್ಲೋಕ, ರಸಿಕಪ್ರಿಯ, ಜತಿಸ್ವರ, ದಶಾವತಾರ, ವೆಂಕಟೇಶ್ವರ ಪದವರ್ಣ, ಶಿವಕೀರ್ತನೆ, ದೇವಿಸೃತಿ ಹಾಗೂ ಕೊನೆಯಲ್ಲಿ ಕದನ ಕೂತೂಹಲ ತಿಲ್ಲಾನ, ಶ್ರೀರಾಮಚಂದ್ರನ ಮಂಗಳದೊಂದಿಗೆ ಸುಸಂಪನ್ನವಾಯಿತು.


ಅತಿಥಿಗಳಾಗಿ ಕಲಾಯೋಗಿ ಶ್ರೀಮತಿ ರೇಖಾ ಜಗದೀಶ್ (ನಿರ್ದೇಶಕರು, ಶ್ರೀ ಲಲಿತ ಕಲಾ ನಿಕೇತನ), 'ಕಲಾಯೋಗಿ' ಎಸ್. ರಘುನಂದನ್   (ನಿರ್ದೇಶಕರು ಕೇಶವ ಸಂಗೀತ ಮತ್ತು ನೃತ್ಯ ಶಾಲೆ ಹಾಗೂ ಡಾ॥ ಶ್ರೀಮತಿ ಮಾನಸಿ ರಘುನಂದನ್ (ನಿರ್ದೇಶಕರು, ಅಭಿವ್ಯಕ್ತಿ ಸಾಂಸ್ಕೃತಿಕ ಸಂಸ್ಥೆ)  ನೃತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಡೀ ಸಭಾಂಗಣ ಕಿರಿಯ, ಹಿರಿಯ ವಿದ್ಯಾರ್ಥಿ ವೃಂದ, ಕಲಾರಸಿಕರು ಪೋಷಕರಿಂದ ತುಂಬಿ ಕರತಾಡನದಿಂದ ಕಂಗೊಳಿಸಿತು. ಕಾರ್ಯಕ್ರಮವನ್ನು ಪೋಷಕರಾದ ಡಾ॥ ಕುಮಾರ್ ಮತ್ತು ಶ್ರೀಮತಿ ಎಸ್. ಜಯಶ್ರೀ ಅಚ್ಚುಕಟ್ಟಾಗಿ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top