ಬಳ್ಳಾರಿ: ಬಸದಿ ಶತಮಾನೋತ್ಸವ ಸಮಾರಂಭದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಭಾಗಿ

Upayuktha
0 minute read
0


ಬಳ್ಳಾರಿ: ಬಳ್ಳಾರಿ ನಗರದ ತೇರು ಬೀದಿಯ ಜೈನ ತೀರ್ಥಂಕರ ಪಾರ್ಶ್ವನಾಥರ ಬಸದಿ ಶತಮಾನೋತ್ಸವ ಸಮಾರಂಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಭಾಗಿಯಾದರು. ಮಂಗಳವಾರ ಈ ಕಾರ್ಯಕ್ರಮ ನಡೆಯಿತು.


ಶ್ರೀ ವಿಮಲಸಾಗರ ಸುರೀಶ್ವರ್'ಜೀ ಮಹಾರಾಜ್ ಅವರು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ನಾರಾ ಭರತ್ ರೆಡ್ಡಿಯವರ ಅಭಿವೃದ್ಧಿ ಕೆಲಸಗಳನ್ನು ಶ್ರೀ ವಿಮಲಸಾಗರ ಸುರೀಶ್ವರ್'ಜೀ ಮಹಾರಾಜ್ ಅವರು ಶ್ಲಾಘಿಸಿದರು. ಭಗವಾನ್ ಮಹಾವೀರರ ಕೃಪೆ ನಿಮ್ಮನ್ನು ಕಾಪಾಡಲಿ ಎಂದು ಆಶೀರ್ವದಿಸಿದರು. ಶಾಸಕ ನಾರಾ ಭರತ್ ರೆಡ್ಡಿಯವರನ್ನು ಜೈನ್ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.


ಈ ಸಂದರ್ಭ ಶ್ರೀ ಪಾರ್ಶ್ವನಾಥ ಜೈನ್ ಶ್ವೇತಾಂಬರ್ ಸಂಘದ ಪ್ರಮುಖರಾದ ಉತ್ಸವಲಾಲ್ ಬಾಗ್ರೇಚಾ, ವಿನೋದ್ ಬಾಗ್ರೇಚಾ, ರೋಶನ್'ಲಾಲ್, ಭರತ್, ಮಹಾವೀರ್, ಅಜಯ್ ಸೋನಿ ಸೇರಿದಂತೆ ಹಲವರು ಹಾಜರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top