ಮೇ 18: ವಿನಮ್ರ ಇಡ್ಕಿದು ಹಾಡಿದ 7 ದೃಶ್ಯಗೀತೆಗಳ ಬಿಡುಗಡೆ

Upayuktha
0


ಮಂಗಳೂರು: ವಿ.ಆರ್.ವಿ. ಕ್ರಿಯೇಶನ್ಸ್ ಮತ್ತು ಥಂಡರ್ ಕಿಡ್ಸ್ ಸಂಯೋಜನೆಯಲ್ಲಿ ವಿನಮ್ರ ಇಡ್ಕಿದು ಹಾಡಿರುವ ಏಳು ದೃಶ್ಯಗೀತೆಗಳ ಬಿಡುಗಡೆ ಮೇ 18 ರಂದು ಭಾನುವಾರ ಕೆನರಾ ಕಾಲೇಜು ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.


ಹಿರಿಯ ತುಳು ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಅವರು ಬಿಡುಗಡೆಗೊಳಿಸಲಿದ್ದಾರೆ. ಗೋವಿಂದದಾಸ ಕಾಲೇಜು ಸುರತ್ಕಲ್ ನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮತ್ತು ಕೆನರಾ ಪಿ.ಯು. ಕಾಲೇಜು ಡೀನ್ ಹಾಗೂ ರಂಗ ಸಂಗಾತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಕೆ.ಎಂ ಹಾಗೂ ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸ ರಾವ್ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.


ಈ ಹಾಡುಗಳ ಸಾಹಿತ್ಯವನ್ನು ಪ್ರೊ. ಅಮೃತ ಸೋಮೇಶ್ವರ, ಮೋನಪ್ಪ ತಿಂಗಳಾಯ, ಮಮತಾ ಅಂಚನ್ ಪುಣೆ ಹಾಗೂ ರಘು ಇಡ್ಕಿದು ರಚಿಸಿದ್ದಾರೆ. ಎಲ್ಲೂರು ಶ್ರೀನಿವಾಸ ರಾವ್ ಮತ್ತು ಪ್ರಮೋದ್ ಸಪ್ರೆ ಸಂಗೀತ ನಿರ್ದೇಶನ ಮಾಡಿದ್ದಾರೆ.


ಕು. ತನುಶ್ರೀ, ಕು. ಮಧುಶ್ರೀ ಕೋಡಿಕಲ್, ಕು. ಮಾನಸ, ಕು. ರಂಜಿತಾ, ಕು. ನಿನಾದ ಸಹಗಾಯಕಿರಾಗಿ ಹಾಡುಗಳನ್ನು ಹಾಡಿದ್ದಾರೆ.


ದೃಶ್ಯ ಕಲಾವಿದರಾಗಿ ಸಾಕ್ಷಿ ಗುರುಪುರ, ಸಾನ್ವಿ ಗುರುಪುರ, ಸಾಧ್ವಿನಿ ಗುರುಪುರ, ಸಾನ್ವಿ ಉಳ್ಳಾಲ, ಜಾಹ್ನವಿ, ವಿದ್ಯಾ, ಕೃಪಾಲಿ ಆಚಾರ್ಯ, ವಿಘ್ನೇಶ್ ಎಸ್. ಕೊಟ್ಟಾರಿ, ಧನ್ಯ, ವಿಭಾ, ರಚಿತಾ ಕೊಟ್ಟಾರಿ, ಚಾರಿತ್ರ್ಯ, ಪ್ರಿಯಾಂಕ, ಆತ್ಮಿ ಯು.ವಿ, ಭೂಮಿಕಾ, ಹಂಸಿಕ, ಕ್ಷಿತಿ, ಮಿತ್ರಾ ಕಾಣಿಸಿಕೊಂಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top