ಪಾಣೆಮಂಗಳೂರಿನ ಪ್ರಸಿದ್ಧ ಟೈಲರ್ ಬ್ಯಾಪ್ಟಿಸ್ಟ್ ಡಿ'ಕುನ್ಹಾ ನಿಧನ

Upayuktha
0


ಮಂಗಳೂರು: ಬಿಕರ್ನಕಟ್ಟೆ ಜಯಶ್ರೀ ಗೇಟ್ ಇಲ್ಲಿನ ಹೋಲಿ ಫ್ಯಾಮಿಲಿ ನಿವಾಸಿ, ಬಂಟ್ವಾಳ ಪಾಣೆಮಂಗಳೂರಿನಲ್ಲಿ ಟೈಲರ್ ವೃತ್ತಿ ನಡೆಸುತ್ತಾ ಭೌತಿಸ್ ಟೈಲರ್ ಎಂದೇ ಪ್ರಸಿದ್ಧಿ ಪಡೆದಿದ್ದ ಜನೋಪಕಾರಿ, ಕೊಡುಗೈದಾನಿ ಬ್ಯಾಪ್ಟಿಸ್ಟ್ ಡಿ'ಕುನ್ಹಾ (85) ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಬಂಟ್ವಾಳ ಪಾಣೆಮಂಗಳೂರು (ಕಲ್ಲಡ್ಕ ಮೊಗರ್ನಾಡ್) ಮಾತೆ ಇಗರ್ಜಿಯ ಪಾಲನಾ ಸಮಿತಿ ಸದಸ್ಯರಾಗಿ, ಮೆಲ್ಕಾರ್ ಯುವಕ ಸಂಘದ ಅಧ್ಯಕ್ಷರಾಗಿ ಮೆಲ್ಕಾರ್ ದಸರಾ (ಟ್ಯಾಬ್ಲೋ) ರೂವಾರಿ ಎಂದೆಣಿಸಿ ಎಲ್ಲಾ ಸಮುದಾಯದವರಲ್ಲೂ ಭಾವೈಕ್ಯತೆ ಹೊಂದಿ ಸಾಮರಸ್ಯದ ಬಾಳಿಗೆ ಪ್ರೇರಕರಾಗಿ ಪ್ರಸಿದ್ಧರೆನಿಸಿದ್ದರು.


ಐವತ್ತು ದಶಕಗಳ ಹಿಂದೆಯೇ ಸುಮಾರು 37 ಧರ್ನಶಿಶು (ಮಕ್ಕಳ ಪೋಷಕ) ಹೊಂದಿ ಹಿತಪೋಷಕರೆನೆಸಿ ಶ್ರೇಷ್ಠ ವ್ಯಕ್ತಿವೆಂದೇ ಗುರುತಿಸಿ ಜನಾನುರಾಗಿಯಾಗಿದ್ದರು. ಬಳಿಕ ಬಂಟ್ವಾಳ ಮೊಡಂಕಾಪು ಇಲ್ಲಿನ ಇನ್ಫೆoಟ್ ಜೀಸಸ್ ಚರ್ಚ್ ನಲ್ಲಿ ಪಾಲನಾ ಸಮಿತಿ ಸದಸ್ಯರಾಗಿ, ತಿಸ್ರಿ ಒಡ್ದ್ ಇದರ ಅಧ್ಯಕ್ಷರಾಗಿ, ಕಥೋಲಿಕ್ ಸಭಾ ಇದರ ಸಕ್ರಿಯ ಸದಸ್ಯರಾಗಿ, ಕೊಡುಗೈದಾನಿಯಾಗಿ ಅನುಪಮ ಸೇವೆ ಸಲ್ಲಿಸಿದ್ದು, ಸದ್ಯ ಮಂಗಳೂರು ಬಿಕರ್ಣಕಟ್ಟೆ ಇಲ್ಲಿನ ಜಯಶ್ರೀಗೇಟ್ ನ ಸ್ವನಿವಾಸದಲ್ಲಿ ನೆಲೆಸಿದ್ದರು. 


ಮೃತರು ಇಬ್ಬರು ಸುಪುತ್ರಿಯರು, ಮೂವರು ಸುಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಮೃತರ ಅಂತ್ಯಕ್ರಿಯೆಯು ನಾಳೆ ಗುರುವಾರ (ಮೇ 22) ಮಧ್ಯಾಹ್ನ 2:00 ಗಂಟೆಗೆ ಸ್ವನಿವಾಸಕ್ಕೆ ತಂದು ಬಳಿಕ 2:45 ರಿಂದ 3:30ರ ವರೆಗೆ ಬಜ್ಜೋಡಿ ಅಲ್ಲಿನ ಇನ್ಫೆಂಟ್ ಮೇರಿ ಚರ್ಚ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗುವುದು. 3:30 ಗಂಟೆಗೆ ಪೂಜೆ, ನಂತರ ಸೈಂಟ್ ಸೆಬಾಸ್ಟಿಯನ್ ಚರ್ಚ್ (ಬೆಂದೂರು) ಇದರ ಸಮಾಧಿಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top