ಸ್ಫೂರ್ತಿ ಸೆಲೆ: ಸಾಮಾಜಿಕ ಜಾಲತಾಣಗಳು- ತಂತ್ರ ಜ್ಞಾನದ ಮೈಲಿಗಲ್ಲು

Upayuktha
0


ಸಾಮಾಜಿಕ ಜಾಲ ತಾಣಗಳು ಈಗಿನ ಕಾಲದಲ್ಲಿ ನಮಗೆ ಗೊತ್ತಿಲ್ಲದಂತೆ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಅವು ನಮ್ಮ ಜೀವನದಲ್ಲಿ ಎಷ್ಟು  ಆವರಿಸಿವೆಯೆಂದರೆ ಅವುಗಳಿಲ್ಲದೆ ನಮ್ಮ ಜೀವನವು ಅಪೂರ್ಣ ಅನಿಸಲು ಶುರುವಾಗಿದೆ.


ಜಾಗತೀಕರಣ, ಉದಾರೀಕರಣದ ಮೂಲಕ ನಮ್ಮ ಜಗತ್ತು ಹೊರಗೆ ತೆರೆದು ಕೊಂಡಾಗ ತಂತ್ರಜ್ಞಾನ ಕಿಟಕಿಯ ಮೂಲಕ ನಮ್ಮ ಜಗತ್ತಿನಲ್ಲಿ ಹೊಕ್ಕು ಬಿಟ್ಟವು.


ವಾಟ್ಸಾಪ್, ಫೇಸ್ಬುಕ್, ಸ್ಕೈಪ್, Instragram, ಟ್ವಿಟ್ಟರ್ ನಮ್ಮ ಅಂಗೈ ಅಗಲ ಮೊಬೈಲ್ ಮೂಲಕ ನಮ್ಮ ಜಗತ್ತಿನಲ್ಲಿ ಬಂದು ಕುಳಿತು ಬಿಟ್ಟವು. ಸಣ್ಣ ಸಣ್ಣ ಗುಂಪು ಮಾಡಿಕೊಂಡು ಸುದ್ದಿ, ವಿಷಯ ವಿನಿಮಯ ಮಾಡಿಕೊಳ್ಳಲು ವಾಟ್ಸಾಪ್ ಸಾಧನವಾದರೆ, ಅಪರಿಚಿತರನ್ನು ಪರಿಚಯ ಮಾಡಿಕೊಳ್ಳಲು ಫೇಸ್ಬುಕ್ ಒಂದು ಹಾದಿಯಾಗಿ ಬಿಟ್ಟಿತು.


ನಮ್ಮ ನಮ್ಮ ಅಭಿಪ್ರಾಯಗಳನ್ನು ಹಂಚಿ ಕೊಳ್ಳಲು ಟ್ವಿಟರ್ ಮೂಲ ಸಾಧನ, ಮತ್ತು ನಮ್ಮ ಪಿಕ್ಚರ್ ಹಂಚಿಕೊಳ್ಳಲು Instagram ಸುಲಭವಾಯಿತು. ಈ ಸಾಮಾಜಿಕ ಜಾಲತಾಣಗಳು ಒಂದು ರೀತಿಯಲ್ಲಿ ಪ್ಲಾಟ್ಫಾರ್ಮ್ ಇದ್ದ ಹಾಗೆ. ಎಷ್ಟೋ ಜನ ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ದುಡ್ಡು ಗಳಿಸಿ ಜೀವನಕ್ಕೆ ದಾರಿ ಮಾಡಿಕೊಂಡವರು ಬೇಕಾದಷ್ಟು ಜನ ಇದ್ದಾರೆ. ರೀಲ್ಸ್ ಇನ್ಸ್ಟ್ರಾಗ್ರಾಂನಲ್ಲಿ ಅಪ್ಲೋಡ್ ಮಾಡಿ, ರಿಯಾಲಿಟಿ ಶೋ, ಕಿರುತೆರೆಯ ಮೂಲಕ ಸಿನಿ ಜಗತ್ತಿಗೆ ಬೇಕಾದಷ್ಟು ಜನ ಇದ್ದಾರೆ. ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು ಪ್ರೀತಿಸಿ ಮದುವೆಯಾದ ಜೋಡಿಗಳು ಬೇಕಾದಷ್ಟಿವೆ. ಲಿಂಕ್ಡ್ ಇನ್ ಮೂಲಕ ಕೆಲಸ ಗಿಟ್ಟಿಸಿಕೊಂಡವರು ಬೇಕಾದಷ್ಟಿದ್ದಾರೆ.


ಅದೇ ರೀತಿ ಆಕರ್ಷಕ ಫೇಕ್ ಪ್ರೊಫೈಲ್‌ಗಳಿಗೆ ಮರುಳಾಗಿ ಯಾಮಾರಿಸಿಕೊಂಡವರು ಬೇಕಾದಷ್ಟು ಜನ ಇದ್ದಾರೆ. ಈ ಸಾಮಾಜಿಕ ಜಾಲತಾಣಗಳು ಒಂದು ರೀತಿಯ ಪ್ಲಾಟ್ಫಾರ್ಮ್ ಇದ್ದ ಹಾಗೆ. ಇಲ್ಲಿ ಅವಕಾಶಗಳು ರೈಲುಗಳ ಮೂಲಕ ಬಂದು. ನಿಲ್ಲುತ್ತವೆ, ಆದರೆ ಈ ಗ್ಲಾಮರಸ್ ಜಗತ್ತಿನಲ್ಲಿ ಪ್ರತಿಭೆ ಎಂಬ ಟಿಕೆಟ್ ಕೂಡ ಅಷ್ಟೇ ಮುಖ್ಯ.


ಒಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳು ಬೆಂಕಿ ಕಡ್ಡಿಗಳಿದ್ದ ಹಾಗೆ. ನಾವು ದೀಪ ಹಚ್ಚಬಹುದು, ಇನ್ನೊಬ್ಬರ ಬದುಕಿಗೆ ಕಿಚ್ಚು ಹಚ್ಚಬಹುದು. ಆದರೆ ದೀಪ ಹಚ್ಚುವುದಷ್ಟೇ ನಮ್ಮ ಆದ್ಯತೆಯಾಗಬೇಕು, ಅಲ್ಲವೇ...

ಏನಂತೀರಾ?


- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top