ಕನಸು ನನಸಾಗಲು ಶ್ರಮ ಪಡಬೇಕು: ಡಾ. ಗಣೇಶ್ ಮೊಗವೀರ

Upayuktha
0

ಮಂಗಳೂರು: ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಪದವಿ ಹಂತದ ವ್ಯಾಸಂಗ ಒಳ್ಳೆಯ ಸಮಯ. ಸೂಕ್ತ ಫಲ ಸಿಗಬೇಕಾದರೆ ಬದುಕಿನಲ್ಲಿ ಕಷ್ಟ ಪಡಬೇಕು. ಕನಸು ಕಾಣುವುದು ಮಾತ್ರವಲ್ಲ, ಆ ಕನಸು ನನಸಾಗಲು ಶ್ರಮ ಪಡಬೇಕು ಎಂದು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಮೊಗವೀರ ಹೇಳಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ವೃತ್ತಿ ಮಾರ್ಗದರ್ಶನ ಮತ್ತು ಉನ್ನತ ಶಿಕ್ಷಣದಲ್ಲಿ ಅವಕಾಶ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. 


ವಿದ್ಯಾರ್ಥಿಗಳು ಕೇವಲ ಪದವಿ ಹಂತಕ್ಕೇ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸದೇ ಉನ್ನತ ಮಟ್ಟದ ವ್ಯಾಸಂಗದ ಕಡೆಗೆ ಹೆಚ್ಚು ಗಮನ ನೀಡಬೇಕು. ಇತ್ತೀಚೆಗೆ ದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ವಹಿಸದೇ ಇರುವುದು ವಿಪರ್ಯಾಸ. ಹಾಗಾಗಿ ಹೆಚ್ಚಿನ ಸ್ನಾತಕೋತ್ತರ ಪದವಿ ವ್ಯಾಸಂಗ ಮುಂದುವರಿಸುವಂತೆ ಸಲಹೆ ನೀಡಿದರು. 


ಅಲ್ಲದೇ, ಉನ್ನತ ಶಿಕ್ಷಣದ ಕೋರ್ಸುಗಳ ಬಗ್ಗೆ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ವಾಣಿಜ್ಯ ವಿಭಾಗದ ಪ್ರೊ. ಯತೀಶ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತ ಮಾಡಿದರು. ಎಂ.ಐ.ಟಿ.ಇ. ಕಾಲೇಜಿನ ಶ್ರೀಕಾಂತ್ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸುಧಾ ಎನ್. ವೈದ್ಯ, ಉಪನ್ಯಾಸಕ ಕಾರ್ತಿಕ್ ಪೈ ಉಪಸ್ಥಿತರಿದ್ದರು.




Post a Comment

0 Comments
Post a Comment (0)
To Top