ಕುಲಶೇಖರ ವೀರನಾರಾಯಣ ದೇವಸ್ಥಾನದ ಮೇಲ್ಛಾವಣಿ ಲೋಕಾರ್ಪಣೆ

Upayuktha
0

ಕುಲಾಲ ಸಮುದಾಯವನ್ನು ಒಗ್ಗೂಡಿಸುವ ಕಾರ್ಯ ಕ್ಷೇತ್ರದ ಮೂಲಕ ನಡೆಯುತ್ತಿದೆ: ಮಾಣಿಲ ಶ್ರೀ




ಮಂಗಳೂರು: ನಾವು ಕೈಗೊಳ್ಳುವ ಯಾವುದೇ ಕಾರ್ಯವು ದೇವರು ನಡೆಸಿಯಾರು ಎಂಬ ಒಂದೇ ದೃಷ್ಟಿಕೋನದಲ್ಲಿ ನಾವಿದ್ದಲ್ಲಿ ಈ ಪ್ರಪಂಚದಲ್ಲಿ ಅವರಿಗಿಂತಲೂ ದೊಡ್ಡ ಶಕ್ತಿ ಇನ್ಯಾವುದೂ ಇಲ್ಲ. ಇಂದು ಪ್ರಪಂಚವೇ ನಮ್ಮ ದೇಶವನ್ನು ತಿರುಗಿ ನೋಡುವಂತಹ ದೇಶವಾಗಿದೆ. ನಾನು ಕಾಲೇಜಿನಲ್ಲಿ ಓದುತ್ತಿರುವಾಗಲೇ ಈ ಕ್ಷೇತ್ರದ ಬಗ್ಗೆ ತಿಳಿದಿರುವೆನು. ವೀರನಾರಾಯಣ ದೇವಸ್ಥಾನವು ಅದೆಷ್ಟು ಪ್ರಬಲವಾಗಿದೆ ಎಂದರೆ ಕುಲಾಲ ಸಮುದಾಯವನ್ನು ಒಗ್ಗೂಡಿಸುವ ಕಾರ್ಯ ಈ ಕ್ಷೇತ್ರದ ಮೂಲಕ ನಡೆಯುತ್ತಿದೆ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ನುಡಿದರು. 


ಮೇ 10 ರಂದು ಮಂಗಳೂರಿನ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಮೇಲ್ಛಾವಣಿ ಉದ್ಘಾಟನೆಯನ್ನು ನಡೆಸಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, ವೀರನಾರಾಯಣ ದೇವಸ್ಥಾನದ ಪ್ರಭಾವವು ಬಹಳಷ್ಟಿದ್ದು ದಾನಿಗಳ ಹಾಗು ಭಕ್ತಾಭಿಮಾನಿಗಳ ಸಹಾಯದಿಂದ ಈ ಕ್ಷೇತ್ರದ ಜೀರ್ಣೋದ್ದಾರ ಕಾರ್ಯ ಹಾಗೂ ಮೇಲ್ಛಾವಣಿಯ ಕಾರ್ಯ ಸಾಂಗವಾಗಿ ನಡೆದಿದೆ. ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಎದುರಿಸಿ ದೇವಸ್ಥಾನದ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುವ ಶಕ್ತಿಯನ್ನು ವೀರನಾರಾಯಣ ಸ್ವಾಮಿಯವರು ನೀಡಿದ್ದಾರೆ. ಅವರು ನಮ್ಮ್ಮವರಿಂದ ಎಲ್ಲಾ ಕಾರ್ಯವನ್ನು ನಡೆಸುತ್ತಿದ್ದು ಇಂದಿನ ಮೇಲ್ಛಾವಣಿ ಲೋಕಾರ್ಪಣಾ ಕಾರ್ಯಕ್ಕೆ ಶುಭ ಹಾರೈಸಿದರು.


ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸುಂದರ್ ಕುಲಾಲ್ ಶಕ್ತಿನಗರ, ಅವರು ಪ್ರಸ್ತಾವನೆಯ ನುಡಿಗಳನ್ನಾಡಿದರು.


ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಶೇಖರ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಬಿ. ಪ್ರೇಮಾನಂದ ಕುಲಾಲ ವಹಿಸಿದ್ದು ದಕ್ಷಿಣ ಕನ್ನಡ ಮೂಲ್ಯರ ಯಾನೆ ಮೂಲ್ಯರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಸ್ವಾಗತಿಸಿದರು. 

ವೇದಿಕೆಯಲ್ಲಿ  ಮುಂಬಯಿಯ ಉದ್ಯಮಿ, ಕುಲಾಲ ಸಮಾಜದ ಮಹಾದಾನಿ ಸುನಿಲ್ ಆರ್. ಸಾಲ್ಯಾನ್, ಮುಂಬಯಿಯ ಉದ್ಯಮಿ, ಯೋಗ ತರಬೇತಿದಾರರಾದ ಡಾ. ಸುರೇಖಾ ರತನ್ ಕುಲಾಲ್, ಠಾಣೆಯ ಅಯ್ಯ ಪ್ಯಾಕರ್ಸ್ ಮೂವರ್ಸ್ ನ ಅಶೋಕ್ ಮೂಲ್ಯ, , ಕುಲಾಲ ಸಂಘ ಬೆಂಗಳೂರಿನ ಅಧ್ಯಕ್ಷರಾದ ದಿವಾಕರ ಮೂಲ್ಯ, ಉದ್ಯಮಿ ವಿಠಲ ಕುಲಾಲ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ದಾಮೋದರ ಎ., ಸೇವಾ ಸಮಿತಿಯ ಅಧ್ಯಕ್ಷ ಕಿರಣ್ ಅಟ್ಳೂರು, ಮಾತೃ ಮಂಡಳಿಯ ಅಧ್ಯಕ್ಷೆ ಪಾರ್ವತಿ ಶೇಖರ್ ಶಕ್ತಿನಗರ ಮೊದಲಾದವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಉದಯಕುಮಾರ್ ಪಚ್ಚಾನಾಡಿ, ವಸಂತ್ ಊರ್ವ ಸ್ಟೋರ್, ಹೊನ್ನಪ್ಪ ಕುಲಾಲ್ ಮಂದಾರ ಬೈಲ್, ಲೋಕನಾಥ್ ಕುಲಾಲ್ ಎಕ್ಕೂರು ಇವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮವನ್ನು ಪ್ರವೀಣ್ ಬಸ್ತಿ ಮತ್ತು ನವೀನ್ ಕುಲಾಲ್ ಪುತ್ತೂರು ನಿರೂಪಿಸಿದರು. ಕಿರಣ್ ಅಟ್ಳೂರು ಧನ್ಯವಾದ ನೀಡಿದರು.

ಶ್ರೀ ಅಗಸ್ತೇಶ್ವರ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ, ಧರ್ಮಸ್ಥಳ ಮೇಳದವರಿಂದ ಯಕ್ಷಗಾನ ಬಯಲಾಟ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ನಡೆಯಿತು.


ಭಕ್ತರ ಸಹಕಾರದಿಂದ ಕ್ಷೇತ್ರ ಅಭಿವೃದ್ಧಿ: ಪ್ರೇಮಾನಂದ ಕುಲಾಲ್


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ ಮಾತನಾಡುತ್ತಾ ಪೂರ್ವಜನ್ಮದ ಪುಣ್ಯದ ಫಲವಾಗಿದೆ ನಮ್ಮ ಕಾಲಾವಧಿಯಲ್ಲಿ ಈ ಪವಿತ್ರ ಕ್ಷೇತ್ರ ಸಂಪೂರ್ಣ ಜೀರ್ಣೋದ್ಧಾರಗೊಂಡು ಕುಲಾಲ ಸಮಾಜದ ಅಭಿವೃದ್ಧಿಗೆ ಪೂರಕವಾಗುವ ಸೇವಾಕಾರ್ಯಗಳು ಕ್ಷೇತ್ರದಿಂದ ನಡೆಯುವಂತಾಗಲು ದಾನಿಗಳು ಇನ್ನಷ್ಟು ಸಹಕಾರ ನೀಡಬೇಕು ಎಂದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top