ಉದ್ಯೋಗ ಆಕಾಂಕ್ಷಿಗಳಿಗೆ ಅಗತ್ಯ ರೆಸ್ಯೂಮ್: ಶ್ವೇತಾ ಜೆ ರಾವ್

Upayuktha
0


ಪುತ್ತೂರು: ಕೆಲಸವನ್ನು ಹುಡುಕುವ ಅಭ್ಯರ್ಥಿಗಳಲ್ಲಿ ಇರಬೇಕಾದ ಮೂಲಭೂತ ವಸ್ತು ರೆಸ್ಯೂಮ್. ಆಕಾಂಕ್ಷಿಯು ಹಲವಾರು ತಂತ್ರಗಳನ್ನು ರೆಸ್ಯೂಮ್ ಸಿದ್ಧಪಡಿಸುವಾಗ ಬಳಸಬೇಕಾಗುತ್ತದೆ. ಉತ್ತಮ ರೆಸ್ಯೂಮ್ ಒಳ್ಳೆಯ ಅಭಿಪ್ರಾಯಗಳನ್ನು ಸೃಷ್ಟಿಸಿ, ಕೆಲಸವನ್ನು ಭದ್ರಪಡಿಸುತ್ತದೆಎಂದು ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ವೇತಾಜೆ. ರಾವ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಸ್ನಾತಕೋತ್ತರ ವಿಭಾಗದ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ಸೆಲ್ ವತಿಯಿಂದ ನಡೆದ "ಅನ್ ಲಾಕಿಂಗ್‍ ಯುವರ್ ಫ್ಯೂಚರ್" ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. 


ಸ್ನಾತಕೋತ್ತರ ವಿಭಾಗದ ಡೀನ್‍ ಡಾ. ವಿಜಯ ಸರಸ್ವತಿ ಮಾತನಾಡಿ, ತರಗತಿಯೊಳಗೆ ನಡೆಯುವ ಪಾಠ, ಪಠ್ಯದ ವಿಚಾರಗಳನ್ನು ಮಾತ್ರ ಕಲಿಸುತ್ತದೆ. ಜೀವನಕ್ಕೆ ಅಗತ್ಯವಿರುವ ಪ್ರಾಯೋಗಿಕ ಜ್ಞಾನಗಳು ಲಭ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಪಾಠದ ಜೊತೆ ಜೊತೆಗೆ ಪ್ರಾಯೋಗಿಕ ಅಂಶಗಳನ್ನು ಕಲಿಯಬೇಕು. ಅವಕಾಶಗಳನ್ನು ಬಳಸಿಕೊಂಡು ಭವಿಷ್ಯವನ್ನು ರೂಪಿಸಬೇಕು. ಜೀವನದಲ್ಲಿ ಎಂತಹದ್ದೇ ಸನ್ನಿವೇಶಗಳು ಎದುರಾದರೂ ಎದುರಿಸಲು ಸಿದ್ಧರಿರಬೇಕು ಎಂದರು. 


ಕಾಲೇಜಿನ ದ್ವಿತೀಯ ಎಂ.ಎಸ್ಸಿ ವಿಭಾಗದ ವಿದ್ಯಾರ್ಥಿನಿ ಪೂಜಾ ಕಾರ್ಯಕ್ರಮ ನಿರ್ವಹಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top