ಡೈಪರ್- ಇದು ಬರೀ ಕೊಪ್ಪದ ಕತೆಯಾ? ಅಥವಾ ನಿಮ್ಮೂರಲ್ಲೂ ಹೀಗೇನಾ?

Upayuktha
0



ತಮಾಷೆ ಅಂದ್ರೆ, ಓದಿರುವ, ತಿಳುವಳಿಕೆ ಇರುವ, ಆರ್ಥಿಕವಾಗಿ ಸದೃಢರಾಗಿರುವ ನಾಗರಿಕರಿಂದಲೇ ಪ್ಲಾಸ್ಟಿಕ್ ಮತ್ತು ಕೆಮಿಕಲ್ ಮಿಶ್ರಿತ ಡೈಪರ್ ಬಳಕೆ ಆಗುವುದು ಮತ್ತು ಬಳಕೆಯ ನಂತರ ಅದನ್ನು ಎಲ್ಲಂದರಲ್ಲಿ ಬಿಸಾಕುವುದು! ಇಂತಹ ನಾಗರಿಕರಂತೆಯೇ ಇರುವ ಬೀದಿ ನಾಯಿಗಳು ಅದರಲ್ಲಿರುವ ಆಹಾರವನ್ನು ತಿಂದು, ಉಳಿದ ಪ್ಲಾಸ್ಟಿಕ್ ಮಿಶ್ರಿತ ಹತ್ತಿಯ ತರಹದ ಡೈಪರ್ ಚೂರುಗಳನ್ನು ರಸ್ತೆಯಲ್ಲಿ ಹಾಕುತ್ತವೆ! ಕೆಲವು ರಸ್ತೆಗಳಲ್ಲಿ ಚಾರ್ಲಿ 777 ಸಿನಿಮಾದಲ್ಲಿ, ಚಾರ್ಲಿ ನಾಯಿಯು ದಿಂಬು ತಡಿಗಳನ್ನು ಹರಿದು ಹಾಕಿದ ಹೀರೋ ರೂಮಿನಂತೆ ಕಾಣುತ್ತದೆ!


ಅವಿದ್ಯಾವಂತರು, ಬಡವರು ಶುದ್ದ ಕಾಟನ್ ಬಟ್ಟೆಗಳನ್ನು ಡೈಪರ್ ಬದಲಿಗೆ ಬಳಸುತ್ತಾರೆ. ಸ್ವಚ್ಛಗೊಳಿಸಿ ಮರುಬಳಕೆ ಮಾಡುತ್ತಲೇ ಇರುತ್ತಾರೆ. ಮಗುವಿನ ಆರೋಗ್ಯಕ್ಕೂ ಒಳ್ಳೆಯದು, ಪರಿಸರಕ್ಕೂ ಒಳ್ಳೆಯದು.


ಸಮಾಜಕ್ಕೆ, ಮಕ್ಕಳಿಗೆ, ಪರಿಸರಕ್ಕೆ ಹಾನಿಕಾರಕ ರು ಅಂತಿದ್ದರೆ, ಅದು ನಾವು, ವಿದ್ಯಾವಂತ ನಾಗರಿಕರು!


ಕೊಪ್ಪದ ಹಿರೀಕೆರೆ ಬಳಿ ಒಂದು ಪುಟ್ಟ ಮೋರಿ ಇದೆ. ಅದರ ಕೆಳಗಡೆ, ಓದಿದ ನಾಗರಿಕರು ಡೈಪರ್ ಬಿಸಾಕುವುದಕ್ಕೇ ಒಂದು ಜಾಗ ಕಂಡುಕೊಂಡಿದ್ದಾರೆ! ವಾಕಿಂಗ್ ಹೋಗುವಾಗ (ಕೆಲವು ಸಾರಿ ಕಾರು, ದ್ವಿಚಕ್ರ ವಾಹನಗಳಲ್ಲಿ ಬಂದು) ಈ ಸ್ಪಾಟ್‌ನಲ್ಲಿ ಯೂಸ್ಡ್ ಡೈಪರ್‌ಗಳನ್ನು ಬಿಸಾಕಿ ಹೋಗುತ್ತಾರೆ!!! 


ಇನ್ನೂ ಗಮ್ಮತ್ತಿನ ವಿಚಾರ ಅಂದ್ರೆ, ಆ ಮೋರಿಯ ಮೂಲಕ ಹರಿಯುವ ನೀರು, ಯೂಸ್ಡ್ ಡೈಪರ್‌ನ್ನು ತೊಳೆದು ಮುಂದಕ್ಕೆ ಹರಿದು ಹಿರೀಕೆರೆಯನ್ನು ಸೇರುತ್ತದೆ!!.


ಆ ಪವಿತ್ರ ಹಿರೀಕೆರೆಯ ನೀರನ್ನು ಕೊಪ್ಪ ಪಟ್ಟಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರನ್ನಾಗಿ ವಿತರಿಸಲಾಗುತ್ತದೆ.


(ನನಗನ್ನಿಸುವುದು, 777 ಚಾರ್ಲಿ ತಿನ್ನುವುದು, ನೀರಿನ ಮೂಲಕ ನಮ್ಮ ಉದರ ಸೇರುವ ಆಹಾರ ಎರಡೂ ಒಂದೆ! ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು!)


ಇನ್ನೂ ಇನ್ನೂ ಗಮ್ಮತ್ತಿನ ವಿಚಾರ ಅಂದ್ರೆ, ಅನೇಕ ಜನ ವಿದ್ಯಾವಂತ ನಾಗರಿಕರು ಪಟ್ಟಣ ಪಂಚಾಯತಿಗೆ ಸದಸ್ಯರಾಗಿಯೂ, ಅಧಿಕಾರಿಗಳಾಗಿಯೂ ನಿಯೋಜಿಸಲ್ಪಟ್ಟಿದ್ದಾರೆ! ಈ ಡೈಪರ್‌ ಪುರಾಣದ ಬಗ್ಗೆ, ಕೊಪ್ಪ ಹಿರೀಕೆರೆಯ ಪಾವಿತ್ರತೆಯ ಬಗ್ಗೆ ಅವರಿಗೆ ಏನೇ ಹೇಳಿದರು ಕೇಳಿಸಿಕೊಂಡು, ನೋಡಿಕೊಂಡು, ಲ್ಯಾಬ್ ವರದಿ ಕೊಟ್ಟರೂ ಅದನ್ನು ಓದಿಕೊಂಡು(!), ಏನೂ ಮಾಡದೆ, ನಿಷ್ಕ್ರಿಯರಾಗಿ, ಬೇಜವಬ್ದಾರಿಯಿಂದ ಸರಿಪಡಿಸುವುದರ ಬಗ್ಗೆ ತಿರುಗಿಯೂ ನೋಡದೆ ಇರುವವರಿದ್ದಾರೆ.


ನಿಜವಾಗಿಯೂ ಕೊಪ್ಪದ ಜನ ಭಾಗ್ಯವಂತರು! ಕೊಪ್ಪಕ್ಕೆ ಸೊಸೆಯಾಗಿ ಬರುವವರು ಭಾಗ್ಯ ಲಕ್ಷ್ಮಿಯರು


ಡೈಪರ್ ಬಗೆಗಿನ ಈ ವೀಡಿಯೋ  ಚೆನ್ನಾಗಿದೆ, ನೋಡಿ.

 https://www.instagram.com/reel/DIKzs4KzgNl/?igsh=ZjFkYzMzMDQzZg==


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top