ಕೆನರಾ ಕಾಲೇಜಿನಲ್ಲಿ ಲೇಖಕರೊಂದಿಗೆ ಸಂವಾದ

Upayuktha
0


ಮಂಗಳೂರು: ಕೆನರಾ ಕಾಲೇಜಿನ ಕನ್ನಡ ವಿಭಾಗವು ಲೇಖಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ದ್ವಿತೀಯ ಬಿಸಿಎ ನಾಲ್ಕನೇ ಚತುರ್ಮಾಸದ ಕನ್ನಡ ಪಠ್ಯಪುಸ್ತಕದಲ್ಲಿನ ಸ್ನೇಹಗಂಗೆ ಗದ್ಯದ ಲೇಖಕ, ಪತ್ರಿಕಾ ವರದಿಗಾರ ರವಿ ನಾಯ್ಕಾಪು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.


ಮದರ್ ಥೆರೆಸಾ ಅವರ ಜನ್ಮದಿನದಂದು ಸ್ಥಾಪಿತವಾದ ಮಂಜೇಶ್ವರದ ಸ್ನೇಹಾಲಯವು ನಿರ್ಗತಿಕರಿಗೆ ಆಶ್ರಯ ನೀಡುವ, ಮಾದಕ ದ್ರವ್ಯ ವ್ಯಸನಿಗಳನ್ನು ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾದ ಕೇಂದ್ರವಾಗಿದ್ದು ಗದ್ಯ ಪೂರಕವಾದ ಅದರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಅಲ್ಲದೆ ಅಕ್ಷರ ಮತ್ತು ಸಂಸ್ಕಾರ ಎರಡೂ ನಮಗಿರಬೇಕು. ಆದರೆ ಕೇವಲ ಪುಸ್ತಕದ ಹುಳುಗಳಾಗಬಾರದು. ಏನು ಕಲಿತರೂ ಮೊದಲು ಮಾನವನಾಗು ಎಂಬ ಸಂದೇಶದ ಮೂಲಕ ಸಾಮಾಜಿಕ ಬದ್ಧತೆಯ ಅರಿವು ಮೂಡಿಸಿದರು.


ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ವಾಣಿ ಯು ಎಸ್ ಪ್ರಸ್ತಾವಿಸಿದರು. ಕು. ಸಾಕ್ಷಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕು. ಅಶ್ವಿನಿ ವಂದಿಸಿದರು. ಕು. ಪ್ರಚೇತ ನಿರೂಪಿಸಿದರು.ಉಪನ್ಯಾಸಕಿ ಶೈಲಜಾ ಹಾಗೂ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top