ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ: ಸೆನ್ಸರ್ ಗಳು ಹಾಗೂ ಸಂಜ್ಞೆಗಳ ಪರಿವರ್ತಕ ಕುರಿತ ಮಿನಿ ಪ್ರಾಜೆಕ್ಟ್ ಗಳ ಕಾರ್ಯಾಗಾರ, ಪ್ರಾತ್ಯಕ್ಷಿಕೆ

Upayuktha
1 minute read
0


ಬೆಂಗಳೂರು: ‘ನಾವು ನಮ್ಮ ವಿದ್ಯಾರ್ಥಿಗಳಿಗೆ, ಅದರಲ್ಲೂ ತಂತ್ರಜ್ಞಾನದ ವಿದ್ಯಾರ್ಥಿಗಳಿಗೆ ಅವರ ಕಲಿಕೆಯನ್ನು ಒರೆಗೆ ಹಚ್ಚಲು ಸದಾ ಸಣ್ಣಪುಟ್ಟ ಪ್ರಾಜೆಕ್ಟ್ ಗಳನ್ನು ನೀಡುತ್ತಿರಬೇಕು. ಆಗ ಅವರ ಸೃಜನಶೀಲತೆ ನಿಜಕ್ಕೂ ಪ್ರಕಾಶಗೊಳ್ಳುತ್ತದೆ. ಇಂದಿನ ಅವರ ಚಿಕ್ಕದಾದ ಯಶಸ್ಸು ನಾಳೆ ಹೊಸ ಬೃಹತ್ ಸವಾಲನ್ನು ಸ್ವೀಕರಿಸುವಂತೆ ಪ್ರೇರೇಪಿಸುತ್ತದೆ. ನಮ್ಮ ವಿದ್ಯಾರ್ಥಿಗಳ ಮನಸ್ಸು ಹಾಗೂ ಮಿದುಳು ಏಕಾಗ್ರತೆಯಿಂದ ಸಮ್ಮಿಲನಗೊಂಡರೆ ಆಗ ಅವಶ್ಯಕ್ಕಿಂತ ಹೆಚ್ಚು ವೇಗದಲ್ಲಿ ಅನ್ವೇಷಣೆ ಸಾಗುತ್ತದೆ’, ಎಂದು ಸಿರಿ ಟೆಕ್ನೊಕ್ರಾಟ್ಸ್ ನ ಮಧು ವಿ ಅವರು ನುಡಿದರು.


ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ ಆಯೋಜಿಸಿದ್ದ ಸೆನ್ಸರ್‍ ಗಳು ಹಾಗೂ ಸಂಜ್ಞೆಗಳ ಪರಿವರ್ತಕಗಳನ್ನು ಕುರಿತ ಮಿನಿ ಪ್ರಾಜೆಕ್ಟ್ ಗಳ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


‘ನಮ್ಮೆಲ್ಲರ ದೈನಂದಿನ ಬದುಕಿನಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಸೆನ್ಸಾರ್ ಹಾಗೂ ಸಂಜ್ಞೆಗಳ ಪರಿವರ್ತಕಗಳು ಅನೇಕ ಸಮಸ್ಯೆಗಳನ್ನು ಪತ್ತೆಹಚ್ಚುವಲ್ಲಿ ಬಹಳ ಮುಖ್ಯ. ಈ ತೆರೆನ ಪ್ರಾತ್ಯಕ್ಷಿಕೆಗಳ ಸ್ಪರ್ಧೆ ನಾಳಿನ ಬದುಕಿಗೆ ಸೂಕ್ತ ನೆರವು ಒದಗಿಸಲು ಹಾಗೂ ಸೂಕ್ತ ಅನ್ವೇಷಣೆ ನಡೆಸಲು ಖಂಡಿತ ನೆರವಾಗುತ್ತವೆ’ ಎಂದರು.


4ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಯಂಚಾಲಿತ ತಂತ್ರಜ್ಞಾನದಿಂದ ಹಿಡಿದು ಇಂಧನ ದಕ್ಷತೆಯವರೆಗೆ ಸುಮಾರು 15 ವಿನೂತನ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಲಾಯಿತು.


ಪ್ರದರ್ಶನದಲ್ಲಿ ತೀರ್ಪುಗಾರರಾದ ಜೆ.ಎಲ್.ಎಲ್ ಕಂಪನಿಯ ಚೇತನ್ ಆರ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಎನ್. ಸಮನ್ವಿತಾ, ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆಯ ಸಂಯೋಜಕಿ ಮೇಘನಾ ಎ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top