ಯುವ ಪೀಳಿಗೆಗೆ ಸನಾತನ ಧರ್ಮದ ಅರಿವು ಮೂಡಿಸಬೇಕಾಗಿದೆ: ಹೇಮಾ ಶಾಂತಪ್ಪ ಪೂಜಾರಿ

Upayuktha
0



ದಾವಣಗೆರೆ: ನಮ್ಮ ನಿಮ್ಮೆಲ್ಲರ ಸಂಸ್ಕೃತಿ, ಸಂಸ್ಕಾರ, ಸನಾತನ ಧರ್ಮಗಳ ಅರಿವು ಈಗಿನ ಯುವ ಪೀಳಿಗೆಗಿಗೆ ಅರಿವು ಮೂಡಿಸಬೇಕಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಆಧ್ಯಾತ್ಮದ ಪರಂಪರೆಯು ಮರೆಯಾಗುತ್ತಿರುವುದು ವಿಷಾದದ ಸಂಗತಿ. ರಂಗೋಲಿ ಕೇವಲ ಬಹುಮಾನಕ್ಕೆ ಸೀಮಿತವಾಗದೇ ಕಲೆಯ ಜತೆಗೆ ಮನೆಯ ಮುಂದೆ ದೇವರ ಪೂಜೆ ಆದಂತೆ ಎಂದು ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿಯವರು ಹೇಳಿದ್ದಾರೆ. 

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ಬಡಾವಣೆಗಳ ಅವರವರ ಮನೆಗಳ ಮುಂದೆ ಉಚಿತವಾಗಿ “ಮನೆಯಂಗಳದಲ್ಲಿ ರಂಗೋಲಿ ಸ್ಪರ್ಧೆ” ಹಮ್ಮಿಕೊಂಡಿದ್ದು, ಕಲಾಕುಂಚ ಕಚೇರಿಯ ಆವರಣದ ಸಭಾಂಗಣದಲ್ಲಿ  ಬಹುಮಾನ ವಿಜೇತರಿಗೆ  ಅಭಿನಂದನಾ ಪತ್ರ, ಕನ್ನಡತಾಯಿ ಭುವನೇಶ್ವರಿಯ ಸ್ಮರಣಿಕೆ ವಿತರಣಾ ಸಮಾರಂಭದಲ್ಲಿ  ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕ ಮಾತನಾಡಿ, ಅಡಿಗೆ ಮನೆಗೆ ಸೀಮಿತರಾದ ಮಹಿಳೆಯರಿಗೆ ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಪ್ರತಿಭಾವಂತ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಸೂಕ್ತವಾದ, ಮುಕ್ತವಾದ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಕಳೆದ 35 ವರ್ಷಗಳಿಂದ ನಿರಂತರವಗಿ, ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸಾಂಸ್ಕೃತಿಕ ಚಟುವಟಿಕೆ ಕಲಾಕುಂಚ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾಕುಂಚ ಡಿಸಿಎ.ಟೌನ್‌ಶಿಪ್ ಶಾಖೆಯ ಅಧ್ಯಕ್ಷರಾದ  ಶಾರದಮ್ಮ, ಶಿವನಪ್ಪ, ಎಂ.ಸಿ.ಸಿ. ಬ್ಲಾಕ್ ಶಾಖೆಯ ಅಧ್ಯಕ್ಷರಾದ  ಪ್ರಭಾ ರವೀಂದ್ರ, ಸಿದ್ಧವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ  ಲಲಿತಾ ಕಲ್ಲೇಶ್, ವಿದ್ಯಾನಗರ ಶಾಖೆಯ ಅಧ್ಯಕ್ಷರಾದ ರಾಜಶೇಖರ ಬೆನ್ನೂರು, ಕೆ.ಬಿ.ಬಡಾವಣೆ ಶಾಖೆಯ ಅಧ್ಯಕ್ಷರಾದ ವಿ.ಕೃಷ್ಣಮೂರ್ತಿ ಮುಂತಾದವರು ಮಾತನಾಡಿ,  ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾವರಿಗೆ ಅಭಿನಂದನೆ ಕೋರಿದರು.


ಮಂಜುಳಾರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ನಿರೂಪಣೆಯನ್ನು  ಶಿಲ್ಪಾ ಉಮೇಶ್ ನಡೆಸಿಕೊಟ್ಟರು. ಸ್ವಾಗತ ಮಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್‌ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top