ವಕ್ಫ್ ತಿದ್ದುಪಡಿ: ಸರ್ಕಾರ ಹಿಂದೂ ಸಮುದಾಯಕ್ಕಾದ ಅನ್ಯಾಯಕ್ಕೂ ಪರಿಹಾರ ನೀಡಲಿ

Upayuktha
0

 ಹಿಂದೂ ಜನಜಾಗೃತಿ ಸಮಿತಿ


ಕೇಂದ್ರ ಸರ್ಕಾರ ಮಂಡಿಸಿದ ವಕ್ಫ್ ಮಸೂದೆಯಲ್ಲಿ ವಕ್ಫ್ ಮಂಡಳಿಗೆ ನೀಡಲಾದ ಅಪರಿಮಿತ ಅಧಿಕಾರಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿದ್ದರೂ, ಮಸೂದೆಯು ಹಿಂದೂ ಸಮುದಾಯದ ಭೂಮಿಯ ರಕ್ಷಣೆಯನ್ನು ಸಂಪೂರ್ಣವಾಗಿ ಖಾತರಿಪಡಿಸುವುದಿಲ್ಲ. ಪ್ರಸ್ತುತ ವಕ್ಫ್ ಮಸೂದೆ ಅಪೂರ್ಣವಾಗಿದೆ ಮತ್ತು ಹಿಂದೂ ಸಮುದಾಯದ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಲು ಅಸಮರ್ಥವಾಗಿದೆ. 


ಹಿಂದೂಗಳ ಹಕ್ಕಿನ ಭೂಮಿಯ ಮೇಲಿನ ಅನ್ಯಾಯ ದೂರಗೊಳಿಸಲು ಹಿಂದೂ ಪಕ್ಷವು ಜಂಟಿ ಸಂಸದೀಯ ಸಮಿತಿಯ ಮುಂದೆ ಮಂಡಿಸಿದ ಅಂಶಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಹಿಂದೂ ಸಮಾಜದ ಹಕ್ಕುಗಳ ಮೇಲಾಗುತ್ತಿರುವ ಅನ್ಯಾಯ ದೂರಗೊಳಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ.


ಪ್ರಸ್ತಾವಿತ ಮಸೂದೆಯ ಕೆಲವು ವಿಭಾಗಗಳಾದ ಸೆಕ್ಷನ್ 40, 104, 107 ಮತ್ತು 108 ಈ ಭೀಕರ ಕಲಂ ರದ್ದತಿಯನ್ನು ಹಿಂದೂ ಜನಜಾಗೃತಿ ಸಮಿತಿ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಸೆಕ್ಷನ್ 3(ಸಿ) ಪ್ರಕಾರ, ಸರ್ಕಾರಿ ಭೂಮಿಯನ್ನು ಮಾತ್ರ ತನಿಖೆ ಮಾಡಲಾಗುತ್ತದೆ ಮತ್ತು ಹಿಂದೆ ವಕ್ಫ್ ಆಸ್ತಿಗಳೆಂದು ಘೋಷಿಸಲಾದ ಭೂಮಿಗಳ ಬಗ್ಗೆ ಮಾಹಿತಿಯನ್ನು ಕೋರಲಾಗಿದೆ; ಆದರೆ, ಹಿಂದೂ ದೇವಾಲಯ, ಸಮುದಾಯಗಳ ಜಮೀನುಗಳು, ಟ್ರಸ್ಟ್ ಜಮೀನುಗಳು, ಇತರ ಸಮುದಾಯಗಳ ಒಡೆತನದ ಜಮೀನುಗಳು ಮತ್ತು ಭಾರತೀಯ ಪುರಾತತ್ವ ಸಮೀಕ್ಷೆಯ ವ್ಯಾಪ್ತಿಯಲ್ಲಿರುವ ಜಮೀನುಗಳನ್ನು ವಕ್ಫ್ ಆಸ್ತಿಗಳೆಂದು ಘೋಷಿಸಿದ್ದರೆ, ಅವುಗಳ ಮೇಲೆ ಯಾವುದೇ ಪೂರ್ವಾನ್ವಯ ಪರಿಣಾಮ ಬೀರುವುದಿಲ್ಲ. ಆದ್ದರಿಂದ, ಈ ಭೂಮಿಯನ್ನು ಹಿಂದೂ ಸಮುದಾಯಕ್ಕೆ ಹಿಂತಿರುಗಿಸಲಾಗುವುದು ಎಂಬುದಕ್ಕೆ ಈ ಮಸೂದೆಯಲ್ಲಿ ಯಾವುದೇ ಗ್ಯಾರಂಟಿ ಇಲ್ಲ.  


ಈ ಹಿನ್ನೆಲೆಯಲ್ಲಿ, ಹಿಂದೂ ಸಮುದಾಯದ ಹಕ್ಕುಗಳ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಈ ಮಸೂದೆಗೆ ಮತ್ತಷ್ಟು ತಿದ್ದುಪಡಿಗಳು ಅವಶ್ಯಕವಾಗಿದೆ. ಈ ಹಿಂದೆ ವಕ್ಫ್ ಆಸ್ತಿಗಳೆಂದು ಘೋಷಿಸಲಾದ ಎಲ್ಲಾ ಭೂಮಿಯನ್ನು ತನಿಖೆ ಮಾಡಬೇಕು, ಹಿಂದೂ ದೇವಾಲಯಗಳು, ಟ್ರಸ್ಟ್‌ಗಳು, ಇತರ ಸಂಘಗಳು ಮತ್ತು ಭಾರತೀಯ ಪುರಾತತ್ವ ಸಮೀಕ್ಷೆಯ ಭೂಮಿಗಳ ಮೇಲೆ ಮಾಡಲಾದ ಅನ್ಯಾಯದ ವಕ್ಫ್ ಹಕ್ಕುಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ವಕ್ಫ್ ಮಂಡಳಿಗೆ ನೀಡಲಾದ ವಿಶೇಷ ಅಧಿಕಾರಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು ಹಿಂದೂ ಸಮುದಾಯ ಒತ್ತಾಯಿಸುತ್ತಿದೆ. 


ಹಿಂದೂ ಸಮುದಾಯದ ಹಕ್ಕುಗಳಿಗಾಗಿ ಈ ಹೋರಾಟ ಮುಂದುವರಿಯುತ್ತದೆ. ಹಿಂದೂ ಸಮುದಾಯವು ಒಗ್ಗೂಡಿ ತಮ್ಮ ಭೂಮಿಯನ್ನು ರಕ್ಷಿಸಲು ಧ್ವನಿ ಎತ್ತುವ ಅಗತ್ಯವಿದೆ ಎಂದು ಸಮಿತಿ ಹೇಳಿದೆ.



-ಮೋಹನ್ ಗೌಡ,

ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top