ಏ. 24: ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್ ಭರತನಾಟ್ಯ ರಂಗ ಪ್ರವೇಶ

Upayuktha
0

ಪೆರ್ನಾಜೆ: ಭರತನಾಟ್ಯ ಕಲಾವಿದೆ ಕು.ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್ ರವರ ರಂಗ ಪ್ರವೇಶವು ಏ. 24ರಂದು ವಿಟ್ಲ ಗಾರ್ಡನ್ ಅಡಿಟೋರಿಯಂನಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.

 

ಕಿರು ಪರಿಚಯ:

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ವಿಶ್ವವಿದ್ಯಾನಿಲಯ ಮೈಸೂರ್ ಇವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಭರತನಾಟ್ಯ ವಿದ್ವತ್ ಪರೀಕ್ಷೆಯ ಅಂತಿಮ ವಿಭಾಗದಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾಳೆ.


ಇವರು ನಾಟ್ಯ ವಿದ್ಯಾಲಯ (ರೀ) ಕುಂಬಳೆ ವಿದುಷಿ ಡಾ. ವಿದ್ಯಾ ಲಕ್ಷ್ಮಿ ಇವರ ಶಿಷ್ಯೆ ಹಾಗೂ ವಿಟ್ಲ ಐಟಿಐ ಸುಪ್ರಜೀತ್ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಕೆ. ರಘುರಾಮ ಶಾಸ್ತ್ರಿ ಹಾಗೂ ಸ್ವರ ಸಿಂಚನ ಸಂಗೀತ ಶಾಲೆ ಶಿಕ್ಷಕಿ ಸವಿತಾ ಕೊಡಂದೂರು ಅವರ ಪುತ್ರಿ. ಡಾ. ಸಚಿನ್ ಸುಬ್ರಮಣ್ಯ ಕೊಡಂದೂರು ಅಣ್ಣನ ಪ್ರೋತ್ಸಾಹ, ಕುಮಾರ್ ಪೆರ್ನಾಜೆ ಸ್ವರ ಸಿಂಚನ ಕಲಾತಂಡದ ಅರಳು ಪ್ರತಿಭೆಯಾಗಿದ್ದು ಭರತನಾಟ್ಯ ಸಂಗೀತಕ್ಕೂ ಸೈ ಎನಿಸಿ ತನ್ನ ಕಲಾ ಪ್ರೌಢಿಮೆಯನ್ನು ಮೆರೆದಿದ್ದಾಳೆ.


ಇವಳು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಅಂಡ್ ಟೆಕ್ನಾಲಜಿ ಫೈನಲ್ ಇಯರ್ (BE) Data Science ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

2024ರ ನವರಾತ್ರಿಗೆ ಧರ್ಮಸ್ಥಳದಲ್ಲಿ ಸಂಗೀತ ಕಚೇರಿ ನೀಡಿದ್ದು ಇವಳ ಹೆಗ್ಗಳಿಕೆ. ಅಲ್ಲದೆ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡಿದ್ದಾಳೆ.

 

ಇದೇ ಏಪ್ರಿಲ್ ತಿಂಗಳಲ್ಲಿ ಭರತನಾಟ್ಯ ರಂಗಪ್ರವೇಶ ನೀಡಲಿದ್ದಾಳೆ ಇವಳಿಗೆ ಈಗಾಗಲೇ ಪೆರ್ನಾಜೆ ಪ್ರಶಸ್ತಿ, ಗಡಿನಾಡ ಧ್ವನಿ ಪ್ರಶಸ್ತಿ, ಸುಮ ಸೌರಭ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದೆ.


ಕುಮಾರ್ ಪೆರ್ನಾಜೆ ನಿರ್ದೇಶನದಲ್ಲಿ ಜಾಲ್ಸೂರು ಸಾರ್ವಜನಿಕ ಗಣೇಶೋತ್ಸವದಲ್ಲಿ, ಶ್ರೀ ಕಾವು ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಮತ್ತು ಕಾವು ಅಯ್ಯಪ್ಪ ಸ್ವಾಮಿ ಕಾರ್ಯಕ್ರಮದಲ್ಲಿ, ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಭರತನಾಟ್ಯ ಇದ್ದು ಅಲ್ಲದೆ ಕೋಟೆ ಸುಬ್ರಮಣ್ಯ ಸ್ವಾಮಿ ಷಷ್ಠಿ ಮಹೋತ್ಸವದಲ್ಲಿ, ಸುಬ್ರಮಣ್ಯ ದೇವಸ್ಥಾನ ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಿರು ಷಷ್ಠಿ ಮಹೋತ್ಸವದಲ್ಲಿ ಸತತ ಐದು ವರ್ಷಗಳಿಂದ ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದು ಇವಳ ಹೆಗ್ಗಳಿಕೆ. ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಕಾರ್ಯಕ್ರಮ ನೀಡಿದ್ದು ಇವರ ಕಂಚಿನ ಕಂಠದಲ್ಲಿ ಗಾಯನ ಕೇಳುವುದೇ ಚೆಂದ.


ವೇದಮೂರ್ತಿ ಶ್ರೀ ಅನಂತನಾರಾಯಣ ಭಟ್ ಪರಕ್ಕಜೆ ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ) ಸುರತ್ಕಲ್ ಕರ್ನಾಟಕದ ನಿರ್ದೇಶಕ ಕಲಾಶ್ರೀ ವಿದ್ವಾನ್ ಕೆ ಚಂದ್ರಶೇಖರ್ ನಾವಡ ಅಧ್ಯಕ್ಷತೆ ವಹಿಸಲಿದ್ದು, ಮೃದಂಗ ವಾದಕರು      ಡಾ. ವಿ.ಆರ್ ನಾರಾಯಣ್ ಪ್ರಕಾಶ್ ಕಲ್ಲಿಕೋಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ, ಶ್ರೀ ಭಗವತಿ ದೇವಸ್ಥಾನದ ವ್ಯವಸ್ಥಾಪಕ ಕೆ. ಕೃಷ್ಣಯ್ಯ ವಿಟ್ಲ, ಕೇಶವ ಆರ್ ವಿ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ವಿಶೇಷ ಆಹ್ವಾನಿತರಾಗಿ ಕಲಾ ನಿರ್ದೇಶಕ ಬರಹಗಾರ ರಾಷ್ಟ್ರ ಪ್ಶಶಸ್ತಿ ವಿಜೇತ ಕುಮಾರ್ ಪೆರ್ನಾಜೆ ಭಾಗವಹಿಸಲಿದ್ದಾರೆ.


ಹಿಮ್ಮೇಳನ ಕಲಾವಿದರಾಗಿ ವಿದುಷಿ ಡಾ. ವಿದ್ಯಾ ಲಕ್ಷ್ಮಿ ಕುಂಬ್ಳೆ (ನಟುವಾಂಗ), ವಿದ್ವಾನ್ ಸಿಜು ಕರುಣಾಕರನ್ ಕಣ್ಣೂರ್, ಸಿ ವಸಂತಕುಮಾರ ಗೋ ಸಾಡ (ಹಾಡುಗಾರಿಕೆ), ಮೃದಂಗ ವಿದ್ವಾನ್ ಸುರೇಶ್ ಬಾಬು ಕಣ್ಣೂರ್, ರಾಹುಲ್ ಪಯ್ಯನೂರ್ (ಕೊಳಲು), ರಿದಂ ಪ್ಯಾಡ್ನಲ್ಲಿ ಪ್ರಭಾಕರ್ ಮಲ್ಲ ಸಾಥ್ ನೀಡಲಿದ್ದಾರೆ. ಮಲ್ಲಿಕಾ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ ಎಂದು ಸವಿತಾ ಕೋಡoದೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top