ಉಜಿರೆ: ಬೇಸಿಗೆ ಶಿಬಿರದ ಅಂಗವಾಗಿ ಹಮ್ಮಿಕೊಂಡ ವಿಶೇಷ ಕಾರ್ಯಗಾರದಲ್ಲಿ ಎಸ್ ಡಿ ಎಂ (ಸ್ವಾಯತ್ತ) ಕಾಲೇಜು, ಉಜಿರೆ ಇಲ್ಲಿಯ ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ಅಭಿಲಾಷ್ ಕೆ. ಎಸ್. ಇವರು ಕಾಂಪೋಸ್ಟ್ ತಯಾರಿಕೆಯ ಕುರಿತಾದ ಕಾರ್ಯಾಗಾರವನ್ನು ನೆರವೇರಿಸಿಕೊಟ್ಟರು.
ಸಂಪನ್ಮೂಲ ವ್ಯಕ್ತಿಗಳಾದ ಇವರು ಕಾರ್ಯಗಾರದಲ್ಲಿ ಮನೆಗಳಲ್ಲಿ ಒಟ್ಟಾಗುವಂತಹ ತರಕಾರಿ ಹಾಗೂ ಹಣ್ಣಿನ ತ್ಯಾಜ್ಯಗಳು ತರಗೆಲೆ, ಮಣ್ಣು ಹಾಗೂ ನೀರು ಇಷ್ಟನ್ನು ಬಳಸಿ ಯಾವ ರೀತಿಯಾಗಿ ಕೈತೋಟಕ್ಕೆ ಬೇಕಾಗುವಂತಹ ಫಲವತ್ತಾದ ಗೊಬ್ಬರವನ್ನು ತಯಾರಿಸಬಹುದು ಎಂಬುದರ ಕುರಿತಾಗಿ ಪ್ರಾತ್ಯಕ್ಷಿಕೆ ನೀಡಿದರು. ಸುಮಾರು 100 ವಿದ್ಯಾರ್ಥಿಗಳು ಈ ಕಾರ್ಯಾಗಾರದ ಪ್ರಯೋಜನ ಪಡೆದರು.
ಶಾಲೆಯ ಶಿಕ್ಷಕಿಯರಾದ ನಯನಾ ಕೆ. ಪಿ., ಮಧುರಾ ಪಿ ಹಾಗೂ ಚೇತನಾ ಹೆಗಡೆ ಇವರು ಉಪಸ್ಥಿತರಿದ್ದು ಒಟ್ಟು ಕಾರ್ಯಕ್ರಮ ಸಂಯೋಜಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ