ಬೆಂಗಳೂರು: ಸೇಂಟ್ ಜೋಸೆಫ್ಸ್ ಯುನಿವರ್ಸಿಟಿಯಲ್ಲಿ ಶಿಫ್ಟ್ IIIರ ಪ್ರಮುಖ ಅಂತರವರ್ಗ ಸಾಂಸ್ಕೃತಿಕೋತ್ಸವವಾದ ತೇಜಸ್ 2025, 7ರಿಂದ 19 ಮಾರ್ಚ್ 2025ರವರೆಗೆ ನಡೆದು, ಸಾಮಾನ್ಯ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಸಿಗದ 1800ಕ್ಕೂ ಹೆಚ್ಚು ವಿದ್ಯಾರ್ಥಿಗಳು (ಕೆಲಸ ಮಾಡುವ ವೃತ್ತಿಪರರು ಮತ್ತು ವಿದ್ಯಾರ್ಥಿ ಉದ್ಯಮಿಗಳು ಸೇರಿದಂತೆ) ಭಾಗವಹಿಸಿದರು.
ನೃತ್ಯ, ಸಾಹಿತ್ಯ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡ 27 ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳ ಸೃಜನಶೀಲತೆಗೆ ವೇದಿಕೆ ಒದಗಿಸಲಾಯಿತು.
ನೃತ್ಯ ಸಂಘದಿಂದ ಫ್ಲ್ಯಾಶ್ ಮಾಬ್’ನಿಂದ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕರು ಮತ್ತು ಸ್ವಯಂಸೇವಕ ವಿದ್ಯಾರ್ಥಿಗಳ ಸಮರ್ಪಿತ ಪ್ರಯತ್ನಗಳಿಂದ ಈ ಕಾರ್ಯಕ್ರಮ ನಿರ್ವಹಿಸಯಿತು. ತೇಜಸ್ 2025ರ ಹೈಲೈಟ್ ಆಗಿ, BCA ಅಂತಿಮ ವರ್ಷದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ 'ಕಟ್‌ದ ಕ್ಯೂ' ಡಿಜಿಟಲ್ ಅಪ್ಲಿಕೇಶನ್‌ನ ಲಾಂಚ್ ನಡೆಯಿತು.
ಪ್ರೊ ಚಾನ್ಸಲರ್ ಫಾ। ಸ್ವಿಬರ್ಟ್ ಡಿಸಿಲ್ವಾ ಎಸ್‌ಜೆ, ವೈಸ್ ಚಾನ್ಸಲರ್ ಫಾ। ಡಾ। ವಿಕ್ಟರ್ ಲೋಬೋ ಎಸ್‌ಜೆ, ಸ್ಕೂಲ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ ಡೀನ್ ಫಾ। ಡೆನ್ಜಿಲ್ ಲೋಬೋ ಎಸ್‌ಜೆ ಮತ್ತು ಶಿಫ್ಟ್ IIIರ ಡೈರೆಕ್ಟರ್ ಫಾ। ಫ್ರಾನ್ಸಿಸ್ ಪಿಂಟೋ ಎಸ್‌ಜೆ ಅವರ ಹಾಜರಿಯೊಂದಿಗೆ ಉತ್ಸವದ ಸಮಾಪ್ತಿ ಸಮಾರಂಭ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ