ವಿಷುವಂದು ಹೊಸವರ್ಷ ನವಗೆಲ್ಲ ಹೇಳಿಂಡು
ಕೊಶಿ ತುಂಬ ಆತೀಗ ಉಲ್ಲಾಸಲಿ..
ಹಸುರಾಗಿ ಕಾಣುತ್ತು ಚೆಗುರಿಪ್ಪ ಮರವೆಲ್ಲ
ಬಸುರೀಗ ಭೂ ಅಬ್ಬೆ ಬಹು ಚೆಂದಲಿ..
ಉದಿಯಾತು ಏಳೆಕ್ಕು ಬಹುಬೇಗ ಎಲ್ಲೋರು
ಮದುವೆಯಾ ಮನೆ ಹಾಂಗೆ ಕಂಡು ಎಲ್ಲ
ಎದೆ ಎಲ್ಲ ತುಂಬಿತ್ತು ಕಣಿ ಕಂಡು ಉದಿ ಕಾಲ
ಮೆದು ಮಾತು ಆಡೆಕ್ಕು ನುಡಿಯೆ ಬೆಲ್ಲ..
ದೇವರೊಳ ಉದ್ದಿಕ್ಕಿ ಮಣೆಮೇಲೆ ಮಡಿವಸ್ತ್ರ
ದೇವರಾ ವರದಾಂಗೆ ಫಲವಸ್ತುವೆ..
ಕಾವವನೆ ಹರಸಿಕ್ಕು ನಮ್ಮೆಲ್ಲ ಮನೆಯೋರ
ಗಾವಿನಾ ಸಮಯಲ್ಲು ಸಂತೋಷವೆ..
ಕನ್ನಾಟಿ ಮಡುಗೆಕ್ಕು ಕಾಣಿಕೆಗಳೊಟ್ಟಿಂಗೆ
ಹೊನ್ನಿನಾ ಸರವಲ್ಲಿ ದೇವರಿಂಗೆ
ಹಣ್ಣುಗಳ ನೆಟ್ಟಿಕಾಯ್ಗಳ ರಾಶಿ ಬಹು ಚೆಂದ
ಮಣ್ಣಿನಾ ಕಾಣಿಕೆಗೊ ರಕ್ಷಕಂಗೆ
ಹೊಡಾಡಿ ದೇವಂಗು ಹೆರಿಯೋರ ಕಾಲಿಡಿದು
ಬೇಡೆಕ್ಕು ವರಗಳಾ ಉದಿಯಪ್ಪಗ..
ಮಾಡೆಕ್ಕು ಪಾಯಸವ ಉಣ್ಣೆಕ್ಕು ಒಟ್ಟಿಂಗೆ
ದೂಡೆಕ್ಕು ಕಷ್ಟಗಳ ಗೆಲುವಪ್ಪಗ..
- ಗುಣಾಜೆ ರಾಮಚಂದ್ರ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ