ಮೇ 2ರಂದು ಮಂಗಳೂರಿನಲ್ಲಿ ಶಂಕರಾಚಾರ್ಯ ಜಯಂತಿ

Chandrashekhara Kulamarva
0




ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹವ್ಯಕ ಮಂಡಲ ಇವರ ಸಹಕಾರದೊಂದಿಗೆ  ಶ್ರೀ ಶಂಕರಾಚಾರ್ಯ ಜಯಂತಿ ಮೇ 2 ರಂದು  ಬೆಳಿಗ್ಗೆ 10.30 ಗಂಟೆಗೆ  ಶಂಕರಶ್ರೀ ಸಭಾಭವನ, ಶ್ರೀ ಭಾರತೀ ಸಮೂಹ ಸಂಸ್ಥೆಗಳು ನಂತೂರು ಇಲ್ಲಿ  ನಡೆಯಲಿದೆ.   


ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಘನ ಉಪಸ್ಥಿತಿಯಲ್ಲಿ,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿರುವರು.


ಮೂಡಬಿದಿರೆ  ನಿವೃತ್ತ ಮು
ಖ್ಯೋಪಾಧ್ಯಾಯ ಭಾಸ್ಕರ ಭಟ್ ಹೊಸಮನೆ, ಇವರು ಶ್ರೀ ಶಂಕರಾಚಾರ್ಯ ಜಯಂತಿ ಸಂದೇಶವನ್ನು ನೀಡಲಿರುವರು ಎಂದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments
Post a Comment (0)
To Top