ಕಾಸರಗೋಡು: ಕುಂಬಳೆ ಸೀಮೆಯ ಪ್ರಮುಖ ದೇವಸ್ಥಾನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಇಂದು ಶ್ರೀ ಮಹಾಗಣಪತಿಗೆ ಸಂಭ್ರಮದ ಮೂಡಪ್ಪ ಸೇವೆ ನಡೆಯಲಿದೆ.
ಈ ಹಿಂದೆ 1992ರಲ್ಲಿ ಮಧೂರಿನಲ್ಲಿ ಮೂಡಪ್ಪ ಸೇವೆ ನಡೆದಿತ್ತು. ಮಹಾಗಣಪತಿಯ ಮೂರ್ತಿಗೆ ಮೂಗಿನ ವರೆಗೂ ಅಪ್ಪದ ರಾಶಿಯನ್ನು ಮುಚ್ಚಿ ನೈವೇದ್ಯ ಮಾಡುವ ಒಂದು ವಿಶೇಷ ಸೇವೆಯೇ ಈ ಮೂಡಪ್ಪ ಸೇವೆ.
ಮಾ. 27ರಿಂದ ಮಧೂರು ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಉತ್ಸವಗಳು ಜರುಗುತ್ತಿದ್ದು, ಪ್ರತಿದಿನ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಮಧೂರು ಕ್ಷೇತ್ರಕ್ಕೆ ಇಂದು ಆಗಮಿಸುವ ಭಕ್ತಾದಿಗಳು ಗಮನಿಸಲೇಬೇಕಾದ ಒಂದು ವಿಚಾರವೆಂದರೆ, ಕ್ಷೇತ್ರದ ಪರಿಸರದಲ್ಲಿ ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದ್ದು, ದೂರದ ಊರುಗಳಿಂದ ಬರುವ ಭಕ್ತರ ವಾಹನಗಳ ಪಾರ್ಕಿಂಗ್ ಗೆ ನಿಗದಿಪಡಿಸಲಾದ ಜಾಗದಲ್ಲೆಲ್ಲ ನೀರು ತುಂಬಿದೆ. ಹೀಗಾಗಿ ಪಾರ್ಕಿಂಗ್ ಸ್ವಲ್ಪ ಕಷ್ಟವಾಗಬಹುದು.
ಈ ಹಿಂದೆ 1992ರಲ್ಲಿ ಮಧೂರಿನಲ್ಲಿ ಮೂಡಪ್ಪ ಸೇವೆ ನಡೆದಿತ್ತು. ಮಹಾಗಣಪತಿಯ ಮೂರ್ತಿಗೆ ಮೂಗಿನ ವರೆಗೂ ಅಪ್ಪದ ರಾಶಿಯನ್ನು ಮುಚ್ಚಿ ನೈವೇದ್ಯ ಮಾಡುವ ಒಂದು ವಿಶೇಷ ಸೇವೆಯೇ ಈ ಮೂಡಪ್ಪ ಸೇವೆ.
ಮಧೂರಿನಲ್ಲಿ 33 ವರ್ಷಗಳ ಬಳಿಕ ಈ ವಿಶೇಷ ಸೇವೆ ನಡೆಯುತ್ತಿದ್ದು, ಭಕ್ತರು ಈ ವಿದ್ಯಮಾನಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯ ಮೂಡಪ್ಪ ಸೇವೆಗಾಗಿ 16 ಮುಡಿ ಅಕ್ಕಿಯಿಂದ ಅಪ್ಪ ತಯಾರಿಸಲಾಗುತ್ತದೆ. ಪಿ.ಕೆ ಧನಂಜಯ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಬಾಣಸಿಗರು ಅಪ್ಪ ತಯಾರಿಕೆಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಹೀಗೆ ತಯಾರಾಗುವ ಸಾವಿರಾರು ಅಪ್ಪಗಳನ್ನು ದೇವರ ಸಮರ್ಪಣೆಗೆ ಸಿದ್ಧಪಡಿಸಲಾಗುವುದು. ಇಂದು ಸಂಜೆ ಉತ್ಸವ ಬಲಿ ನಡೆದು, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಸವಾರಿ ನಡೆದು, ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ ಜರಗಿದ ಬಳಿಕ ರಾತ್ರಿ 10ಕ್ಕೆ ಶ್ರೀ ಭೂತಬಲಿ ಮಹಾ ಮೂಡಪ್ಪಾವಾಸ ಹೋಮ ನಡೆಯಲಿದೆ. ಬಳಿಕ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪ ಸಮರ್ಪಣೆಯಾಗಲಿದೆ.
ನಾಳೆ (ಎ. 6ಕ್ಕೆ) ಅಪೂಪ ಪ್ರಸಾದ ವಿತರಣೆ
ಎ. 6ರಂದು ಸೂರ್ಯೋದಯಕ್ಕೆ ಹತ್ತು ಸಮಸ್ತರ ಮುಂದೆ ಪ್ರಾರ್ಥಿಸಿ, ಕವಾಟೋದ್ಘಾಟನೆ ನಡೆಯಲಿದೆ. ಅಪೂಪ ಪರ್ವತದ ಮಧ್ಯದಿಂದ ಮೂಡಿ ಬರುವ ಬೊಡ್ಡಜ್ಜ ಶ್ರೀ ಮಧೂರು ಸಿದ್ದಿವಿನಾಯಕ ದೇವರ ದಿವ್ಯ ದರ್ಶನ, ವಿಶೇಷ ಅಭಿಷೇಕ, ಪ್ರಸನ್ನ ಪೂಜೆ, ಅಪೂಪ ಪ್ರಸಾದ ವಿತರಣೆ ನಡೆಯಲಿದೆ.
ಮಧೂರು ಕ್ಷೇತ್ರಕ್ಕೆ ಇಂದು ಆಗಮಿಸುವ ಭಕ್ತಾದಿಗಳು ಗಮನಿಸಲೇಬೇಕಾದ ಒಂದು ವಿಚಾರವೆಂದರೆ, ಕ್ಷೇತ್ರದ ಪರಿಸರದಲ್ಲಿ ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದ್ದು, ದೂರದ ಊರುಗಳಿಂದ ಬರುವ ಭಕ್ತರ ವಾಹನಗಳ ಪಾರ್ಕಿಂಗ್ ಗೆ ನಿಗದಿಪಡಿಸಲಾದ ಜಾಗದಲ್ಲೆಲ್ಲ ನೀರು ತುಂಬಿದೆ. ಹೀಗಾಗಿ ಪಾರ್ಕಿಂಗ್ ಸ್ವಲ್ಪ ಕಷ್ಟವಾಗಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ