ಮಂಗಳೂರು: ರಾಜಕೀಯ ನಾಯಕರು ಮತ್ತು ಸಾಮಾಜಿಕ ಸುಧಾರಕರು ಹೇಳಿದ ಮಾತು ಕೇಳದವರು ಧಾರ್ಮಿಕ ನಾಯಕರ ಮಾತು ಕೇಳಿ ಸುಧಾರಣೆಗೆ ಸಮ್ಮತಿಸುತ್ತಾರೆ. ವಿಶ್ವದ ಕ್ರೈಸ್ತ ಧರ್ಮದ ನಾಯಕರಾದರೂ ಪೋಪ್ ಫ್ರಾನ್ಸಿಸ್ ಅವರು ಶಾಂತಿ ಸಾರಿದರು ಮತ್ತು ಪರಿಸರ ಉಳಿಸಲು ಕರೆನೀಡಿದ್ದರು ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್ ರೈ ಹೇಳಿದರು.
ಅವರು ಪಿಂಗಾರ ಸಂಸ್ಥೆಯ ರೇಮಂಡ್ ಡಿಕೂನಾ ತಾಕೊಡೆ ಅವರ ಮುಂದಾಳತ್ವದಲ್ಲಿ ನಡೆದ ಪೋಪ್ ಫ್ರಾನ್ಸಿಸ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ನೀಡಿ ಬಿಷಪ್ ಹೌಸ್ ಚರ್ಚ್ ಬಿಲ್ಡಿಂಗ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯ ವರಿಷ್ಠಾ ದಿಕಾರಿ, ಆಯುರ್ವೇದ ಕ್ಷಾರ ವೈದ್ಯ ಡಾ ಸುರೇಶ ನೆಗಳಗುಳಿ ಮಾತನಾಡಿ, ಸತ್ಯಂ ವದ ಧರ್ಮ ಚರ ಹಾಗೆ ಸುಭಿಕ್ಷವಾದ ಉದಾತ್ತ ಧ್ಯೇಯಗಳ ಧರ್ಮ ನಾಯಕರು ಎಲ್ಲಾ ಧರ್ಮದ ನಾಯಕರಿಗೆ ಮೇಲ್ಪಂಕ್ತಿಯನ್ನು ಹಾಕುತ್ತಾರೆ ಎಂದರು.
ಅನುಪಮ ಪತ್ರಿಕೆಯ ಪ್ರಬಂಧಕರಾದ ಮಹಮ್ಮದ್ ಮೊಹಿಸಿನ್ ಮಾತನಾಡಿ, ಅತೀ ಹೆಚ್ಚು ಗಟ್ಟಿ ಧ್ವನಿಯಲ್ಲಿ ಯುದ್ಧವನ್ನು ಖಂಡಿಸಿದ ಈ ಪೋಪ್ ಪ್ರಾನ್ಸಿಸ್ ನಿಜಕ್ಕೂ ನೆನಪಿಗೆ ಉಳಿಯುವರು ಎಂದರು.
ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಅಲೋಶಿಯಸ್ ಕಾಲೇಜು ಜೆಸ್ವಿತ್ ಧರ್ಮಗುರು ನಡೆಸುತ್ತಾರೆ ಅದೇ ಪಂಥಕ್ಕೆ ಪೋಪ್ ಪ್ರಾನ್ಸಿಸ್ ಕ್ರೈಸ್ತ ಧರ್ಮ ಗುರು ಮೂಲಕವಾಗಿ ಸೇರಿ ಇಡೀ ಜಗತ್ತಿನಲ್ಲಿ ಎಲ್ಲಾ ಪಂಥದ ಕ್ರೈಸ್ತ ಧರ್ಮದ ಜನರಿಗೆ ಮುಖಂಡರು ಆದರು.ಇದು ದೇವತಾ ಭಾಗ್ಯ.ಇವರ ಅಗಲಿಕೆಯ ನೋವು ಅಪಾರವಾಗಿದೆ ಎಂದು ಕಂಬನಿ ಮಿಡಿದರು.
ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಅಧ್ಯಕ್ಷ ಕೆ ವಸಂತ ರಾವ್, ಜನರಲ್ ಇಂಜಿನಿಯರಿಂಗ್ ಅ್ಯಂಡ್ ಎಲೆಕ್ಟ್ರಿಕಲ್ಸ್ ಜಂಟಿ ಮಾಲಕರಾದ ಎಡೋಲ್ಫ ಡಿಸೋಜ, ಗೋಲ್ಡಿನ್ ಡಿಸೋಜ, ಮತ್ತು ಡೋಲ್ಫಿ ಡಿಸೋಜ ವೇದಿಕೆಯಲ್ಲಿ ಇದ್ದರು. ರಿಯಾನಾ ಡಿಕೂನಾ ನಿರೂಪಿಸಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ