ಮಂಗಳೂರು: ನಮ್ಮ ರಾಷ್ಟ್ರದ ಸಂಸ್ಕೃತಿಯ ಪ್ರತೀಕವಾಗಿರುವ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳ ಕುರಿತು ಬದ್ಧತೆ ಹಾಗೂ ಆಸಕ್ತಿ ಅಗತ್ಯ. ಬದುಕಿನ ಚೆಲುವಿಗೆ ಮತ್ತು ನೆಮ್ಮದಿಗೆ ಸಂಗೀತ ಸಹಾಯಕವಾಗಿದ್ದು ಯುವ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಿದೆ ಎಂದು ಏಷ್ಯನ್ ಪೇಂಟ್ಸ್ ನ ನಿವೃತ್ತ ಅಧಿಕಾರಿ ಹಾಗೂ ತರಬೇತುದಾರ ಎ.ಕೆ. ಅಯ್ಯ ನುಡಿದರು.
ಅವರು ಸುರತ್ಕಲ್ ನ ಮಣಿ ಕೃಷ್ಣ ಸ್ವಾಮಿ ಅಕಾಡಮಿ ಮತ್ತು ನಾಗರಿಕ ಸಲಹಾ ಸಮಿತಿಗಳು ಸುರತ್ಕಲ್ ಮೇಲುಸೇತುವೆಯ ತಳಭಾಗ ದಲ್ಲಿಯ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕತಿಕ ವೇದಿಕೆಯಲ್ಲಿ ನಡೆಯುತ್ತಿರುವ ಉದಯ ರಾಗ ಸರಣಿ ಕಾರ್ಯಕ್ರಮದ ಉದಯ ರಾಗ 61 ರಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಯುವ ಕಲಾವಿದ ಆತ್ರೇಯ ಗಂಗಾಧರ, ಹೊಸಬೆಟ್ಟು ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಹೇಮಂತ್ ಭಾಗವತ್, ಮೂಲ್ಕಿ, ಹಾರ್ಮೋನಿಯಂನಲ್ಲಿ ಪ್ರಥಮ್ ಆಚಾರ್ಯ ಸುರತ್ಕಲ್ ತಬಲಾದಲ್ಲಿ, ಸುಜಾತಾ ಎಸ್. ಭಟ್ ತಂಬೂರದಲ್ಲಿ, ರಮನಾಥ ಕಿಣಿ ತಾಳದಲ್ಲಿ ಸಹಕರಿಸಿದರು.
ಕೃಷ್ಣಮೂರ್ತಿ ಚಿತ್ರಾಪುರ ಸ್ವಾಗತಿಸಿದರು. ಮಣಿ ಕೃಷ್ಣಸ್ವಾಮಿ ಅಕಾಡಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಪೇಜಾವರ ವಂದಿಸಿದರು. ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಕೆ ರಾಜ್ ಮೋಹನ್ ರಾವ್, ಸಂಯೋಜಕ ಸತೀಶ್ ಸದಾನಂದ್, ಗಂಗಾಧರ ಹೊಸಬೆಟ್ಟು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ