ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಡಾ. ವೈ ಭರತ್ ಶೆಟ್ಟಿ ವಾಗ್ದಾಳಿ

Chandrashekhara Kulamarva
0



ಮಂಗಳೂರು : ಸಿಇಟಿ ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿರುವ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿರುವ ಮಂಗಳೂರು ಉತ್ತರ ಕ್ಷೇತ್ರ ಶಾಸಕ ಡಾ. ವೈ ಭರತ್ ಶೆಟ್ಟಿ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಟಿಪಳ್ಳ ಗಣೇಶಪುರದ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಹೋಗಬಾರದೆಂದು ಬ್ರಾಹ್ಮಣ ಮಕ್ಕಳ ಜನಿವಾರವನ್ನು ಕತ್ತರಿಸಿರುವುದರ ಹಿಂದೆ ಅಧಿಕಾರಿಗಳ ಕೈವಾಡವಿದೆ. ಆದರೆ, ಈ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದವರು ಯಾರು? ಇದಕ್ಕೆಲ್ಲಾ ಸರಕಾರವೇ ನೇರ ಹೊಣೆ. ಸರಕಾರವು ಇದನ್ನು ಅಧಿಕಾರಿಗಳು ಮಾಡಿದ್ದೆಂದು ಹೇಳುತ್ತಿದೆ. ಮೂರು ಜಾಗದಲ್ಲಿ ಇದು ಆಗಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.


ಈ ಕಾಂಗ್ರೆಸ್ ಹಿಂದೂ ವಿರೋಧಿ ಮನಸ್ಥಿತಿ ಹೊಂದಿದ್ದು ಅಧಿಕಾರಕ್ಕೆ ಬಂದ ಬಳಿಕ ತನ್ನ  ವಕ್ರ ಬುದ್ದಿ ತೋರಿಸುತ್ತಿದೆ. ಮೂರು ಬ್ರಾಹ್ಮಣ ಮಕ್ಕಳ ಜನಿವಾರವನ್ನು ಕತ್ತರಿಸಿದಾಗ ನಾವು ನಮ್ಮ ಮನೆಯಲ್ಲಿ ಕುಳಿತುಕೊಂಡು ಯಾರೋ ಮೂರು ಮಕ್ಕಳ ಜನಿವಾರ ಕತ್ತರಿಸಿದಾರಪ್ಪ ಎಂಬ ಮನಸ್ಥಿತಿಯಲ್ಲಿ ನಾವಿರುತ್ತೇವೋ ಅಥವಾ ಇವತ್ತು ಬ್ರಾಹ್ಮಣರಿಗೆ ಆಗಿದೆ. ನಾಳೆ ಶೆಟ್ರಿಗೆ ಆಗುತ್ತೆ, ಬಿಲ್ಲವರಿಗೆ ಆಗುತ್ತೆ, ದೇವಾಡಿಗರಿಗೆ ಆಗುತ್ತದೆ ಎಂಬ ಪ್ರಶ್ನೆ ನಮ್ಮನ್ನು ಕಾಡದಿದ್ದರೆ ಮುಂದೆ ನಾವು ಸಮಸ್ಯೆಯನ್ನು ಎದುರಿಸುತ್ತೇವೆ.


ನಾವು ಆ ಜಾತಿ, ಈ ಜಾತಿ... ಬಿಲ್ಲವನಿಗೆ ಆಗಿದೆ, ಬಂಟರಿಗೆ ಆಗಿದೆ, ನನಗೆ ಆಗಿಲ್ಲ ಎಂಬ ಮನಸ್ಥಿತಿಯಲ್ಲಿ ಕೂತರೆ ನಮ್ಮನ್ನು ಕತ್ತರಿಸುವ ವ್ಯಕ್ತಿಗಳು ಕಾಯ್ತಾ ಇದ್ದಾರೆ ಅಷ್ಟೇ ಎಂದಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top