ಭರತಾಂಜಲಿ ಸಂಸ್ಥೆಯ ಕಿಂಕಿಣಿ ತ್ರಿಂಶತ್ ಸಂಭ್ರಮ
ಮಂಗಳೂರು: ಕಲಿಯುಗದಲ್ಲಿ ಕಲಾ ಸೇವೆಯು ಸಹ ದೇವತಾ ಸೇವೆಯಾಗಿದ್ದು ಇದರಿಂದ ಬದುಕು ಸಾರ್ಥಕವಾಗುವುದು ಎಂದು ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ನುಡಿದರು.
ಅವರು ಭರತಾಂಜಲಿ (ರಿ) ಕೊಟ್ಟಾರ ಮಂಗಳೂರು ಇವರು ನಗರದ ಪುರಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಿಂಕಿಣಿ ತ್ರಿಂಶತ್ 30 ತುಂಬಿದ ಹರ್ಷ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭರತಾಂಜಲಿ ಸಂಸ್ಥೆಯು ಕಲಾ ಶಿಕ್ಷಣದ ಜೊತೆಗೆ ಸಮಾಜಮುಖಿಯಾಗಿ ಬದುಕುವ ರೀತಿ ನೀತಿಯನ್ನು ಅಲ್ಲದೆ ಸಂಸ್ಕಾರ ಹಾಗೂ ಭಾರತೀಯ ಸಂಸ್ಕೃತಿಯ ಅರಿವನ್ನು ಮೂಡಿಸುತ್ತಿರುವುದು, ಅಲ್ಲದೆ ಸಾರ್ವಜನಿಕವಾಗಿಯೂ ಸ್ಪಂದಿಸುತ್ತಿರುವ ಹೊಳ್ಳ ದಂಪತಿಗಳು ಅಭಿನಂದನಾರ್ಹರು ಎಂದು ಹರಸಿದರು.
ಪಂದನಲ್ಲೂರು ಶೈಲಿಯ ಶಾಸ್ತ್ರೀಯ ಚೌಕಟ್ಟಿನಲ್ಲಿ ಕಲಾ ಶಿಕ್ಷಣವನ್ನು ಶದ್ದೆಯಿಂದ ಕಳೆದ ಮೂರು ದಶಕಗಳಿಂದ ನೀಡುತ್ತಾ ಬಂದಿರುವ ಪ್ರತಿಮಾ ದಂಪತಿಗಳ ಸೇವೆ ಮೆಚ್ಚುವಂತದ್ದು ಎಂದು ಗುರುಗಳಾದ ನಾಟ್ಯಾಚಾರ್ಯ ಉಳ್ಳಾಲ್ ಮೋಹನ ಕುಮಾರ್ ಹೇಳಿದರು.
ವಿದ್ವಾನ್ ಕಶೆಕೊಡಿ ಸೂರ್ಯನಾರಾಯಣ ಭಟ್, ಉದ್ಯಮಿಗಳಾದ ಪುಷ್ಪರಾಜ್ ಜೈನ್, ಜಿತೇಂದ್ರ ಕೊಟ್ಟಾರಿ, ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕೇಂದ್ರೀಯ ಅಧ್ಯಕ್ಷ ಏಚ್ ಸತೀಶ್ ಹಂದೆ,ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭರತಾಂಜಲಿಯ ಹಿರಿಯ ಶಿಷ್ಯ ಡಾ. ಶ್ರೇಯಸ್ ಸಂಸ್ಥೆಯೊಂದಿಗೆ ಇರುವ ತನ್ನ ಅವಿನಾಭಾವ ಸಂಬಂಧಗಳನ್ನು ಹಂಚಿಕೊಂಡರು. ಇದೇ ಸಮಯದಲ್ಲಿ ಸಂಸ್ಥೆಯ ವಿದ್ಯಾರ್ಥಿನಿ 2024.25 ರ ಸಾಲಿನ NCC nevy wing ನಲ್ಲಿ ದೇಶದ ಅತ್ಯುತ್ತಮ ಐದು ಕೆಡೆಟ್ ಗಳಲ್ಲಿ ಒಬ್ಬಳಾಗಿ ಆಯ್ಕೆಯಾದ ನಮ್ಮ ಸಂಸ್ಥೆಯ ವಿದ್ಯಾರ್ಥಿನಿ ಲಿಷಾ ಡಿ.ಎಸ್ ಇವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕ ಶ್ರೀಧರ ಹೊಳ್ಳ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ. ವಿದ್ಯಾ ನಿರೂಪಿಸಿದ ಕಾರ್ಯಕ್ರಮದಲ್ಲಿ ನೃತ್ಯ ಗುರು ಪ್ರತಿಮಾ ಶ್ರೀಧರ್ ವಂದಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ವಿದುಷಿ ಅನ್ನಪೂರ್ಣ ರಿತೇಶ್, ವಿದುಷಿ ಪ್ರಕ್ಶಿಲಾ ಜೈನ್, ವಿದುಷಿ ಶ್ರಾವ್ಯ ಅಮೋಘ್ ಶೆಟ್ಟಿ, ವಿದುಷಿ ಮಧುರಾ ಕಾರಂತ್, ವಿದುಷಿ ಮಾನಸ ಕಾರಂತ್, ವಿದುಷಿ ಮಾನಸ ಕುಲಾಲ್, ವಿದುಷಿ ವಂದನಾ ರಾಣಿ ಮೊದಲಾದವರು ಅಮೋಘವಾದ ಭರತನಾಟ್ಯ ಪ್ರದರ್ಶನ ನೀಡಿದರು. ಆಕಾಶ್ ಎಸ್ ಹೊಳ್ಳ, ಅಂಕಿತಾ ಆಕಾಶ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ