ಲೇಖಾ ಲೋಕ-40: ಸಣ್ಣ ಕಥೆಗಳ ಜನಕ ವ್ಯಾಸರಾಯ ಬಲ್ಲಾಳ

Upayuktha
0


ನೇಕ ಕಾದಂಬರಿಗಳು, ಸಣ್ಣ ಕಥೆಗಳನ್ನು ಬರೆದು ಕನ್ನಡ ನಾಡಿಗೆ ನೀಡಿದ ಬಹುಶ್ರುತ ಸಾಹಿತಿ ವ್ಯಾಸರಾಯ ಬಲ್ಲಾಳ ಅವರು, ಸಾಹಿತ್ಯದ ರಸಾನುಭವ ಅಪೇಕ್ಷಿಸುವ ಪ್ರೇಮಿಗಳಿಗೆ ಚಿರಪರಿಚಿತರು. ಇವರ ಪ್ರಸಿದ್ಧ ಕಾದಂಬರಿಗಳಾದ ಬಂಡಾಯ, ಹೇಮಂತಗಾನ, ಅನುರಕ್ತೆ,ವಾತ್ಸಲ್ಯ ಪಥ, ಉತ್ತರಾಯಣ,ಆಕಾಶಕ್ಕೊಂದು ಕಂದೀಲು ಮುಂತಾದವುಗಳನ್ನು ಮತ್ತು ಅನೇಕ ಸಣ್ಣ ಕಥೆಗಳನ್ನು ರಚಿಸಿ, ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿದ ಮಹನೀಯರು.


ಉಡುಪಿಯ ಸಾಹಿತ್ಯ ಮತ್ತು ಸಂಗೀತ ಉಪಾಸನೆ ಕುಟುಂಬದಲ್ಲಿಯೇ ವ್ಯಾಸರಾಯ ಬಲ್ಲಾಳರು ತಾ॥1-12-1923 ರಂದು ಜನಿಸಿದರು. ಇವರು ಕೇವಲ ಹಳೇ ಮೆಟ್ರಿಕ್ ಪಾಸು ಮಾಡಿ, ಮುಂಬಯಿಯಲ್ಲಿ ಕಾಲ್ಟೆಕ್ಸ್ ಕಂಪನಿ ಸೇರಿದರು. ಅಲ್ಲಿಯೇ ಸುಧೀಘ೯ ಸೇವೆ ಸಲ್ಲಿಸಿ, ಹಿರಿಯ ಅಧಿಕಾರಿಯಾಗಿ ನಿವೃತ್ತಿ ಪಡೆದರು. ನಿವೃತ್ತರಾದರೂ, ಮಂಬಯಿಯಲ್ಲಿ ನೆಲೆಸಿ,ವಾಚನ,ಕಥೆ ಕಾದಂಬರಿಗಳನ್ನು ಬರೆಯಲು ಮುಂದಾದರು. ವ್ಯಾಸರಾಯ ಬಲ್ಲಾಳರು ತಮ್ಮ ಕೊನೆಯ ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದು, ಅಧ್ಯಯನವನ್ನು ಬರವಣಿಗೆಯನ್ನು ಮುಂದುವರೆಸಿದರು. ಮುಂಬಯಿಯಲ್ಲಿ ಕನಾ೯ಟಕ ಸಂಘದ ನಂಟಿತ್ತು ಮತ್ತು ಇವರು ಕನ್ನಡ ಇನ್ಫರ್ಮೇಷನ್ ದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಬರವಣಿಗೆಗೆ ಮುಖ್ಯ ಪ್ರೇರಣೆ ಮಂಬಯಿ ವಾಸ, ಅಲ್ಲಿಯ ಸಂಕೀಣ೯ತೆ,ವೈಲಕ್ಷಣಗಳನ್ನು ಆಳವಾಗಿ ಅರಿತು, ಅನೇಕ ಪ್ರಸಿದ್ಧ ಕಾದಂಬರಿಗಳನ್ನು ಬರೆದರು.ಅಲ್ಲಿನ ಮಧ್ಯಮ ವಗ೯ದ ಕುಟುಂಬ ವ್ಯವಸ್ಥೆ, ಆಥಿ೯ಕ ವ್ಯವಹಾರ, ಸಾಮಾಜಿಕ ರೀತಿ ನೀತಿ ಅವಲೋಕನ ಮಾಡಿ, ಬರಹ ರೂಪದಲ್ಲಿ ಅಭಿವ್ಯಕ್ತಿ ಮಾಡಿದರು. ಮುಂಬಯಿ ಜೀವನದ ಜನನಿಬಿಡತೆ, ಏಕಾಕಿತನ,ವೈವಿಧ್ಯಮಯ ಮನಸ್ಸು, ಪತಿ ಪತ್ನಿಯ ನೋವು ನಲಿವುಗಳನ್ನು ತಮ್ಮ ಕಥಾವಸ್ತುಗಳಲ್ಲಿ ನಿರೂಪಿಸಿದರು. ಮುಂಬಯಿ ಜನರ ಜೀವನಶೈಲಿ ಶ್ರಮ ಜೀವಿಗಳ ಬದುಕನ್ನು ಭೂತಗನ್ನಡಿಯಲ್ಲಿ ನೋಡಿ, ತಮ್ಮ ಕೃತಿಗಳಲ್ಲಿ ಚಿತ್ರಿಸಿ,ನಾಡಿಗೆ ನೀಡಿದರು. ಮುಂಬಯಿ ನಗರದ ಐದಾರು ದಶಕಗಳ ವಾಸ ಇವರನ್ನು ಮಧ್ಯಮವಗ೯ದ ನೋವು ನಲಿವನ್ನು ಸಮಾನವಾಗಿ ಬಿಂಬಿಸುವ ಪ್ರಯತ್ನ ಮಾಡಿದರು. ಮರಾಠಿ ಜನರ ಜೀವನವನ್ನು ಮರಾಠಿ ಕಾದಂಬರಿ ನಿರೂಪಿಸಿದಕ್ಕಿಂತ, ಇವರ ಕಥೆಗಳಲ್ಲೇ ಹೆಚ್ಚಾಗಿ ನಾವು ಕಾಣಬಹುದೆಂದು ಶ್ರೀನಿವಾಸ ಹಾವನೂರು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ವ್ಯಾಸರಾಯ ಬಲ್ಲಾಳರು ವೈವಿಧ್ಯಮಯ ಬರಹಗಳನ್ನು ಬರೆದರು. ಕಾದಂಬರಿ, ಕಥೆ, ರಾಜಕೀಯ ವಿಡಂಬನೆ, ಮುಂಬಯಿ ಕನ್ನಡಿಗರ ಸಮಸ್ಯೆ ತಾತ್ವಿಕ ಚಿಂತನೆ, ಗ್ರಂಥ ವಿಮಶೆ೯, ಆಕಾಶವಾಣಿ ಭಾಷಣ, ನಾಟಕ, ಪ್ರವಾಸ ಕಥನ ಹೀಗೆ ಹಲವಾರು ಲೇಖನಗಳನ್ನು ಬರೆದು ಪ್ರಖ್ಯಾತರಾದ ಸಾಹಿತಿ. ಪತ್ರಿಕೋದ್ಯಮದಲ್ಲೂ ಕೈಯಾಡಿಸಿ, "ನುಡಿ "ಪತ್ರಿಕೆಯಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ರಾಜಕೀಯ ಅಭಿಪ್ರಾಯ, ಕಾಮಿ೯ಕ ಶ್ರಮಿಕನ ಧ್ವನಿಯನ್ನು ತಮ್ಮ ಪತ್ರಿಕೆಯಲ್ಲಿ ನಿರೂಪಿಸಿದರು. ಇಂತಹ ಚಿಂತನೆಗಳು ತಮ್ಮ ಕಾದಂಬರಿಯಲ್ಲಿ ಲೇಖನಿ ಮೂಲಕ ಬರೆದರು.ಇವರು ಬರೆದ ಪ್ರವಾಸ ಕಥನ, ಭಾರತೀಯನ ಅನನ್ಯತೆ, ಹುಡುಕಾಟ, (ನಾನೊಬ್ಬ ಭಾರತೀಯ ಪ್ರವಾಸಿ) ಆಳವಾಗಿ ಬರೆದು ವಿಶ್ಲೇಷಣೆ ಮಾಡಿದ್ದಾರೆ. ನಮ್ಮ ಬದುಕಿನ ವಿವಿಧ ಸ್ತರಗಳ ಅಪ್ರಮಾಣಿಕತೆ, ಮನುಷ್ಯನ ಅಂತರಂಗಕ್ಕೂ ಬಹಿರಂಗಕ್ಕೂ ಸಾಂಗತ್ಯವಿಲ್ಲದಿದ್ದಾಗ, ಆಸೆಗೆ ಬಾಹ್ಯ ಸ್ಥಿತಿ ಅನುಕೂಲತೆಯಿಲ್ಲದೆಯಿರುವಾಗ,ಅಪ್ರಮಾಣಿಕತೆ ಪ್ರಕಟಿಸುವ ಹಂತ ತಲುಪುತ್ತದೆಂದು ನಿರೂಪಿಸಿದ ಮಹನೀಯರು. ಶೋಷಣೆ, ಸುಳ್ಳು ವಂಚನೆ, ತಮ್ಮ ಕಾದಂಬರಿಗಳಲ್ಲಿ ಯಾವ ರೀತಿಯಲ್ಲಿ ನಡೆಯುವುದೆಂದು ಆಳವಾಗಿ ಗಮನಿಸಿ, ಬರೆದ ಸಾಹಿತಿ. ಮಹಿಳೆಯರ ಅಸಹಾಯಕತೆ, ಸೂಕ್ಷ್ಮ ಶೋಷಣೆ, ವೈಚಾರಿಕ ಸ್ವಾತಂತ್ರ್ಯ ಇಲ್ಲದೇಯಿರುವುದು, ಮುಂತಾದ ಅನೇಕ ಸಮಸ್ಯೆಗಳು ಇವರ ಅನುರಕ್ತೆ ಕಾದಂಬರಿ, ಹೇಮಂತ ಗಾನ, ಬಂಡಾಯದ ನಯನ ಕಾದಂಬರಿಗಳಲ್ಲಿ ಗಮನಿಸಬಹುದು. ಬಹುತೇಕ ಇವರ ಕಥನಗಳು ದುಃಖಾಂತ್ಯ ಹೊಂದಿವೆ.


ವ್ಯಾಸರಾಯ ಬಲ್ಲಾಳರು ನಾಲ್ಕು ಕಥಾ ಸಂಕಲನಗಳನ್ನು, ಎರಡು ನಾಟಕಗಳು, ಎಂಟು ಕಾದಂಬರಿಗಳು,ಒಂದು ಮಕ್ಕಳ ಸಾಹಿತ್ಯ, ಎರಡು ಲೇಖನ ಸಂಗ್ರಹ, ಬರೆದು ಕನ್ನಡ ನಾಡಿಗೆ ನೀಡಿದ ಮಹಾನುಭಾವರು. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಪ್ರಮುಖವಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನಾ೯ಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಅನುರಕ್ತೆ ಎಂಬ ಕಾದಂಬರಿಗೆ ಕನಾ೯ಟಕ ಸರಕಾರದ ಬಹುಮಾನ, ಅ.ನ.ಕೃ.ಪ್ರಶಸ್ತಿ,ಹಾಗೂ ನಿರಂಜನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಬಿಎಂಶ್ರೀ ಪ್ರಶಸ್ತಿ, ಪರ್ಯಾಯ ಪ್ರಶಸ್ತಿ ಎ ಎನ್ ಕೃಷ್ಣರಾವ್ ಪ್ರಶಸ್ತಿ, ಗದ್ಯಭಾಸ್ಕರ ಪ್ರಶಸ್ತಿ, ಡಿ ವಿ ಜಿ ಪ್ರಶಸ್ತಿ, ಮತ್ತು ಕಾಕ೯ಳಜಿಲ್ಲೆಯ ಸಮ್ಮೇಳನದ ಅಧ್ಯಕ್ಷತೆ, ಅದಲ್ಲದೇ ಮದರಾಸು ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಯಶಸ್ವಿಗೊಳಿಸಿದ ಸಾಹಿತಿ. ಮಹಾರಾಷ್ಟ್ರ ಸರಕಾರದ ಗೌರವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇವರ ಎರಡು ಪ್ರಸಿದ್ಧ ಕಾದಂಬರಿಗಳಾದ ಅನುರಕ್ತೆ, ವಾತ್ಸಲ್ಯ ಪಥ ಚಲನಚಿತ್ರವಾಗಿವೆ. ಬಂಡಾಯ ಕಾದಂಬರಿ ಕಿರುತೆರೆಯಲ್ಲಿ ಪ್ರಸಾರವಾಗಿದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top