ಕೆಲರಾಯ್ ಚರ್ಚ್ ವತಿಯಿಂದ ಪೋಪ್ ಫ್ರಾನ್ಸಿಸ್ ಹಾಗೂ ಪಹಲ್ಗಾಮ್ ಹುತಾತ್ಮರಿಗೆ ಶ್ರದ್ಧಾಂಜಲಿ ಸಭೆ

Upayuktha
0



ಕೆಲರಾಯ್: 25.04.2025 ರಂದು ಸಂಜೆ 5.30 ಗಂಟೆಗೆ ಚರ್ಚ್ ಸಭಾಂಗಣದಲ್ಲಿ, ಕಥೊಲಿಕ್ ಜಗದ್ಗುರು ಪೋಪ್ ಫ್ರಾನ್ಸಿಸ್ ಇವರ ಸ್ಮರಣಾರ್ಥ ಹಾಗೂ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮಡಿದ ಹುತಾತ್ಮರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. 


“ಸರ್ವ ಧರ್ಮಗಳ ಸಾರವು ಒಂದೇ. ಅದನ್ನು ತಿಳಿದವರು ಆತಂಕವಾದಿಗಳಾಗಲು ಸಾಧ್ಯವಿಲ್ಲ, ಪೋಪ್ ಫ್ರಾನ್ಸಿಸ್‌ರವರು ಎಲ್ಲಾ ಧರ್ಮಗಳ ಸಾರ ಅರಿತುಕೊಂಡು ಸರ್ವಧರ್ಮಗಳ ಸಮ್ಮೇಳನದಲ್ಲಿ ನಾರಾಯಣ ಗುರುಗಳ ಬಗ್ಗೆ ಮಾತನಾಡಿದ್ದಾರೆ. ಇಬ್ಬರೂ ವಿಶ್ವಶಾಂತಿಯನ್ನು ಬಯಸಿದವರು”, ಎಂದು ಮುಖ್ಯ ಅತಿಥಿಗಳಾಗಿ ಆಗಮಿಸದ್ದ ಎಮ್.ಜಿ.ಹೆಗಡೆಯವರು ತಮ್ಮ ಭಾಷಣದಲ್ಲಿ ಹೇಳಿದರು. 


“ಪೋಪ್ ಫ್ರಾನ್ಸಿಸ್‌ರವರು ಯೇಸುಕ್ರಿಸ್ತನ ಪ್ರತಿರೂಪ. ಬಡಬಗ್ಗರಲ್ಲಿ ಕಾಳಜಿ, ಸಮಾಜದ ಕೆಳಸ್ತರದಲ್ಲಿರುವವರ ನೋವಿಗೆ ಸ್ಪಂದಿಸಿ, ಯುದ್ಧ ಪೀಡಿತ ದೇಶಗಳಿಗೆ ಶಾಂತಿಯ ಸಂದೇಶ ನೀಡಿ, ಪ್ರಕೃತಿಯನ್ನು ಉಳಿಸುವಂತೆ ‘ಲಾವ್ದಾತೊಸಿ’ ಮೂಲಕ ಪರಿಸರ ಸಂರಕ್ಷಣೆಗೆ ಕರೆನೀಡಿ. ಅದರಂತೆ ನಡೆದು ನಮಗೆ ದಾರಿದೀಪವಾಗಿ ಆದರ್ಶ ಮೆರೆದಿದ್ದಾರೆ” ಎಂದು ಕೆಲರಾಯ್ ಚರ್ಚ್ ಧರ್ಮಗುರು ಫಾದರ್ ಸಿಲ್ವೆಸ್ಟರ್ ಡಿ’ಕೋಸ್ಟಾ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಹೇಳಿದರು. ಪೋಪ್’ರವರ ಆತ್ಮಕ್ಕೆ ಪ್ರಾರ್ಥನಾ ವಿಧಿಯನ್ನು ನೆರೆವೇರಿಸಿದರು. 


ಚರ್ಚ್ ಎದುರಿಗೆ, ಗಣ್ಯರಾದಿಯಾಗಿ ಊರಿನ ಸರ್ವ ಧರ್ಮದ ಜನರು ಉಪಸ್ಥಿತರಾಗಿದ್ದು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಡಿದವರಿಗೆ ಮೋಂಬತ್ತಿ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿ ನಮನ ಸಲ್ಲಿಸಿದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿ’ಕೋಸ್ಟಾರವರು ಕಾರ್ಯಕ್ರಮವನ್ನು ನೆರೆವೇರಿಸಿದರು. 


ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಸೆಲಿನ್ ಡಿ’ಮೆಲ್ಲೊ, ಬಿತ್ತುಪಾದೆ ಮಸೀದಿಯ ಅಧ್ಯಕ್ಷರಾದ ಎ.ಎಮ್. ಶೇಖ್ ಹೈದರ್, ಫಾದರ್ ರೋಶನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕಾರ್ಯದ ಮೊದಲು ಪೋಪ್ ಫ್ರಾನ್ಸಿಸ್‌ರವರ ಜೀವನದ ಪುಟ್ಟ ಡೊಕ್ಯುಮೆಂಟರಿಯನ್ನು ಐರಿನ್ ರೇಗೊ ಅವರು ಪ್ರದರ್ಶಿಸಿದರು. 


ಮಂಗಳೂರು ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಸಂದೇಶವನ್ನು ಫಾದರ್ ಸಿಲ್ವೆಸ್ಟರ್ ಡಿ’ಕೋಸ್ಟಾರವರು ಓದಿ ಹೇಳಿದರು. ‘ಕಾಶ್ಮೀರದ ಘಟನೆಯನ್ನು ನಾವೆಲ್ಲ ಖಂಡಿಸುತ್ತೇವೆ. ಸರಕಾರವು ಭಯೋತ್ಪಾದಕರನ್ನು ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮಡಿದವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇವೆ. ಅಂತೆಯೇ ಅವರ ಕುಟುಂಬಕ್ಕೆ ಸಾಂತ್ವಾನ ಹೇಳುತ್ತೇವೆ. ನೆರೆದ ಸರ್ವಧರ್ಮದ ಜನರು ಇದರಲ್ಲಿ ಭಾಗಿಯಾಗಿ ಮಡಿದವರ ಆತ್ಮಗಳಿಗೆ ಶಾಂತಿಯನ್ನು ಕೋರಿದರು.        



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter                       


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top