ಕಾರ್ಕಳದಲ್ಲಿ ರಾಮಾಯಣ ಉಪನ್ಯಾಸ ಮಾಲೆ

Upayuktha
0



ಕಾರ್ಕಳ: ವಿಶ್ವಾಮಿತ್ರರ ಜೊತೆ ಮಿಥಿಲೆಗೆ ಹೊರಟ ರಾಮಲಕ್ಷ್ಮಣರು ಅರಣ್ಯ ಮಧ್ಯದ ಪಾಳು ಬಿದ್ದ ಆಶ್ರಮವನ್ನು ಕಂಡು ವಿಶ್ವಾಮಿತ್ರರಲ್ಲಿ ಪ್ರಶ್ನಿಸಿದಾಗ ಗೌತಮ ಮತ್ತು ಅಹಲ್ಯೆಯ ಕಥೆಯನ್ನು ವಿವರಿಸುತ್ತಾ ಅಹಲ್ಯೆಯು ಶಾಪಕ್ಕೊಳಗಾದ ತಾಣವನ್ನು ತೋರಿಸುತ್ತಾರೆ. 


ಅಲ್ಲಿ ಶ್ರೀರಾಮನಿಂದ ಅಹಲ್ಯೆಯ ಶಾಪ ವಿಮೋಚನೆಯಾಗುತ್ತದೆ. ಅಲ್ಲಿಂದ ಮಿಥಿಲೆಗೆ ತೆರಳಿದ ಅವರು ಜನಕ ಮಹಾರಾಜನ ಆಸ್ಥಾನದಲ್ಲಿದ್ದ ಶಿವಧನುಸ್ಸನ್ನು ರಾಮನು ಎತ್ತಿದಾಗ ಅದು ತುಂಡಾಗುತ್ತದೆ. ಅಸಂಭವವಾದುದನ್ನು ಶ್ರೀರಾಮ ಸಾಧಿಸಿದ ಅನ್ನುವ ಆನಂದದಿಂದ ಅಯೋಧ್ಯೆಯ ದಶರಥ ಮಹಾರಾಜರನ್ನು ಬರಮಾಡಿಕೊಂಡು ಶ್ರೀರಾಮ ಸೀತೆಯ ವಿವಾಹ ನೆರವೇರುತ್ತದೆ ಎಂಬುದಾಗಿ ಸ್ವಾರಸ್ಯಕರವಾದ ಉಪಕತೆಗಳೊಂದಿಗೆ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರಿಯವರು ತಮ್ಮ ಉಪನ್ಯಾಸದಲ್ಲಿ ಪ್ರಸ್ತುತಪಡಿಸಿದರು.


ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025ರ ವರ್ಷ ಪ್ರತೀ ತಿಂಗಳು ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸವನ್ನು ಹಮ್ಮಿಕೊಂಡಿದ್ದು ಮಾಲೆಯ ಚತುರ್ಥ ಸೋಪಾನ ‘ಸಾಕೇತದ ಸಂಭ್ರಮ’ ಎಂಬ ವಿಷಯದ ಕುರಿತು  ಏಪ್ರಿಲ್ 12ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಅವರು ಉಪನ್ಯಾಸ ನೀಡಿದರು.


ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ ಮತ್ತು ಮಿತ್ರಪ್ರಭಾ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಹಾರದ ಪ್ರಾಯೋಜಕತ್ವದೊಂದಿಗೆ ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ‘ಮಣಿ ಮುಕುಟ’ ಎಂಬ ಕವನ ಸಂಕಲನದ ಗೌರವ ಪ್ರತಿಯನ್ನು ಮಾಲತಿ ವಸಂತರಾಜ್ ಅವರು ಎಲ್ಲರಿಗೂ ವಿತರಿಸಿದರು. ಕು| ಶಾರ್ವರಿ ಪ್ರಾರ್ಥಿಸಿದರು. ಡಾ.ಸುಮತಿ ಪಿ.ಯವರು  ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಜಗದೀಶ ಗೋಖಲೆಯವರು ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

        


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top