ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಫೆಲೋಶಿಪ್: ಅರ್ಜಿ ಆಹ್ವಾನ

Upayuktha
0



ಉಡುಪಿ: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ವತಿಯಿಂದ 2024-25 ನೇ ಸಾಲಿನಲ್ಲಿ ಕನಕದಾಸರ ಮುಂಡಿಗೆ ಸಾಹಿತ್ಯ-ತಾತ್ವಿಕ ವಿವೇಚನೆ, ಕರ್ನಾಟಕ ತತ್ವಪದಗಳ ಚಾರಿತ್ರಿಕ ಅಧ್ಯಯನ, ಕನ್ನಡದಲ್ಲಿ ಅನುಭಾವ ಸಾಹಿತ್ಯ-ತಾತ್ವಿಕ ಅಧ್ಯಯನ ಹಾಗೂ ಕನ್ನಡದಲ್ಲಿ ಕೀರ್ತನ ಸಾಹಿತ್ಯದ ಸಮಾಜೋ-ಸಾಂಸ್ಕೃತಿಕ ಅಧ್ಯಯನ ಈ ವಿಷಯಗಳ ಕುರಿತು ಕಿರು ಅಧ್ಯಯನ ನಡೆಸಲು ತಲಾ 1.50 ಲಕ್ಷ ರೂ. ಗಳಂತೆ ಫೆಲೋಶಿಪ್ ನೀಡಲಿದ್ದು, ಆಸಕ್ತ ಯುವ ಸಂಶೋಧನಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

12 ತಿಂಗಳ ಅವಧಿಯ ಈ ಅಧ್ಯಯನ ಯೋಜನೆಯ ಬಗ್ಗೆ ಆಸಕ್ತ 20 ರಿಂದ 55 ವರ್ಷದೊಳಗಿನ ಸಂಶೋಧನಾರ್ಥಿಗಳು ತಮ್ಮ ವಿದ್ಯಾರ್ಹತೆ, ಸಂಶೋಧನೆಯ ಬಗೆಗಿನ ಅನುಭವ ಹಾಗೂ ತಮ್ಮ ಆಸಕ್ತಿ ಕ್ಷೇತ್ರಗಳ ಒಳಗೊಂಡ ವಿವರಗಳನ್ನು ಹಾಗೂ ಆಯ್ಕೆ ಮಾಡಿಕೊಂಡ ವಿಷಯವನ್ನು ಕುರಿತು ಅಧ್ಯಯನ ವ್ಯಾಪ್ತಿ ಮತ್ತು ಆಕರ ಸಾಮಾಗ್ರಿಗಳನ್ನು ಒಳಗೊಂಡ ಸಂಕ್ಷಿಪ್ತ ಮಾಹಿತಿಯಿರುವ ಸಾರಲೇಖವನ್ನು ಅರ್ಜಿಯೊಂದಿಗೆ ಲಗತ್ತಿಸಿ, ಅಧ್ಯಯನ ಕೇಂದ್ರದ ಇ-ಮೇಲ್‌ಗೆ ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ.


ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂತಕವಿ ಕಾಳಿದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ದೂ.ಸಂಖ್ಯೆ: 080-22113147, ಮೊ.ನಂ: 6364529319 ಅಥವಾ ಇ-ಮೇಲ್ kanakaresearchcentre@gmail.com ,  https://kanakadasaresearchcenter.karnataka.gov.in ಗೆ ಕಳಿಸಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top