ದಾವಣಗೆರೆ: ಕುಟುಂಬಗಳಲ್ಲಿ ಸಹಜವಾಗಿ ಮಾನಸಿಕ ಖಿನ್ನತೆಗಳು ಇರುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಕೆಲವು ಸಂಸ್ಕಾರಗಳಲ್ಲಿ ಮಾನವೀಯ ಮೌಲ್ಯ ಇಲ್ಲದಿರುವುದು ವಿಷಾದದ ಸಂಗತಿ. ಮಾನಸಿಕವಾಗಿ ಖಿನ್ನತೆಗಳಿಂದ ಕೆಲವು ರೋಗ ಸಹಜ. ಈ ನಿಟ್ಟಿನಲ್ಲಿ ಅನಾರೋಗ್ಯಕ್ಕೆ ದಿವ್ಯ ಔಷಧಿ, ಯೋಗ, ಧ್ಯಾನ, ಮಧುಮೇಹ ಸೇರಿದಂತೆ ವಿವಿಧ ರೋಗಗಳಿಗೆ ಇಂತಹ ನಿರ್ಮೂಲನ ಅಂದೋಲನ ಸಾರ್ವಜನಿಕರಿಗೆ ಮೂಡಿಸುತ್ತಿರುವುದು ಈ ಸಂಸ್ಥೆಯ ಸಮಾಜ ಸೇವೆ ಶ್ಲಾಘನೀಯ ಎಂದು ಗಾಯತ್ರಿ ಪರಿವಾರದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಹೇಳಿದರು.
ದಾವಣಗೆರೆಯ ಚಂಡಿಕಾಶ್ರಮದ ಓಂ ಚಂಡಿಕಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಇತ್ತೀಚಿಗೆ ನಗರದ ಕೆ.ಎಸ್.ಆರ್.ಟಿ.ಸಿ ಹೊಸ ನಿಲ್ದಾಣದ ಹಿಂಭಾಗ ಭಗತ್‌ಸಿಂಗ್ ನಗರದ ಚಂಡಿಕಾಶ್ರಮದ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಉಚಿತ ಮಧುಮೇಹ ನಿರ್ಮೂಲನ ಅಂದೋಲನ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ಅಧ್ಯಕ್ಷರೂ, ಸಂಸ್ಥಾಪಕರಾದ ಅಘೋರಿ ಚಿದಂಬರ ಯೋಗಿಯವರು ಮಾತನಾಡಿ, ಯಾವುದೇ ರೀತಿಯ ರೋಗಗಳಿಗೆ ಪರಿಹಾರ ಈ ಧ್ಯಾನ ಮತ್ತು ಕಾಸ್ಮಿಕ್ ಹೀಲಿಂಗ್ ಥೆರಪಿ, ಯೋಗ ಪ್ರಾಣಾಯಾಮಗಳಿಂದ ರೋಗಗಳು ನಿಯಂತ್ರಿಸಿ, ದೇಹ, ಮನಸ್ಸಿನ ಶಕ್ತಿಯನ್ನು ಪುನಃ ಸ್ಥಾಪನೆಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ನಗರದ ವಿಮೋಚನಾ ಕಿವುಡ, ಮೂಗರ ಸೇವಾ ಸಂಸ್ಥೆಯ ಅಧ್ಯಕ್ಷೆ ಪ್ರಭಾ ರವೀಂದ್ರ, ಕಲಾಕುಂಚ ಸಿದ್ಧವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್ ಮಾತನಾಡಿ, ಈಗಿನ ನವ ಪೀಳಿಗೆಗಳಿಗೆ ವಿದ್ಯಾಭ್ಯಾಸದೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಸನಾತನ ಧರ್ಮಗಳ ಪಾಠ ಕಲಿಸುವ ಅಗತ್ಯವಿದೆ. ಮಕ್ಕಳಲ್ಲಿ ಆಟೋಟ ಚೇಷ್ಠೆ, ಕುಚೇಷ್ಠೆ ಸಹಜ ಆದರೆ ಇಂತಹ ಸಂಸ್ಥೆಯಿಂದ ನಡೆಯುವ ಈ ಸಂಪ್ರಾದಾಯಿಕ ಪರಂಪರೆಯ ಯೋಗ, ಧ್ಯಾನ, ತರಬೇತಿ ಶಿಕ್ಷಣಕ್ಕೆ ಪರಿಪೂರ್ಣತೆ ಬರುತ್ತದೆ ಎಂದರು.
ಸಾಮೂಹಿಕವಾಗಿ ಧ್ಯಾನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭಕ್ಕೆ ದಾವಣಗೆರೆಯ ಡಿ.ಸಿ.ಎಂ. ಟೌನ್‌ಶಿಪ್ ಶಾಖೆಯ ಅಧ್ಯಕ್ಷೆ ಶಾರದಮ್ಮ ಶಿವನಪ್ಪನವರ ಸ್ವಾಗತದೊಂದಿಗೆ ಅಚ್ಚುಕಟ್ಟಾಗಿ ನಿರೂಪಿಸಿದರು, ಅರ್ಚನಾ ರೋಹಿತ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ