‘ಚಿಲಿಪಿಲಿ ಮಂಚಿಯಲಿ’ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟನೆ

Upayuktha
0


ಬಂಟ್ವಾಳ: ಶಿಕ್ಷಣ ಎಂದರೆ ಓದು, ಬರಹ, ಲೆಕ್ಕಾಚಾರ ಮಾತ್ರವಲ್ಲ. ಮಾನವತೆಯ ವಿಕಾಸವೇ ಶಿಕ್ಷಣ. ರಚನಾತ್ಮಕವಾಗಿ ಮಕ್ಕಳು ಬೆಳೆಯಲು ಪಠ್ಯೇತರ ಚಟುವಟಿಕೆ ಅಗತ್ಯ ಎಂದು ಬಂಟ್ವಾಳ ತಾಲೂಕು ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಉಮಾನಾಥ ರೈ ಮೇರಾವ್ ಅಭಿಪ್ರಾಯಪಟ್ಟಿದ್ದಾರೆ.


ಚಿಲಿಪಿಲಿ ಬಳಗ ಮಂಚಿ ಹಾಗೂ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಸಹಯೋಗದಲ್ಲಿ ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ‘ಚಿಲಿಪಿಲಿ ಮಂಚಿಯಲಿ’ ಏಳನೇ ವರ್ಷದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಮಂಚಿ ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಗೋಪಾಲ್ ಆಚಾರ್‌ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ಶಿಬಿರದ ಸದುಪಯೋಗ ಪಡೆದು ಪ್ರತಿಭೆಗೆ ವೇದಿಕೆಯಾಗಿ ಬಳಸುವಂತೆ ಕಿವಿಮಾತು ಹೇಳಿದರು.


ಬಂಟ್ವಾಳ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಮಾನಂದ ನೂಜಿಪ್ಪಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.


ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್ ರೈ ಮೇರಾವ್, ಮಂಚಿ ಲಿಯೋ ಕ್ಲಬ್ ಅಧ್ಯಕ್ಷೆ ಶೀತಲ್‌, ಚಿಲಿಪಿಲಿ ಬಳಗದ ಸಂಚಾಲಕಿ ಶಾರದಾ ಟೀಚರ್‌ ಮತ್ತಿತರರು ಹಾಜರಿದ್ದರು.


ಲಹರಿ ಬಿ. ಶೆಟ್ಟಿ ಮತ್ತು ಬಳಗದವರು ಪ್ರಾರ್ಥಿಸಿದರು. ಶಿಕ್ಷಕಿ ಕವಿತಾ ಪ್ರಶಾಂತ್‌ ಶೆಟ್ಟಿ ಸ್ವಾಗತಿಸಿದರು. ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೀತಾ ಮಂಚಿ ವಂದಿಸಿದರು. ಕೃಷ್ಣಮೋಹನ ನಿರೂಪಿಸಿದರು.


ಕಲಾ ಶಿಕ್ಷಕ ಕೆ. ಬಾಲಕೃಷ್ಣ ಶೆಟ್ಟಿ ಸಂಯೋಜನೆಯಲ್ಲಿ ಮೂರು ದಿನಗಳ ಶಿಬಿರ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ನಾ.ದಾ. ಮಣಿನಾಲ್ಕೂರು, ಭಾಸ್ಕರ್ ನೆಲ್ಯಾಡಿ, ಮೌನೇಶ್ ವಿಶ್ವಕರ್ಮ, ಮಂಜುನಾಥ್ ನಾಯ್ಕ್ ಕಿನ್ನಿಗೋಳಿ ಸಹಕರಿಸಲಿದ್ದಾರೆ. 2017ರಿಂದ ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ನಡೆಯುತ್ತಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top