ನವೀಕೃತ ಬಿಎಂಸಿಆರ್ಸಿ ಆಸ್ಪತ್ರೆ ಶೀಘ್ರವೇ ಸೇವೆಗಳ ಲೋಕಾರ್ಪಣೆ: ಡಾ.ಟಿ.ಗಂಗಾಧರಗೌಡ

Chandrashekhara Kulamarva
0



ಬಳ್ಳಾರಿ: ನಗರದಲ್ಲಿನ ಬಳ್ಳಾರಿ ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಸೆಂಟರ್ ಈ ಹಿಂದಿನ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿ 550 ಬೆಡ್ ಗಳ ಹೊಸ ಆಸ್ಪತ್ರೆ ಕಟ್ಟಡ ಬಹುತೇಕ ಬರುವ ಜೂನ್ ನಿಂದ ಆರಂಭಗೊಳ್ಳಲಿದೆ. ಸದ್ಯ 1300 ಹಾಸಿಗೆಗಳ ಆಸ್ಪತ್ರೆ ಇದೆ. ಈ ಹಿಂದೆ ಹಲವು ದಶಕಗಳ ಹಿಂದೆ ನಿರ್ಮಿಸಿದ್ದ ಕಟ್ಟಡ ಶಿಥಿಲ ಗೊಂಡಿತ್ತು. ಒಮ್ಮೆ ಪೋರ್ಟಿಕೋ ಕುಸಿದು ಓರ್ವ ಸಾವನ್ನಪ್ಪಿದ್ದ. ಅದನ್ನು ಡೆಮಾಲಿಸ್ ಮಾಡಲಾಗಿದೆ. 


ಈಗ ಇದೇ ಸ್ಥಳದಲ್ಲಿ ಕರ್ನಾಟಕ ಗಣಿ ಪರಿಸರ ಪುನರ್ ಸ್ಥಾಪನೆ ನಿಗಮ ಕೆ.ಎಂ.ಇ.ಆರ್.ಸಿಯ ನಿಧಿಯ 145 ಕೋಡಿ ರೂ ಅನುದಾನದಿಂದ 550 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿದೆ. ಐದು ಅಂತಸ್ತುಗಳ ಈ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು ಮೇ 5 ಕೊನೆಯ ದಿನವಾಗಿದೆ. ಟಂರ್ಡ ಪಡೆದವರಿಂದ ಬರುವ ಜೂನ್ ನಿಂದ ನಿರ್ಮಾಣ ಕಾಮಗಾರಿ ಆರಂಭಿಸಲಿದೆ. 


ಹೆರಿಗೆ, ಮಕ್ಕಳ ವಿಭಾಗಗಳಿಗೆ ಹೆಚ್ಚಿನ ಜನ ಚಿಕಿತ್ಸೆಗೆ ಬರುತ್ತಿರುವುದರಿಂದ ಈಗ ಹಲವೊಮ್ಮೆ ಬೆಡ್ ಗಳ ಕೊರತೆ ಎದುರಾಗುತ್ತಿದೆ. ಹಾಗಾಗಿ ಕೆಲವೊಮ್ಮೆ ನೆಲದ ಮೇಲೆ ಬೆಡ್ ಹಾಕಲಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಹೊಸ ಆಸ್ಪತ್ರೆ ನಿರ್ಮಾಣ ಪರಿಹಾರವಾಗಲಿದೆ. 


ಕೆಎಂಇಆರ್‌ಸಿ ಅನುದಾನವಿರುವುದರಿಂದ ನಮ್ಮ ಆಸ್ಪತ್ರೆ ಅಭಿವೃದ್ದಿಯ ಕಾಮಗಾರಿಗಳಿಗೆ ಅನುದನ ಕೊರತೆ ಇಲ್ಲ. ಇಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಸಧ್ಯದಲ್ಲೇ ಅವು ಸಾರ್ವಜನಿಕರ ಸೌಲಭ್ಯಕ್ಕೆ ದೊರೆಯಲಿವೆ ಎಂದು ಡಾ.ಟಿ.ಗಂಗಾಧರಗೌಡ ನಿರ್ದೆಶಕರು, ಬಿಎಂಸಿಆರ್ಸಿ ಬಳ್ಳಾರಿ ಇವರು ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top