ಸೈಬರ್ ಕ್ರೈಂ ಅಧಿಕಾರಿಗಳು, ಬ್ರೂಸ್ ಪೇಟೆ ಠಾಣೆಯ ಅಧಿಕಾರಿಗಳು ವಾಸವಿ ಸ್ವಗೃಹ ಅಂಗಡಿ ಮೇಲೆ ದಾಳಿ, 19.38 ಲಕ್ಷ ನಗದು, ರಶೀದಿ ಪುಸ್ತಕಗಳು, ಯಂತ್ರೋಪಕರಣಗಳು ವಶಕ್ಕೆ.
ಬಳ್ಳಾರಿ: ಬಳ್ಳಾರಿ ನಗರದ ಕುಂಬಾರ ಓಣಿ ಯಲ್ಲಿ ವಾಸವಿ ಸ್ವಗೃಹ ಹೋಂ ನೀಡ್ಸ್ & ಕನ್ಸಲ್ಟೆನ್ಸಿ ಮಾಲಕ ಟಿ ವಿಶ್ವನಾಥ ಜನರ ಬಳಿ ಅವರು ಖರೀದಿ ಮಾಡಿದ ಯಾವುದೇ ವಸ್ತುವಿನ ಬಿಲ್ ನೀಡಿ ಅಷ್ಟೆ ಮೊತ್ತದ ನಗದು ನೀಡಿ ಎರಡರ ಮೌಲ್ಯದ ಮೊತ್ತಕ್ಕೆ 25% ಸರ್ವಿಸ್ ಚಾರ್ಜ್ ಪಡೆದು ಕೊಂಡು ಒಂದು ತಿಂಗಳಗೆ 33% ಹೆಚ್ಚಿಗೆ ಹಣ ನೀಡುವುದಾಗಿ ಮತ್ತು 30 ಸಾವಿರದ ನ್ಯೂಟ್ರೀಷನ್ ಖರೀದಿ ಮಾಡಿದ್ರೆ ತಿಂಗಳಿಗೆ ಡಬಲ್ ಅಮೌಂಟ್ ಅನ್ನು ನೀಡುತ್ತೇನೆ ಎಂದು ಜನರ ಬಳಿ ಹಣವನ್ನು ಕಟ್ಟಿಸಿಕೊಳ್ಳುತ್ತಿ ರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಜಿಲ್ಲಾ ಎಸ್ಪಿ ಶೋಭಾ ರಾಣಿ ಅವರು ಸೈಬರ್ ಕ್ರೈಂ ಅಧಿಕಾರಿಗಳಿಗೆ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ,ಬುಧವಾರ ಅಂಗಡಿ ಮೇಲೆ ಸೈಬರ್ ಕ್ರೈಂ ಡಿವೈಎಸ್ಪಿ ಸಂತೋಷ್ ಚೌಹನ್ ಮತ್ತು ಬ್ರೂಸ್ಟೇಟ್ ರಾಣೆ ಅಧಿಕಾರಿಗಳು, ಕೋಆಪರೇಟಿವ್ ಸೊಸೈಟಿ ಅಧಿಕಾರಿಗಳು ದಾಳಿ ನಡೆಸಿ 19,38,500 ರೂ ನಗದು, ಯಂತ್ರೋಪಕರಣಗಳು ಲೆಕ್ಕ ಬುಕ್ಕಗಳನ್ನು ವಶಪಡಿಸಿಕೊಂಡಿದ್ದಾರೆ. ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ಕ್ರೈಂ ನಂಬರ್ 51/2025 ಕಲಂ 4,5,11 ಚಿಟ್ಫಂಡ್ ಯಾಕ್ಟ್ 1982 ಹಾಗೂ ಕಲಂ 316(2),318(4) ಬಿಎನ್ ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಡಾ|| ಶೋಭಾರಾಣಿ ಹಾಗೂ ಎಎಸ್ಪಿ ರವಿಕುಮಾರ್ ಮತ್ತು ಡಿವೈಎಸ್ಪಿ ಬಳ್ಳಾರಿ ನಗರ, ಹಾಗೂ ಡಿವೈಎಸ್ಪಿ (ಕ್ರೈಂ) ಸಂತೋಷ್ ಚವಾಣ್ ಮಾರ್ಗದರ್ಶನದಲ್ಲಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪಿ.ಐ. ಮಹಾಂತೇಶ್ ಹಾಗೂ ಸಿಬ್ಬಂದಿಗಳಾದ ಎಎಸ್ಐ ಶಂಕ್ರಪ್ಪ, ಅಶೋಕ್ ಮೈನಳ್ಳಿ ಸಿಬ್ಬಂದಿಗಳಾದ - ಶರ್ಮಾಸ್, ಕುಮಾರ್ ರೆಡ್ಡಿ, ಆಂಜಿನೇಯ, ಹಾಗೂ ಪಿಸಿಗಳಾದ ವಿನಯ್‌ಕುಮಾರ್, ಶಿವಕುಮಾರ್, ಸಿದ್ದೇಶ್, ನಿಸಾರ್ ಅಹಮ್ಮದ್, ರವರು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಇದರಲ್ಲಿ ಹಣ ಹಾಕಿ ಮೋಸ ಹೋದವರು ಬ್ರೂಸ್ಪೇಟ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ