ಬಳ್ಳಾರಿ: ಮೇ 1 ರಿಂದ ಆದಿಶಂಕರಾಚಾರ್ಯ ಜಯಂತಿ ಆಚರಣೆ

Upayuktha
0



ಬಳ್ಳಾರಿ: ಬಳ್ಳಾರಿಯ ಸಂಗನಕಲ್ಲು ರಸ್ತೆಯಲ್ಲಿರುವ ಶಾರದಾ ಶಂಕರ ಮಠದಲ್ಲಿ ಜಗದ್ಗುರು ಶಂಕರ ಭಗವತ್ಪಾದಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ವಿಶ್ವಾವಸುನಾಮ ಸಂವತ್ಸರದ ವೈಶಾಖ ಮಾಸ ಶುದ್ಧ ಚತುರ್ಥಿ ಹಾಗೂ ಪಂಚಮಿ ಮೇ 1 ಮತ್ತು 2 ರಂದು ಶ್ರೀ ಜಗದ್ಗುರು ಮಹಾಸ್ವಾಮಿಗಳವರ ಆದೇಶಾನುಸಾರ ವಿಜೃಂಭಣೆಯಿಂದ ಜಯಂತ್ಯುತ್ಸವ ನಡೆಸಲು ಭಕ್ತರು ಸಂಕಲ್ಪಿಸಿದ್ದಾರೆ. 


ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಶ್ರೀಮತ್ಪರಮಹಂಸೇತ್ಯಾದಿ ಸಮಸ್ತ ಬಿರುದಾವಳಿ ವಿರಾಜಮಾನರಾಗಿರುವ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಮತ್ತು ತತ್ತರ ಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪರಮಾನುಗ್ರಹದಿಂದ ಬಳ್ಳಾರಿ ಮಹಾನಗರದ ಸಂಗನಕಲ್ಲು ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಶೃಂಗೇರಿ ಶಾರದಾ ಶಂಕರ ಮಠದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಜಯಂತ್ಯುತ್ಸವ ಆಚರಿಸಲಾಗುತ್ತಿದ್ದು ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಚಾರ್ಯರ ಕೃಪೆಗೆ ಪಾತ್ರರಾಗಲು ಕೋರಿದೆ.


ಇಲ್ಲಿನ ಸತ್ಯನಾರಾಯಣ ಪೇಟೆಯ ವೆಂಕಟರಮಣ ದೇವಸ್ಥಾನದಿಂದ ಸಭಾಪತಿ ಬೀದಿಯ ಶಂಕರ ಮಠದವರೆಗೆ ಮೇ 1 ರಂದು ಸಂಜೆ 4-30ರಿಂದ ಶಂಕರ ಭಗವತ್ಪಾದರ ಭಾವಚಿತ್ರದ ಭವ್ಯ ಶೋಭಾ ಯಾತ್ರೆ ಜರುಗಲಿದೆ. ಸಂಗನಕಲ್ಲು ರಸ್ತೆಯ ಶಂಕರಮಠದಲ್ಲಿ ಎರಡು ದಿನ ಪೂಜೆ, ಅಭಿಷೇಕಾದಿಗಳು ಜರುಗಲಿವೆ. ಪ್ರವಚನ, ವೇದ ಪಾರಾಯಣ, ಸಾಮೂಹಿಕ ಭಜನೆ, ಸಾಮೂಹಿಕ ಉಪನಯನಗಳು ಜರುಗಲಿದ್ದು ಸಕಲ ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಗವತ್ಪಾದರ ಕೃಪೆಗೆ ಪಾತ್ರರಾಗುವಂತೆ ಆಡಳಿತಾಧಿಕಾರಿ ಪಿ.ಎ.ಮುರಳಿ ಅವರು ಕೋರಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter      



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top