ಶ್ರೀರಾಮ ನವಮಿ: ಸನಾತನ ಸಂಸ್ಥೆಯ ವತಿಯಿಂದ ಸಾಮೂಹಿಕ ನಾಮಜಪ ಸಂಪನ್ನ

Upayuktha
0


ಬೆಂಗಳೂರು :
ಶ್ರೀ ರಾಮನವಮಿಯ ದಿನ ಪೃಥ್ವಿಯ ಮೇಲೆ 1000ಕ್ಕೂ ಹೆಚ್ಚು ಪಟ್ಟು ಶ್ರೀರಾಮನ ತತ್ತ್ವವು ಕಾರ್ಯನಿರತವಾಗಿರುತ್ತದೆ, ಅದಕ್ಕಾಗಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ನಾಮಜಪ, ಶ್ರೀರಾಮರಕ್ಷಾಸ್ತೋತ್ರ ಮತ್ತು ಶ್ರೀರಾಮನ ಇತರ ಉಪಾಸನೆ ಮಾಡುವುದರಿಂದ ಹೆಚ್ಚು ಪ್ರಮಾಣದಲ್ಲಿ ಶ್ರೀರಾಮತತ್ತ್ವವನ್ನು ಗ್ರಹಣ ಮಾಡಲು ಸಹಾಯವಾಗುತ್ತದೆ ಮತ್ತು ಶ್ರೀರಾಮನ ರಕ್ಷಾಕವಚವು ನಿರ್ಮಾಣವಾಗುತ್ತದೆ. 


ಸದ್ಯದ ಸಂಕಟ ಕಾಲವನ್ನು ಎದುರಿಸಲು, ಆಧ್ಯಾತ್ಮಿಕ ಪ್ರಗತಿಗಾಗಿ ಹಾಗೂ ಶೀಘ್ರವೇ ರಾಮರಾಜ್ಯದ ನಿರ್ಮಾಣವಾಗಲಿ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯ ವತಿಯಿಂದ ರಾಜ್ಯಾದ್ಯಂತ ಸಾಮೂಹಿಕವಾಗಿ ದೇವಸ್ಥಾನ ಮತ್ತು ಮನೆಗಳಲ್ಲಿ ಶ್ರೀರಾಮ ನಾಮಜಪ, ಶ್ರೀರಾಮರಕ್ಷಾಸ್ತೋತ್ರ ಪಠಣವನ್ನು ಆಯೋಜಿಸಲಾಗಿತ್ತು. ಅದರಲ್ಲಿ ನೂರಾರು ರಾಮ ಭಕ್ತರು ಉಪಸ್ಥಿತರಿದ್ದು ಇದರ ಅಧ್ಯಾತ್ಮಿಕ ಲಾಭ ಪಡೆದುಕೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top