ಬಿಐಟಿಎಂ ಮತ್ತು ಕಿಷ್ಕಿಂದಾ ವಿಶ್ವವಿದ್ಯಾಲಯದಿಂದ 4ನೇ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನ ನಾಳೆಯಿಂದ

Upayuktha
0


ಬಳ್ಳಾರಿ:  ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಬಿಐಟಿಎಂ), ಕಿಷ್ಕಿಂದ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ, 2025ರ ಏಪ್ರಿಲ್ 25 ಮತ್ತು 26ರಂದು ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ಎಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಕುರಿತಂತೆ 4ನೇ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನ (ಐಸಿಡಿಸಿಸಿಇ,2025) ಆಯೋಜಿಸುತ್ತಿದೆ.

ಈ ಸಮ್ಮೇಳನವು ತಂತ್ರಜ್ಞಾನ, ಸಂವಹನ, ವಿತರಣಾ ಕಂಪ್ಯೂಟಿAಗ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಸರ್ಕ್ಯೂಟುಗಳು, ಸಂವಹನ ತಂತ್ರಜ್ಞಾನಗಳು ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನವೀನ ಸಂಶೋಧನೆ ಮತ್ತು ಅಭಿವೃದ್ಧಿಗೆ ಪೂರಕ ವಾಗಿ ಜಾಗತಿಕ ಮಟ್ಟದ ಸಂಶೋಧಕರು, ತಜ್ಞರು, ಶಿಕ್ಷಣಜ್ಞರು ಹಾಗೂ ಕೈಗಾರಿಕಾ ತಜ್ಞರನ್ನು ಒಂದೇ ವೇದಿಕೆಗೆ ತರುತ್ತದೆ.

ಸಮ್ಮೇಳನವು ಪ್ರಮುಖ ಶೋಧ ಪ್ರಬಂಧಗಳ ಪ್ರಸ್ತುತಿ, ಆಳವಾದ ತಾಂತ್ರಿಕ ಅಧಿವೇಶನಗಳು, ಕೀ-ನೋಟ್ ಉಪನ್ಯಾಸಗಳು ಹಾಗೂ ಪ್ಯಾನಲ್ ಚರ್ಚೆಗಳ ಮೂಲಕ ವೃತ್ತಿಪರ ಜಾಲಬಂಧನೆಗೆ ಹಾಗೂ ಸಂಶೋಧನಾ ಸಹಯೋಗಕ್ಕೆ ಪೂರಕವಾಗಲಿದೆ.

ಡಾ. ಉಮ್ಮಿ ಅಜೀಜಾ ರಚ್ಮಾವತಿ, ಯುನಿವರ್ಸಿಟಾಸ್ ಯಾರ್ಸಿ, ಇಂಡೋನೇಷ್ಯಾ, ಡಾ. ಲೀನ್ ಕಾರ್ಲೊ ಸ್ಯಾಂಟೋಸ್ ಟೊಲೆಂಟಿನೊ, ಫಿಲಿಪೈನ್ಸ್ ತಾಂತ್ರಿಕ ವಿಶ್ವವಿದ್ಯಾಲಯ, ಮನಿಲಾ, ಡಾ. ಅಬ್ದುಲ್ ಬಾಸಿತ್ ಎ. ದಾರೆಮ್, ನಾರ್ದರ್ನ್ ಬಾರ್ಡರ್ ಯೂನಿವರ್ಸಿಟಿ, ಸೌದಿ ಅರೇಬಿಯಾ, ಡಾ. ಶ್ರೀಕಂಠ ಪಾಲ್, ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆಸ್ರಾ, ಡಾ. ಪರಮೇಶಾ ಚಾರಿ ಬಿ.ಡಿ., ಉಪಾಧ್ಯಕ್ಷರು, ಐಇಇಇ ಬೆಂಗಳೂರು ವಿಭಾಗ ಮತ್ತು ಪ್ರಾಧ್ಯಾಪಕರು, ಎನ್.ಎಂ.ಐ.ಟಿ, ಬೆಂಗಳೂರು  ಪ್ರಮುಖ ಅತಿಥಿಗಳು ಮತ್ತು ಭಾಷಣಗಾರರಾಗಿ ಆಗಮಿಸುತ್ತಿದ್ದಾರೆ ಎಂದು ಬಿಐಟಿಎಂ ಅಧ್ಯಕ್ಷರು ಹಾಗೂ ಕಿಷ್ಕಿಂದಾ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಯಶವಂತ್ ಭೂಪಾಲ್  ತಿಳಿಸಿದ್ದಾರೆ.

ಸಮ್ಮೇಳನದ ಆಯೋಜನಾ ಸಮಿತಿಯಲ್ಲಿ ವೈ.ಜೆ. ಪೃಥ್ವಿರಾಜ್ ಭೂಪಾಲ್, ನಿರ್ದೇಶಕರು, ಬಿಐಟಿಎಂ ಹಾಗೂ ಸಹ-ಕುಲಪತಿ, ಕಿಷ್ಕಿಂದಾ ವಿಶ್ವವಿದ್ಯಾಲಯ, ಪ್ರೊ. ಟಿ.ಎನ್. ನಾಗಭೂಷಣ,ಉಪಕುಲಪತಿ, ಕಿಷ್ಕಿಂದಾ ವಿಶ್ವವಿದ್ಯಾಲಯ, ಡಾ. ಯು. ಈರಣ್ಣ, ಕುಲಸಚಿವ, ಕಿಷ್ಕಿಂದಾವಿಶ್ವವಿದ್ಯಾಲಯ, ಡಾ. ವಿ.ಸಿ. ಪಾಟೀಲ್, ಡೀನ್ (ಎಫ್.ಇ.ಟಿ.) ಹಾಗೂ ಅಧ್ಯಕ್ಷರು, ಇಸಿಇ ವಿಭಾಗ, ಡಾ.ಕೆ.ಎಂ. ಸದ್ಯೋಜಾತಾ, ಮುಖ್ಯಸ್ಥರು, ಇಸಿಇ ವಿಭಾಗ, ಬಿಐಟಿಎಂ, ಈ ಪ್ರಮುಖ ಪದಾಧಿಕಾರಿಗಳು. 

ಈ ಸಮ್ಮೇಳನವು ವಿಶ್ವದಾದ್ಯಂತ ಸಂಶೋಧನಾ ವಲಯದಲ್ಲಿ ದೊಡ್ಡದಾದ ಪ್ರತಿಸ್ಪಂದನವನ್ನು ಹುಟ್ಟುಹಾಕಿದ್ದು, 2172ಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 132 ಪ್ರಬಂಧಗಳು ತಾಂತ್ರಿಕ ಗುಣಮಟ್ಟದ ಆಧಾರದ ಮೇಲೆ ಆಯ್ಕೆಯಾಗಿ, ಪ್ರಸ್ತುತಿಗೆ ಅಣಿಯಾಗಿದೆ. ಸಮ್ಮೇಳನವು ತಾಂತ್ರಿಕ ಜ್ಞಾನ ವಿಸ್ತರಣೆಯ ಜೊತೆಗೆ, ಅನ್ವಯಾತ್ಮಕ ಸಂಶೋಧನೆ ಮತ್ತು ನಾವೀನ್ಯತೆಯತ್ತ ಒತ್ತುವರಿಯೊಂದಿಗೆ ನಡೆದುಕೊಳ್ಳಲಿದೆ ಎಂದು ಡಾ. ಅಬ್ದುಲ್ ಲತೀಫ್ ಹರೂನ್ ಪಿ.ಎಸ್., ಸಹಾಯಕ ಪ್ರಾಧ್ಯಾಪಕರು, ಇಸಿಇ ವಿಭಾಗ,ಬಿಐಟಿಎಂ ಹಾಗೂ ಪ್ರಕಾಶನ ಸಮಿತಿಯ ಸಹನಿಯೋಜಕರು, ಐಸಿಡಿಸಿಸಿಇ,2025 ತಿಳಿಸಿದ್ದಾರೆ.

ಬಿಐಟಿಎಂ ಮತ್ತು ಕಿಷ್ಕಿಂದಾ ವಿಶ್ವವಿದ್ಯಾಲಯಗಳು, ತಂತ್ರಜ್ಞಾನ ಹಾಗೂ ಸಂಶೋಧನೆಯೊಳಗಿನ ಹೊಸ ಆಯಾಮಗಳನ್ನು ಅನ್ವೇಷಿಸಲು ಉತ್ಸುಕರಾದ ಸಂಶೋಧಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಈ ಅಂತರರಾಷ್ಟ್ರೀಯ ವೇದಿಕೆಯಲ್ಲಿ, ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ಹೊಸ ಹಾದಿಗಳನ್ನು ಅನ್ವೇಷಿಸುವ ಈ ಅವಕಾಶದಲ್ಲಿ, ಎಲ್ಲ ಭಾಗವಹಿಸುವವರಿಗೂ ಸಹಕಾರ ಮತ್ತು ಬುದ್ಧಿವಂತಿಕೆಯಿಂದ ತೊಡಗಿಸಿಕೊಳ್ಳುವಂತೆ ಆತ್ಮೀಯ ಆಹ್ವಾನ ನೀಡಲಾಗಿದೆ ಎಂದು ಬಿಐಟಿಎಂ ಪ್ರಾಂಶುಪಾಲ ರಾದ ಡಾ. ಯಡವಳ್ಳಿ ಬಸವರಾಜ್ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top